ವಕ್ಫ್ ಬೋರ್ಡ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನ ಹಠಮಾರಿತನ ಧೋರಣೆಯನ್ನು ಮುಂದುವರೆಸುವಂತೆ ಕಾಣುತ್ತದೆ. ಇಡೀ ರಾಜ್ಯವನ್ನೇ ಇಸ್ಲಾಮಿಕರಣ ಮಾಡಲು ಹೊರಟಿದೆ. ಈಗಾಗಲೇ ಸುಮಾರು 1.10ಲಕ್ಷ ಎಕರೆ ಭೂಮಿ ವಕ್ಫ್ ಆಸ್ತಿಯಾಗಿದೆ. ಎಲ್ಲಾ 31 ಜಿಲ್ಲೆಗಳಲ್ಲೂ ವಕ್ಫ್ ವಿವಾದಗಳು ತಲೆ ಎತ್ತಿವೆ. ರೈತರ ಜಮೀನುಗಳು, ಸಾಧುಸಂತರ ಮಠಗಳು, ದೇವಸ್ಥಾನಗಳು, ಸರ್ಕಾರಿ ಶಾಲೆಗಳು ಇದರಲ್ಲಿ ಸೇರಿವೆ ಎಂದ ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ(ನ.05): ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿರುವುದನ್ನು ಕೂಡಲೆ ರದ್ದು ಮಾಡಬೇಕು. ಸಿಎಂ ಸಿದ್ದರಾಮಯ್ಯ ಜಮೀರ್ ಅಹಮದ್ ಬಾಲ ಹಿಡಿದುಕೊಂಡು ಹೋದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಡಿಸಿಎಂ, ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಕ್ಫ್ ಬೋರ್ಡ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನ ಹಠಮಾರಿತನ ಧೋರಣೆಯನ್ನು ಮುಂದುವರೆಸುವಂತೆ ಕಾಣುತ್ತದೆ. ಇಡೀ ರಾಜ್ಯವನ್ನೇ ಇಸ್ಲಾಮಿಕರಣ ಮಾಡಲು ಹೊರಟಿದೆ. ಈಗಾಗಲೇ ಸುಮಾರು 1.10ಲಕ್ಷ ಎಕರೆ ಭೂಮಿ ವಕ್ಫ್ ಆಸ್ತಿಯಾಗಿದೆ. ಎಲ್ಲಾ 31 ಜಿಲ್ಲೆಗಳಲ್ಲೂ ವಕ್ಫ್ ವಿವಾದಗಳು ತಲೆ ಎತ್ತಿವೆ. ರೈತರ ಜಮೀನುಗಳು, ಸಾಧುಸಂತರ ಮಠಗಳು, ದೇವಸ್ಥಾನಗಳು, ಸರ್ಕಾರಿ ಶಾಲೆಗಳು ಇದರಲ್ಲಿ ಸೇರಿವೆ ಎಂದರು.
undefined
ಜಮೀರ್ ಅಹ್ಮದ್ ಪಾಕ್‌ನಲ್ಲಿ ಇದ್ದಾನೋ, ಹಿಂದುಸ್ತಾನದಲ್ಲಿ ಇದ್ದಾನೋ: ಅವನು ಸಚಿವನಾಗಲು ಅಯೋಗ್ಯ, ಈಶ್ವರಪ್ಪ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ರಕ್ತಕ್ರಾಂತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಸಾಧುಸಂತರು ಇದರ ಮುಂದಾಳತ್ತ ವಹಿಸಲಿದ್ದಾರೆ. ಮುಖ್ಯಮಂತ್ರಿಗಳೇನೋ ಅಧಿಕಾರಿಗೆ ಹೇಳಿದ್ದೇನೆ ಕ್ರಮಕೈಗೊಳ್ಳುತ್ತಾರೆ ಎನ್ನುತ್ತಾರೆ. ಅದಷ್ಟೇ ಸಾಲದು, ರೈತರ ಪಹಣಿಗಳಲ್ಲಿ ವಕ್ಸ್ ಹೆಸರಿನಲ್ಲಿ ಪಹಣಿ ಇದ್ದು, ಅದನ್ನು ಈ ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ಇಡೀ ರಾಜ್ಯದಲ್ಲಿ ಈ ವಿವಾದ ಹಬ್ಬಿದೆ. ಕಲ್ಬುರ್ಗಿ, ಶ್ರೀರಂಗಪಟ್ಟಣ, ಮಂಡ್ಯ, ವಿರಕ್ತಮಠ, ಹೀಗೆ ಎಲ್ಲಾ ಕಡೆಗಳಲ್ಲೂ ಇದು ವ್ಯಾಪಿಸಿದೆ. ಕುರುಬರಿಗೆ ಸೇರಿದ ಬೀರಲಿಂಗೇಶ್ವರ ದೇವಸ್ಥಾನವನ್ನು ಈ ವಕ್ಫ್ ಬಿಟ್ಟಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳದಿದ್ದರೆ ಬೀರಲಿಂಗೇಶ್ವರನು ಅವರನ್ನು ಕ್ಷಮಿಸುವುದಿಲ್ಲ. ಎಲ್ಲರ ತಾಪ ಅವರಿಗೆ ತಟ್ಟಿ ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದು ಭವಿಷ್ಯ ನುಡಿದರು.
ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ತೀರ್ಮಾನವಾದರೂ ವಕ್ಫ್ ಟ್ರಿಬ್ಯುನಲ್ ಕೋರ್ಟ್‌ಗೆ ಹೋಗಬೇಕು. ಇದು ಸುಪ್ರೀಂ ಕೋರ್ಟ್‌ಗಿಂತ ದೊಡ್ಡದೇ? ಈ ಕೋರ್ಟ್‌ಗೆ ಹೋದರೆ ಯಾರ ಪರವಾಗಿ ತೀರ್ಮಾನವಾಗುತ್ತದೆ ಎಂದು ಎಲ್ಲರಿಗೂ ಗೊತ್ತು. ಆ ಕಾರಣಕ್ಕಾಗಿಯೇ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ. ಇದಕ್ಕಾಗಿ ಸಮಿತಿಯನ್ನು ಕೂಡ ರಚಿಸಲಾಗಿದೆ. ಆದಷ್ಟು ಬೇಗ ಕಾಯ್ದೆ ಜಾರಿಗೆ ತರಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ. ವಿಶ್ವಾಸ್, ಬಾಲು, ಮೋಹನ್ ಕುಮಾರ್ ಜಾದವ್, ಶಂಕರನಾಯ್ಕ ಕುಬೇರಪ್ಪ, ಚನ್ನಬಸಪ್ಪ, ಮೋಹನ್ ಮತ್ತಿತರರು ಇದ್ದರು.
ಜೈಲಿಗೆ ಹೋಗುವ ಸ್ಥಿತಿ ಬಂದಾಗ ಸಿದ್ದುಗೆ ದೇವರ ನೆನಪು: ಈಶ್ವರಪ್ಪ
ರಾಜ್ಯವನ್ನು ಇಸ್ಲಾಮೀಕರಣ ಮಾಡಲು ಸಂಚು
ವಕ್ಫ್ ಆಸ್ತಿ ಎಂದು ರೈತರ ಭೂಮಿ ಕಬಳಿಸಿ ರಾಜ್ಯವನ್ನು ಇಸ್ಲಾಮೀಕರಣ ಮಾಡಲು ಹೊರಟಿದ್ದಾರೆ. ಹಾಗಾಗಿ ವಕ್ಫ್‌ಗೆ ಇರುವ ಪರಮೋಚ್ಚ ಅಧಿಕಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಕೇಂದ್ರ ಸರ್ಕಾರದ ಸಮಿತಿಗೆ ಪತ್ರ ಬರೆಯುತ್ತೇನೆ. ಬಸವರಾಜ ಬೊಮ್ಮಾಯಿ ಆಕಾಶದಿಂದ ಇಳಿದು ಬಂದವರಲ್ಲ. ವಕ್ಫ್ ಹೆಸರಿನಲ್ಲಿ ಆಸ್ತಿ ಕಬಳಿಸಲು ಮುಂದಾದವರೆಲ್ಲರು ದೇಶ ದ್ರೋಹಿಗಳೇ. ತಮಗೆ ಬೇಕಾದಂತೆ ಮುಸ್ಲಿಮರಿಗಾಗಿ ಆಸ್ತಿ ಕಬಳಿಸಿದರೆ ರಕ್ತ ಕ್ರಾಂತಿ ಆಗಲಿದೆ. ಮುಸ್ಲಿಮರು ಹುಲಿ ಬಾಯಿಗೆ ಕೈ ಹಾಕಿದ್ದಾರೆ. ಇದರಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.
ಈಗಾಗಲೇ ಸಾಧು ಸಂತರು ಎಚ್ಚೆತ್ತುಕೊಂಡಿದ್ದಾರೆ. ಹೋರಾಟಕ್ಕಾಗಿ ನನ್ನನ್ನು ಕರೆದಿದ್ದಾರೆ. ಸಾಧುಸಂತರೇ ಜಾಗೃತಿಗೊಂಡಿರುವುದು ತುಂಬ ಸಂತೋಷದ ವಿಷಯ. ನಾಳೆ ನಾಡಿದ್ದರಲ್ಲಿ ಬಾಗಲಕೋಟೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಸಾಧುಸಂತರೊಂದಿಗೆ ಮಾತನಾಡುವೆ ಎಂದು ಅವರು ತಿಳಿಸಿದರು.