ಉಪಕದನ ಗೆದ್ದ ಬಿಎಸ್‌ವೈಗೆ ಕೇಂದ್ರದಿಂದ ಅದ್ದೂರಿ ಗಿಫ್ಟ್, ಎದ್ದು ನಿಲ್ಲಲೇಬೇಕು!

By Suvarna News  |  First Published Dec 11, 2019, 8:34 PM IST

ಉಪಚುನಾವಣಾ ಸಮರ ಗೆದ್ದ ವೀರ ಬಿಎಸ್ ವೈಗೆ ಕೇಂಧ್ರದ ಅಭಿನಂದನೆ/ ಆರು ತಿಂಗಳ ಸಂಭ್ರಮದಲ್ಲಿ ಕರ್ನಾಟಕದ ಉಲ್ಲೇಖ/ ಎಲ್ಲರಿಂದಲೂ ಮನ್ನಣೆ ಪಡೆದುಕೊಂಡ ಯಡಿಯೂರಪ್ಪ


ನವದೆಹಲಿ(ಡಿ. 11)  ಉಪಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿ ಇರುವ ಬಿಎಸ್ ಯಡಿಯೂರಪ್ಪ ಅವರನ್ನು ಕೇಂದ್ರದ ಬಿಜೆಪಿ ಹೈಕಮಾಂಡ್ ಮೊದಲ ಸಾರಿಗೆ ಎಂಬಂತೆ ಅಭಿನಂದಿಸಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ  ಸಂಸದರಿಂದ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಗೌರವ ಸಂದಿದೆ.  ಇದನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರದಲ್ಲಿ  ಯಡಿಯೂರಪ್ಪಗೆ ಗೌರವ ಸಂದಿದೆ.

Tap to resize

Latest Videos

ಕೆಆರ್ ಪೇಟೆ ಕೋಟೆ ಕಮಲ ವಶ ಮಾಡಿದ ವಿಜಯೇಂದ್ರಗೆ ಜೈ ಅಂದ ಹೈಕಮಾಂಡ್

ಪ್ರಧಾನಿ ಮೋದಿ ತಮ್ಮ ಭಾಷಣ ಆರಂಭಕ್ಕೂ ಮುನ್ನ ಕರ್ನಾಟಕದ ಉಪಚುನಾವಣಾ ವಿಜಯದ ಉಲ್ಲೇಖ ಮಾಡಿ  ಎಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕು ಕೇಳಿಕೊಂಡರು ಎಂದು ಜೋಶಿ ತಿಳಿಸಿದ್ದಾರೆ. ಅದರಂತೆ ಎಲ್ಲ ಸಂಸದರು ಎದ್ದು ನಿಂತು ಗೌರವ ಸಲ್ಲಿಕೆ ಮಾಡಿದರು.  

ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಿತ್ತು. 15ರ ಪೈಕಿ 12 ಸ್ಥಾನಗಳ್ಲಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಸರ್ಕಾರ ಭದ್ರ ಮಾಡಿಕೊಂಡಿತ್ತು.

click me!