ಶಿಗ್ಗಾಂವಿಯಲ್ಲಿ ಯಾಸೀರ್ ಖಾನ್‌ ಪಠಾಣ್ ಗೆದ್ದಿದ್ದೇಗೆ? ಭರತ್ ಬೊಮ್ಮಾಯಿ ಸೋತಿದ್ದೇಕೆ? ಇಲ್ಲಿವೆ ಅಸಲಿ ಕಾರಣ..

By Sathish Kumar KH  |  First Published Nov 23, 2024, 6:51 PM IST

ಶಿಗ್ಗಾವಿ ಉಪಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಸೋಲಿಗೆ ಕಾರಣಗಳನ್ನು ಈ ಲೇಖನ ವಿಶ್ಲೇಷಿಸುತ್ತದೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲುವಿಗೆ ಕಾರಣವಾದ ಅಂಶಗಳನ್ನು ಮತ್ತು ಬಿಜೆಪಿಯ ತೀವ್ರ ತಪ್ಪುಗಳನ್ನು ಚರ್ಚಿಸಲಾಗಿದೆ.


ಹಾವೇರಿ (ನ.23): ನಮ್ಮಜ್ಜನೂ ಮುಖ್ಯಮಂತ್ರಿ, ನಮ್ಮಪ್ಪನೂ ಮುಖ್ಯಮಂತ್ರಿ ಆಗಿ ಅಧಿಕಾರ ಮಾಡಿದ್ದಾರೆ. ನನ್ನನ್ನು ಜನ ಕೈ-ಬಿಡಲ್ಲ ಎಂದು ಭರವಸೆಯಿಂದ ರಾಜಕೀಯಕ್ಕೆ ಎಂಟ್ರಿಕೊಟ್ಟ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರನ್ನು ಜನರು ಸೋಲಿಸಿದ್ದಾರೆ. ಗೆಲುವಿನ ನಿರೀಕ್ಷೆಯನ್ನೂ ಇಟ್ಟುಕೊಳ್ಳದ ಯಾಸೀರ್ ಖಾನ್ ಪಠಾಣ್ ಬರೋಬ್ಬರು 1 ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸಿ ಗೆಲವು ಸಾಧಿಸಿದ್ದಾರೆ. ಆದರೆ, ಇಲ್ಲಿ ಕಾಂಗ್ರೆಸ್ ಗೆಲುವಿಗೆ ಹಾಗೂ ಬಿಜೆಪಿ ಸೋಲಿಗೆ ಕಾರಣಗಳು ಇಲ್ಲಿವೆ ನೋಡಿ..

ಯಾಸೀರ್ ಖಾನ್ ಪಠಾಣ್ ಗೆಲುವಿಗೆ ಕಾರಣಗಳು
1) ಕಾಂಗ್ರೆಸ್ ಕೈ ಹಿಡಿದ ಮತದಾರರು
ಅ-ಲ್ಪಸಂಖ್ಯಾತ 
ಹಿಂ-ದುಳಿದ ವರ್ಗ 
ದ-ಲಿತ 

Latest Videos

undefined

2) ಸಚಿವ ಸತೀಶ್ ಜಾರಕಿಹೊಳಿ ತಂಡ ಹೆಣೆದ ಚಕ್ರವ್ಯೂಹ
3) ಲಿಂಗಾಯತ ಮತದಾರಲ್ಲಿ ಕೆಲವು ಪ್ರಮಾಣದ ಮತದಾರರು ಕಾಂಗ್ರೆಸ್ ಕಡೆ ವಾಲಿರುವುದು
4) ಪ್ರತಿ ಸಲ ಬೊಮ್ಮಾಯಿ ಕೈ ಹಿಡಿಯುತ್ತಿದ್ದ 10 ಸಾವಿರ ಮುಸ್ಲಿಂ ಮತದಾರರು ಈ ಬಾರಿ ಕಾಂಗ್ರೆಸ್ ಕಡೆ ವಾಲಿರುವುದು
5) ಬಿಜೆಪಿಗೆ ಲಾಭ ಮಾಡಿಕೊಡಬೇಕಿದ್ದ ವಕ್ಪ್ ಅಸ್ತ್ರ    ಮುಸಲ್ಮಾನ ಮತದಾರರನ್ನು ಒಗ್ಗೂಡುವಂತೆ ಮಾಡಿದು. ಇದು ಕಾಂಗ್ರೆಸ್ ಗೆ ಬಹುದೊಡ್ಡ ಮುನ್ನಡೆ ತಂದುಕೊಟ್ಟಿತು.

ಇದನ್ನೂ ಓದಿ: ಸುಳ್ಳಾಯ್ತು ಎಕ್ಸಿಟ್ ಪೋಲ್ ಭವಿಷ್ಯ; ಮೂರಕ್ಕೆ ಮೂರು ಕ್ಷೇತ್ರ ಗೆದ್ದ ಕಾಂಗ್ರೆಸ್ ಗ್ಯಾರಂಟಿ!

6) ವಕ್ಪ್ ವಿವಾದದಲ್ಲಿ ಸಿಎಂ ಸಿದ್ದರಾಮಯ್ಯ ಮೇಲೆ ಷಡ್ಯಂತ್ರ ನಡೆದಿದೆ ಎಂಬ ಅನುಕಂಪದಿಂದ ಕುರುಬ ಮತದಾರರು ಪಠಾಣ್ ಕ್ಯಾಂಡಿಡೇಟ್ ಅಂತ ನೋಡದೇ ಸಿದ್ದರಾಮಯ್ಯ ಮುಖ ನೋಡಿಕೊಂಡು ಬಟನ್ ಒತ್ತಿದರು
7) ಖಾದ್ರಿ ಮನವೊಲಿಕೆ ಮಾಡಿ ನಾಮಪತ್ರ ವಾಪಾಸ್ ತೆಗೆಸಿ ಪಠಾಣ್ ಜೊತೆ ಜೋಡು ಮಾಡಿಸಿ ಕ್ಯಾಂಪೇನ್ ಮಾಡಿದ್ದು
8) ಖಾದ್ರಿ ಕೈ ಕೊಡಬಹುದು ಎಂಬ ಆತಂಕದ ಹಿನ್ನಲೆ ಮತದಾನದ ಕೊನೆ ಕ್ಷಣದ ವರೆಗೂ‌ ಖಾದ್ರಿ ಮೇಲೆ ಕಣ್ಣಿಟ್ಟಿದ್ದು
9) ಶಿಗ್ಗಾವಿ ಕ್ಷೇತ್ರದಲ್ಲಿ ಎಲ್ಲಿಯೂ ರಾಜೀ ಪಾಲಿಟಿಕ್ಸ್ ನಡೆಯದಂತೆ ಸಚಿವ ಸತೀಶ್ ಜಾರಕಿಹೊಳಿ ಟೀಂ ಕಣ್ಣಿಟ್ಟು ಎಚ್ಚರ ವಹಿಸಿದ್ದು
10) ಲಿಂಗಾಯತ ಪಂಚಮಸಾಲಿ ಮತದಾರರಲ್ಲಿ ಕೆಲ ಮತದಾರರು ಕೈ ಕಡೆ ವಾಲಿದ್ದು

ಭರತ್ ಬೊಮ್ಮಾಯಿ ಸೋಲಿಗೆ ಕಾರಣ ಗಳೇನು?
1) ಆಡಳಿತಾರೂಡ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರ ದಂಡೇ ಶಿಗ್ಗಾವಿಯಲ್ಲಿ ಬೀಡು‌ ಬಿಟ್ಟು  ಎಲೆಕ್ಷನ್ ಮಾಡಿದ್ದು
2) ಕಾಂಗ್ರೆಸ್ ಪ್ರಯೋಗಿಸಿದ ಅಹಿಂದ ಅಸ್ತ್ರದ ಮುಂದೆ ಬಿಜೆಪಿಯ ವಕ್ಪ್ ಅಸ್ತ, ಹಿಂದುತ್ವ ಅಸ್ತ್ರಗಳೆಲ್ಲಾ ವಿಫಲವಾದವು
3) ಕುರುಬ, ಲಂಬಾಣಿ , ಮರಾಠಾ ಮತಗಳು ಬಿಜೆಪಿ ನಿರೀಕ್ಷಿಸಿದಷ್ಟು ಕೈ ಹಿಡಿಯಲಿಲ್ಲ
4) ಬಿಜೆಪಿ ಬಹುಪಾಲು‌ ನಂಬಿಕೊಂಡಿದ್ದ ಲಿಂಗಾಯತರ ಮತಗಳು‌ ಚದುರಿದೆ, ಇದು‌ ಕೈ ಪಡೆಗೆ ಪ್ಲಸ್ ಆಗಿದೆ
5) ಪ್ರತಿ ಸಲ ಅಷ್ಟೋ ಇಷ್ಟೋ  ಕೈ ಹಿಡಿಯುತ್ತಿದ್ದ ಕೆಲ ಮುಸಲ್ಮಾನ ಮತದಾರರೂ‌ ಕೂಡಾ ಬಿಜೆಪಿಗೆ ಕೈ ಕೊಟ್ಟರು.

ಇದನ್ನೂ ಓದಿ: ಚನ್ನಪಟ್ಟಣದ ಸೋಲಿಗೆ 'ಆ ಒಂದು ಸಮುದಾಯ'ವನ್ನು ದೂರಿದ ನಿಖಿಲ್ ಕುಮಾರಸ್ವಾಮಿ..

6) ಸಚಿವ ಸತೀಶ್ ಜಾರಕಿಹೊಳಿ ಟೀಂ ಚಕ್ರವ್ಯೂಹ ಬೇಧಿಸಲು ಭರತ್ ವಿಫಲ
7) ಬಿಜೆಪಿ ಟೀಂ ಇಡೀ ಉಪಚುನಾವಣೆ ಬೊಮ್ಮಾಯಿಯವರ ಮೇಲೆಯೇ ಬಿಟ್ಟು ಮೈ‌ಮರೆತಿದ್ದು
8) ಬೊಮ್ಮಾಯಿ ಫ್ಯಾಮಿಲಿ ಬಿಟ್ಟರೆ ಮತ್ಯಾರೂ ಪ್ರಬಲವಾಗಿ ಶಿಗ್ಗಾವಿಯಲ್ಲಿ ತೊಡಗಿಸಿಕೊಳ್ಳಲಿಲ್ಲ
9) ಯತ್ನಾಳ್, ಪ್ರಹ್ಲಾದ್ ಜೋಶಿ, ಪ್ರತಾಪ್ ಸಿಂಹ, ಸಿ.ಟಿ ರವಿ ಹೆಗಲ ಮೇಲಿಟ್ಟು ಬೊಮ್ಮಾಯಿ ಪ್ರಯೋಗಿಸಿದ ವಕ್ಪ್ ಅಸ್ತ್ರ  ಗುರಿ ತಪ್ಪಿತು

click me!