ಚುನಾವಣೆ ಹಿನ್ನಲೆ ಸಚಿವ ಆನಂದ ಸಿಂಗ್ ಮಾಸ್ಟರ್ ಪ್ಲಾನ್!

By Ravi Janekal  |  First Published Feb 28, 2023, 12:04 AM IST

ಚುನಾವಣೆ ಹೊಸ್ತಿಲಲ್ಲಿ ಜನರ ಮನವೊಲಿಸಲು ಜನಪ್ರತಿನಿಧಿಗಳು ಹರಸಾಹಸ ಮಾಡುತ್ತಿರೋ ಬೆನ್ನಲ್ಲೇ, ಸಚಿವ ಆನಂದ ಸಿಂಗ್ ತಮ್ಮ ಸ್ವಕ್ಷೇತ್ರಕ್ಕೆ ಭರ್ಜರಿ ಅನುದಾನ ತರುವ ಮೂಲಕ ವಿರೋಧಿಗಳಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.  


ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಹೊಸಪೇಟೆ (ಫೆ.27) : ಚುನಾವಣೆ ಹೊಸ್ತಿಲಲ್ಲಿ ಜನರ ಮನವೊಲಿಸಲು ಜನಪ್ರತಿನಿಧಿಗಳು ಹರಸಾಹಸ ಮಾಡುತ್ತಿರೋ ಬೆನ್ನಲ್ಲೇ, ಸಚಿವ ಆನಂದ ಸಿಂಗ್ ತಮ್ಮ ಸ್ವಕ್ಷೇತ್ರಕ್ಕೆ ಭರ್ಜರಿ ಅನುದಾನ ತರುವ ಮೂಲಕ ವಿರೋಧಿಗಳಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.  

Tap to resize

Latest Videos

undefined

ಅಭಿವೃದ್ಧಿ ಅನ್ನೋದು ಮಾತಿನಲ್ಲಿ ಅಲ್ಲ ಕೃತಿಯಲ್ಲಿ ಮಾಡಿದ್ದೇವೆ ಎಂದು ಸಾಬೀತು ಮಾಡುವ ಮೂಲಕ ಚುನಾವಣೆ ರಣಕಹಳೆ ಮೊಳಗಿಸಿದ್ದಾರೆ. ಕೇವಲ ನನ್ನ ಕ್ಷೇತ್ರ ಮಾತ್ರವಲ್ಲದೇ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುವ ಭರವಸೆ ನೀಡಿರೋ ಆನಂದ ಸಿಂಗ್(Minister Anand singh), ನೂತನ ಜಿಲ್ಲಾ ಕೇಂದ್ರವಾಗಿರುವ  ಹೊಸಪೇಟೆ ಕ್ಷೇತ್ರ(Hospet constituency)ದಲ್ಲಿ ಮೆಡಿಕಲ್, ನರ್ಸಿಂಗ್, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಸಣ್ಣ ಕೈಗಾರಿಕೆ ಕ್ಲಸ್ಟರ್ ಸ್ಥಾಪನೆ ಮಾಡುವ ಭರವಸೆ ನೀಡಿದ್ದಾರೆ.   

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿದ್ದು ಬಿಎಸ್‌ವೈ: ಅನ್ನ ಹಳಸಿತ್ತು; ನಾಯಿ ಕಾದಿತ್ತು ಎಂದ ಸಿದ್ದರಾಮಯ್ಯ

ಕೋಟಿ ಕೋಟಿ ಅನುದಾನ ಅಭಿವೃದ್ಧಿ ವರದಿ ವಾಚನ

ವಿವಿಧ ಇಲಾಖೆಗಳ ಯೋಜನೆ ಅಡಿಯಲ್ಲಿ ಕೈಗೊಳ್ಳಲಾದ 294.04 ಕೋಟಿ ರೂ. ಮೊತ್ತದ ಒಟ್ಟು 241 ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ(Developments work inauguration) ಮತ್ತು ಶಂಕುಸ್ಥಾಪನೆ  ಉದ್ಘಾಟನೆ ಮಾಡಿ ಮಾತನಾಡಿದ  ಆನಂದ ಸಿಂಗ್,  ಸಮ್ಮಿಶ್ರ ಸರ್ಕಾರ, ಕೋವಿಡ್ ಸಂದರ್ಭ ಹೊರತುಪಡಿಸಿ ಉಳಿದ 18 ತಿಂಗಳ ಅವಧಿಯಲ್ಲಿಯೇ ವಿಜಯನಗರ ಜಿಲ್ಲೆ ಸ್ಥಾಪನೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಸಾವಿರ ಕೋಟಿ  ಅನುದಾನವನ್ನು ತರುವ ಮೂಲಕ ಜಿಲ್ಲೆಯ ಮತ್ತು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದೇ ಎಂದರು. 

