ಚುನಾವಣೆಗೂ ಮುನ್ನವೇ ಶರದ್ ಪವಾರ್ ಅಚ್ಚರಿ ಹೇಳಿಕೆ; NCP ಲೀಡರ್ಸ್, ಕಾರ್ಯಕರ್ತರು ಫುಲ್ ಶಾಕ್

By Mahmad Rafik  |  First Published Nov 5, 2024, 6:58 PM IST

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಅವರು ನಿವೃತ್ತಿಗೆ ಕಾರಣವೇನು ಮತ್ತು ಮುಂದಿನ ಯೋಜನೆ ಏನು ಎಂಬುದನ್ನು ತಿಳಿಯಿರಿ.


ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ 2024ಕ್ಕೂ ಮುನ್ನವೇ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಮಹಾರಾಷ್ಟ್ರ ರಾಜಕೀಯ ಅಂಗಳದಲ್ಲಿ ಸಂಚಲನ ಸೃಷ್ಟಿಸಿರುವ ಶರದ್ ಪವಾರ್ ಈ ಹೇಳಿಕೆ, ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಇಂದು ಮೊಮ್ಮಗ ಯುಗೇಂದ್ರ ಪವಾರ್ ಪರ  ಬಾರಾಮತಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದರು.  ಪ್ರಚಾರದ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಚುನಾವಣೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಘೋಷಿಸಿದರು. ಸದ್ಯ ಶರದ್ ಪವಾರ ರಾಜ್ಯಸಭಾ ಸದಸ್ಯರಾಗಿದ್ದು, ಅಧಿಕಾರದ ಅವಧಿಯ ಮುಕ್ತಾಯ ಸನೀಹಕ್ಕೆ ಬಂದಿದೆ. 

ನಾನು ಇದುವರೆಗೆ 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ರಾಜ್ಯಸಭಾ ಅವಧಿ ಮುಗಿದ ನಂತರ ನನ್ನ ಸಂಸದೀಯ ಸ್ಥಾನವನ್ನೂ ತ್ಯಜಿಸಬೇಕೆಂದು ಯೋಚಿಸುತ್ತಿದ್ದೇನೆ. ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ಹೊಸ ಪೀಳಿಗೆಗೆ ಜವಾಬ್ದಾರಿ ವಹಿಸುವ ಸಮಯ ಬಂದಿದೆ ಎಂದು ಶದರ್ ಪವಾರ್ ಸಮಾವೇಶದಲ್ಲಿ ಹೇಳಿದರು. 

Tap to resize

Latest Videos

undefined

ಮಹಾರಾಷ್ಟ್ರದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಶರದ್ ಪವಾರ್, ಜನಸೇವೆಗೆ ಯಾವುದೇ ಹುದ್ದೆಯ ಅವಶ್ಯಕತೆ ಇಲ್ಲ. ಚುನಾವಣಾ ರಾಜಕೀಯದಿಂದ ಮಾತ್ರ ಹಿಂದೆ ಸರಿಯುತ್ತಿರುವೆ. ಭವಿಷ್ಯದಲ್ಲಿಯೂ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುವುದಿಲ್ಲ. ನನ್ನ ರಾಜ್ಯಸಭಾ ಅವಧಿ ಇನ್ನೂ ಒಂದೂವರೆ ವರ್ಷ ಇದೆ.  ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶ ಹಾಗೂ ವಿಶೇಷವಾಗಿ  ಆದಿವಾಸಿ ಪ್ರದೇಶಗಳಿಗೆ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಭರವಸೆಯನ್ನು ನೀಡಿದರು. 

ಇದನ್ನೂ ಓದಿ: ಗ್ಯಾರಂಟಿಗಳಿಂದ ಕರ್ನಾಟಕ ಆರ್ಥಿಕ ವಿನಾಶ: ಪ್ರಧಾನಿ ಮೋದಿ ಕಿಡಿ

ಶರದ್ ಪವಾರ್ ಅವರ ರಾಜ್ಯಸಭಾ ಅವಧಿ 2026 ರಲ್ಲಿ ಮುಗಿಯುತ್ತದೆ. ತಮ್ಮ ರಾಜಕೀಯ ಜೀವನವನ್ನು ನೆನಪಿಸಿಕೊಂಡ ಪವಾರ್, ಸುಮಾರು 30 ವರ್ಷಗಳ ಹಿಂದೆ 30 ವರ್ಷದ ಹಿಂದೆ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದೆ. ರಾಜ್ಯ ರಾಜಕಾರಣದ ಜವಾಬ್ದಾರಿಯನ್ನು ಅಜಿತ್ ಪವಾರ್ ತೆಗೆದುಕೊಂಡಿದ್ದುರ. ಮುಂದಿನ ಜವಾಬ್ದಾರಿಯನ್ನು ಹೊಸ ಪೀಳಿಗೆ ತೆಗೆದುಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.

ಬಾರಾಮತಿ ಕ್ಷೇತ್ರ ಮಹಾರಾಷ್ಟ್ರ ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.  7 ಬಾರಿ ಶಾಸಕರಾಗಿರುವ ಅಜಿತ್ ಪವಾರ್ ವಿರುದ್ಧ ಸೋದರಳಿಯ ಯುಗೇಂದ್ರ ಪವಾರ್ ಸ್ಪರ್ಧೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಈ ವರ್ಷ ಎರಡನೇ ಬಾರಿಗೆ ಪವಾರ್ vs ಪವಾರ್ ಪೈಪೋಟಿ ಉಂಟಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ಅವರು ತಮ್ಮ ಪತ್ನಿ ಸುನೇತ್ರಾ ಪವಾರ್ ವಿರುದ್ಧ ಶರದ್ ಪವಾರ್ ಪುತ್ರಿಯ ಸುಪ್ರಿಯಾ ಸುಳೆ ಸ್ಪರ್ಧಿಸಿ ಗೆದ್ದಿದ್ದರು.

ಇದನ್ನೂ ಓದಿ: 15 ಗ್ರಾಮೀಣ ಬ್ಯಾಂಕ್‌ ಮುಚ್ಚಲು ಮುಂದಾಯ್ತಾ ಸರ್ಕಾರ? ಇಲ್ಲಿ ನಿಮ್ಮ ಖಾತೆ ಇದೆಯಾ?

click me!