ಯಡಿಯೂರಪ್ಪನವರ ಯಾವ ಜನ್ಮದಿನವನ್ನು ಕೂಡ ಆಚರಣೆ ಮಾಡದ ಶಾಸಕರುಗಳು, ಮುಖಂಡರು, ಟಿಕೆಟ್ ಆಕಾಂಕ್ಷಿಗಳು, ಈ ಭಾರಿ ಮುಗಿ ಬಿದ್ದು ಯಡಿಯೂರಪ್ಪಗೆ ತಮ್ಮ ತಮ್ಮ ಕ್ಷೇತ್ರದಲ್ಲೇ ಬರ್ತ್ ಡೇ ಪಂಕ್ಷನ್ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಶಿರಾ ಶಾಸಕ ರಾಜೇಶ್ ಗೌಡ ಭರ್ಜರಿಯಾಗಿ ಬಳಕೆ ಮಾಡಿಕೊಂಡಿದ್ದಾರೆ.
ತುಮಕೂರು ಫೆ.27 : 2023ರ ವಿಧಾನಸಭೆ ಚುನವಣೆಯ ಅಬ್ಬರದ ಪ್ರಚಾರ ಕಾವೇರಿದೆ. ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸುತ್ತಾಟವೂ ಕೂಡ ಜೋರಾಗಿದೆ.
ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರ ಮನೆಯಲ್ಲಿ ಜರುಗುವ ಸಣ್ಣ ಸಣ್ಣ ಸಮಾರಂಭಗಳಿಗೆ ಟಿಕೆಟ್ ಆಕಾಂಕ್ಷಿಗಳು ಎಡತಾಕುತ್ತಿದ್ದಾರೆ. ಈ ಮಧ್ಯೆ ಇಂದು ನಡೆದ ಮಾಜಿ ಸಿಎಂ ಯಡಿಯೂರಪ್ಪ ನವರ ಜನ್ಮುಮದಿನದವನ್ನು ಬಿಜೆಪಿ ಮುಖಂಡರು ಸಂಭ್ರಮದಿಂದ ಆಚರಿಸುವ ಮೂಲಕ ಬರ್ತ್ ಡೇ ನೆಪದಲ್ಲಿ ಮತಗಳಿಗೆ ಮುಂದಾಗಿದ್ದಾರೆ.
ಸವಲತ್ತುಗಳಿಂದ ಆರ್ಥಿಕವಾಗಿ ಸಬಲರಾಗಬೇಕು : ಸಚಿವ ಎಸ್ ಅಂಗಾರ
ಯಡಿಯೂರಪ್ಪನವರ ಯಾವ ಜನ್ಮದಿನವನ್ನು ಕೂಡ ಆಚರಣೆ ಮಾಡದ ಶಾಸಕರುಗಳು, ಮುಖಂಡರು, ಟಿಕೆಟ್ ಆಕಾಂಕ್ಷಿಗಳು, ಈ ಭಾರಿ ಮುಗಿ ಬಿದ್ದು ಯಡಿಯೂರಪ್ಪಗೆ ತಮ್ಮ ತಮ್ಮ ಕ್ಷೇತ್ರದಲ್ಲೇ ಬರ್ತ್ ಡೇ ಪಂಕ್ಷನ್ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಕೆ ಮಾಡಿಕೊಂಡಿದ್ದಾರೆ.
ಯಡಿಯೂರಪ್ಪ ಅವರ ಬರ್ತಡೇ ಶಿರಾದಲ್ಲಿ ಅದ್ದೂರಿಯಾಗಿ ಆಚರಿಸಲಾಯ್ತು. ಮಾಜಿ ಸಿಎಂ ಯಡಿಯೂರಪ್ಪ(BS Yadiyurappa) ಬರ್ತ್ ಡೇ(Birthday)ಗೆ ಹಳ್ಳಿ ಸೊಗಡಿನ ಟಚ್ ಕೊಟ್ಟ ಶಿರಾ ಕ್ಷೇತ್ರದ ಬಿಜೆಪಿ ಶಾಸಕ ರಾಜೇಶ್ ಗೌಡ(MLA Rajesh gowda) ಭರ್ಜರಿ ಎತ್ತಿನಗಾಡಿ ಸವಾರಿ ನಡೆಸಿದ್ದಾರೆ. ಬಲೂನ್, ಬಾಳೇ ಕಂದಿನ ಸಿಂಗಾರದ ಎತ್ತಿನಗಾಡಿಯಲ್ಲಿ, ಕೊಂಬು ಕಹಳೆ, ಅರೆ ವಾದ್ಯ ಮೇಳೈಸಿದ ಶೃಂಗಾರದಲ್ಲಿ ರೋಡ್ ಶೋ ನಡೆಸಿ ಮತಭೇಟಿಯಾಡಿದ್ದಾರೆ.
ಶಿಗ್ಗಾವಿ ಜನರು ದೈವಭಕ್ತರು, ಸಜ್ಜನರು: ಸಿಎಂ ಬಸವರಾಜ ಬೊಮ್ಮಾಯಿ
ತುಮಕೂರು(Tumakuru) ಜಿಲ್ಲೆ ಶಿರಾ ತಾಲ್ಲೂಕಿನ ಮದ್ದಾಕ್ನಹಳ್ಳಿ ಗೊಲ್ಲರಹಟ್ಟಿಯಲ್ಲಿ ಬರ್ತ್ ಡೇ ಮಾಡಲಾಗಿದೆ. ಯಡಿಯೂರಪ್ಪ ಹುಟ್ಟು ಹಬ್ಬ ಆಚರಿಸುತ್ತಲೇ ಮತ ಪ್ರಚಾರ ನಡೆಸಿದ ರಾಜೇಶ್ ಗೌಡ ಬಿ.ಎಸ್.ವೈ.ಫೋಟೊಗೆ ಪುಷ್ಪನಮನ ಸಲ್ಲಿಸಿ, ಕಾರ್ಯಕರ್ತರ ಜೊತೆಗೆ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.