ಆರ್ಥಿಕ ಇಲಾಖೆ ಅನುಮೋದನೆ ಸಿಕ್ಕ ಬಳಿಕ ನೂತನ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಕ್ಕಿತು. ಗ್ರಾಮೀಣ ಪ್ರದೇಶಗಳಲ್ಲಿ ಸಹ ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ, ಕೃಷಿಗೆ ಏತನೀರಾವರಿ ಹಾಗೂ ವಿವಿಧ ಅಗತ್ಯ ಸೌಲಭ್ಯಗಳನ್ನು ಆಯಾ ಇಲಾಖೆಗಳ ವತಿಯಿಂದ ನೀಡಲಾಗುತ್ತಿದೆ ಎಂದರು. ದೇಶವನ್ನು ಸುಭದ್ರದೆಡೆಗೆ ಕೊಂಡೊಯ್ಯಲು ಕೈಜೋಡಿಸುವುದು ಪ್ರತಿ ಪ್ರಜೆಯ ಕರ್ತವ್ಯವಾಗಿದ್ದು, ಸರ್ಕಾರದ ಜೊತೆಗೆ ಪ್ರಜೆಗಳು ಸಹ ಕರ್ತವ್ಯಪಾಲರಾಗಬೆಕು ಎಂದರು.

ಆನಂದ ಸಿಂಗ್ ಗುಣಗಾನ ಮಾಡಿದ ಶ್ರೀರಾಮುಲು

ಈಗಾಗಲೇ ನಾಲ್ಕು ಬಾರಿ ಗೆದ್ದಿರೋ ಆನಂದ ಸಿಂಗ್ ಅಭಿವೃದ್ಧಿ ಮಾಡೋದ್ರಲ್ಲಿ ಸದಾ‌ ಮುಂದೆ ಇರುತ್ತಾರೆ. ಹೀಗಾಗಿ ಐದನೇ ಬಾರಿ ಅವರನ್ನು ಗೆಲ್ಲಿಸಿ ಎಂದು ಸಚಿವ ಶ್ರೀರಾಮುಲು(Minister Sriramulu) ಹೇಳಿದರು.  ಆನಂದ ಸಿಂಗ್ ಬಂದ ಮೇಲೆ ಹೊಸಪೇಟೆ ಹೇಗಾಗಿದೆ ಮುಂಚೆ ಹೇಗಿತ್ತು ಅನ್ನೋದನ್ನು ನೋಡಿ ಮತದಾನ ಮಾಡಿ ಎಂದು ಆನಂದ ಸಿಂಗ್ ಮಾಡಿರೋ ಅಭಿವೃದ್ಧಿ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು.

ನೂತನ ಜಿಲ್ಲೆಯ ಅಧಿಕಾರಿಗಳು ಮತ್ತು ಆನಂದ ಸಿಂಗ್ ಕ್ರಿಯಾಶೀಲರಾಗಿ ಸಮಗ್ರ ಅಭಿವೃದ್ಧಿ ಕೈಗೊಂಡ ಕಾರಣ ಕಾಮಗಾರಿಗಳು ವೇಗದಲ್ಲಿ ಸಾಗುತ್ತಿವೆ.  ಪ್ರಧಾನ ಮಂತ್ರಿಗಳು ಇಂದು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ, ಬೆಳಗಾವಿಯಲ್ಲಿ ರೈಲ್ವೆ ಕಾಮಗಾರಿಗಳ ಉದ್ಘಾಟನೆ ಕೈಗೊಂಡಿದ್ದಾರೆ, ಕಾಕತಾಳೀಯವಾಗಿ ವಿಜಯನಗರ ಕ್ಷೇತ್ರದಲ್ಲಿ ಸಹ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆಯುತ್ತಿರುವುದು ವಿಶೇಷವಾಗಿದೆ ಎಂದರು. 

ಶಿಗ್ಗಾವಿ ಜನರು ದೈವಭಕ್ತರು, ಸಜ್ಜನರು: ಸಿಎಂ ಬಸವರಾಜ ಬೊಮ್ಮಾಯಿ

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ನವಕರ್ನಾಟಕವನ್ನು ನಿರ್ಮಿಸುವ ಉದ್ದೇಶದಿಂದ ಬಜೆಟ್ ಮೂಲಕ ವಿವಿಧ ಯೋಜನೆಗಳನ್ನು ಒದಗಿಸಿ, ಆರ್ಥಿಕತೆ ಸೋರಿಕೆಯಾಗದಂತೆ ಮತ್ತು ಹೊರೆಯಾಗದ ಜನಪರ ಬಜೆಟ್ ಮಂಡಿಸಿದ್ದಾರೆ. ನೂತನ ಜಿಲ್ಲೆಗೆ ಸಾವಿರ ಕೋಟಿ ರೂ. ಕಾಯ್ದಿರಿಸಿರುವ ಮುಖ್ಯಮಂತ್ರಿಗಳು  ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸಮಾಂತರ ಜಲಾಶಯ ಯೋಜನೆ ರೂಪಿಸಿದ್ದಾರೆ ಎಂದರು.

click me!