ಶ್ರೀರಾಮುಲು ಕಾಂಗ್ರೆಸ್ ನಾಯಕರನ್ನು ಬೆಕ್ಕು, ಇಲಿಗೆ ಹೋಲಿಕೆ ಮಾಡಿದ ವಿಚಾರವಾಗಿ ಅಂತವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಮಗೆ ಸಮಯವಿಲ್ಲ, ನಮಗೆ ಬೇಕಾದಷ್ಟು ಕೆಲಸ ಕಾರ್ಯಗಳು ಇವೆ ಎಂದು ಪರಮೇಶ್ವರ್ ನಯವಾಗಿ ಜಾರಿಕೊಂಡ ಪರಂ
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ(ಜ.04): ಅದೃಷ್ಟ ಇದ್ದರೆ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಸಹ ಸಿಎಂ ಯಾಕೆ ಆಗ್ಬಾರದು ಅಂತ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರು ಪರಮೇಶ್ವರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಚಿತ್ರದುರ್ಗದಲ್ಲಿ ಇದೇ ತಿಂಗಳು 8 ರಂದು ನಡೆಯುವ ಐಕ್ಯತಾ ಸಮಾವೇಶ ಪೂರ್ವಭಾವಿ ಸಭೆಗೆ ಭಾಗಿಯಾಗುವ ಮುನ್ನ ಇಂದು(ಬುಧವಾರ) ಶಾಮನೂರು ಶಿವಶಂಕರಪ್ಪನವರ ನಿವಾಸಕ್ಕೆ ಭೇಟಿ ನೀಡಿದ್ದರು.
undefined
ಪರಮೇಶ್ವರ್ ಮುಂದೆ ದಲಿತ ಸಿಎಂ ಆಗ್ಬಹದಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪ, ಜಿ. ಪರಮೇಶ್ವರ್ ಅವರಿಗೆ ಅದೃಷ್ಟ ಎಂಬುದು ಇದ್ರೇ ಮುಂದಿನ ಸಿಎಂ ಅವರು ಕೂಡ ಆಗಬಹುದು ಎಂದಿದ್ದಾರೆ.
ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿಯನ್ನು ನಾಯಿ ಮರಿಗೆ ಹೋಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಪರಮೇಶ್ವರ್ ಹಿಂದೇಟು ಹಾಕಿದರು. ಸಿದ್ದರಾಮಯ್ಯ ಹೇಳಿಕೆ ಕುರಿತು ನನಗೆ ಮಾಹಿತಿ ಇಲ್ಲ, ಇನ್ನು ಶ್ರೀರಾಮುಲು ಕಾಂಗ್ರೆಸ್ ನಾಯಕರನ್ನು ಬೆಕ್ಕು, ಇಲಿಗೆ ಹೋಲಿಕೆ ಮಾಡಿದ ವಿಚಾರವಾಗಿ ಅಂತವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಮಗೆ ಸಮಯವಿಲ್ಲ, ನಮಗೆ ಬೇಕಾದಷ್ಟು ಕೆಲಸ ಕಾರ್ಯಗಳು ಇವೆ ಎಂದು ಪರಮೇಶ್ವರ್ ನಯವಾಗಿ ಜಾರಿಕೊಂಡಿದ್ದಾರೆ.
ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಗೌರ್ನಮೆಂಟ್: ಸಲೀಂ ಅಹ್ಮದ್
ಚಿತ್ರದುರ್ಗದಲ್ಲಿ ಕಾಂಗ್ರೆಸ್‌ನಿಂದ ಎಸ್ಸಿ, ಎಸ್ಟಿ ಸಮಾವೇಶ
ಜ.8ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್‌ನಿಂದ ಎಸ್ಸಿ, ಎಸ್ಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಮಾಹಿತಿ ನೀಡಿದರು. ಮೀಸಲಾತಿ ಹೆಚ್ಚಳ ನಿಜಾಂಶ ತಿಳಿಸುತ್ತೇವೆ, ಮೀಸಲಾತಿ ಹೆಚ್ಚಳಕ್ಕೆ ಅವಕಾಶವೇ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ರಾಜಕೀಯ ಉದ್ದೇಶದಿಂದ ಹೆಚ್ಚಳ ಮಾಡಿದ್ದೇವೆ ಎಂದು ಬಿಜೆಪಿ ಪ್ರಚಾರ ಪಡೆಯುತ್ತಿದ್ದಾರೆ. ಈ ವಿಚಾರವನ್ನ ಎಸ್ಸಿ,ಎಸ್ಟಿ ಸಮುದಾಯಕ್ಕೆ ತಿಳಿಸುತ್ತೇವೆ, ಇನ್ನು ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜಿವಾಲಾ, ವೇಣುಗೋಪಾಲ್ ರಾವ್ ಭಾಗಿಯಾಗಲಿದ್ದಾರೆ.
ಅನೇಕ ಜ್ವಲಂತ ಸಮಸ್ಯೆ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ನಮ್ಮ ಸರ್ಕಾರದ ಯೋಜನೆಗಳು ಅನುಷ್ಠಾನ ಆಗ್ತಿಲ್ಲ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕ ವಿಚಾರ ಮನವರಿಕೆ ಮಾಡುತ್ತೇವೆ, ಕಾಂಗ್ರೆಸ್‌ಗೆ ಮತ ನೀಡುವಂತೆ ಸಂದೇಶ ನೀಡುತ್ತೇವೆ, ಈ ಹಿಂದೆ ಎರಡು ಸಮುದಾಯಗಳು ಕಾಂಗ್ರೆಸ್‌ಗೆ ಬೆಂಬಲಿಸಿವೆ.. ