ಬೈ ಎಲೆಕ್ಷನ್ ರಿಸಲ್ಟ್: ಕಾಂಗ್ರೆಸ್ ಆಯ್ತು, ಈಗ ಜೆಡಿಎಸ್‌ನಲ್ಲೂ ರಾಜೀನಾಮೆ ಪರ್ವ

By Suvarna NewsFirst Published Dec 11, 2019, 10:13 PM IST
Highlights

ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ನೈತಿಕ ಹೊಣೆಹೊತ್ತು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀನಾಮೆ ನಿಡಿದ್ದಾರೆ. ಆದ್ರೆ, ಇದೀಗ ಜೆಡಿಎಸ್ ನಲ್ಲೂ ರಾಜೀನಾಮೆ ಪರ್ವ ಶುರುವಾಗಿದೆ.

ಬೆಂಗಳೂರು, [ಡಿ.11] : ಉಪಚುನಾವಣೆಯಲ್ಲಿ ಜೆಡಿಎಸ್​ಗೆ ಒಂದೂ ಸ್ಥಾನ ಲಭಿಸದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶರಣಗೌಡ ಕಂದಕೂರು ರಾಜೀನಾಮೆ ನೀಡಿದ್ದಾರೆ. 

ರಾಜೀನಾಮೆ ಪತ್ರವನ್ನು ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ.ದೇವೇಗೌಡರಿಗೆ ರವಾನಿಸಿದ್ದು ಜೆಡಿಎಸ್​ನ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಆಪರೇಷನ್ ಕಮಲ ಆಡಿಯೋ ಪ್ರಕರಣ, DYSP ನೇತೃತ್ವದಲ್ಲಿ ತನಿಖೆ ಶುರು

 ಕುಮಾರಸ್ವಾಮಿ ಸಿಎಂ ಆದ ಅವಧಿಯಲ್ಲಿ ಬಿಎಸ್ ವೈ  ನಡೆಸಿದ್ದ ಎನ್ನಲಾದ ಆಪರೇಷನ್ ಕಮಲದ ಆಡಿಯೋವನ್ನು ಇದೇ ಶರಣಗೌಡ ಕಂದಕೂರು ಬಯಲು ಮಾಡಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು.

ಆಪರೇಷನ್ ಕಮಲದ ಅಡಿಯೋ ಬಿಡುಗಡೆ ಮಾಡಿ ಕುಮಾರಸ್ವಾಮಿ ಅವರು ಅಚ್ಚುಮೆಚ್ಚಿನ ಯುವ ನಾಯಕರಾಗಿದ್ದರು.  ಈ ಹಿನ್ನೆಲೆಯಲ್ಲಿ ಶರಣಗೌಡ ಕಂದಕೂರ್ ಗೆ ಜೆಡಿಎಸ್ ಯುವ ಘಟಕದ  ರಾಜ್ಯ  ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು.

ಅಂದು ಬಿಎಸ್ ವೈ ಅವರ ಸಿಎಂ ಆಗುವ ಕನಸು ಗುರುಮಿಟ್ಕಲ್  ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಪುತ್ರ ಶರಣಗೌಡ ಕಂದಕೂರು ನುಚ್ಚುನೂರು ಮಾಡಿದ್ದರು.  ಈ ಘಟನೆ ರಾಜಕೀಯ ಕೋಲಾಹಲ ಎಬ್ಬಿಸಿ ಅಧಿವೇಶನದಲ್ಲಿ ಗಲಾಟೆಗೆ ಕಾರಣವಾಗಿ ನಂತರ ಪ್ರಕರಣ ಕೂಡ ದಾಖಲಾಗಿತ್ತು.

ಬಿಎಸ್ ವೈ ಅವರು  ಗುರುಮಿಟ್ಕಲ್ ಶಾಸಕ ನಾಗನಗೌಡ ಕಂದಕೂರು ಅವರನ್ನು ಆಪರೇಷನ್ ಕಮಲ ಮಾಡಲು  ಶರಣಗೌಡ ಕಂದಕೂರು ಮೂಲಕ ಪ್ರಯತ್ನ ಮಾಡಿದ್ದರು. ಈ ಪ್ರಕರಣ ಕಲಬುರಗಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.

click me!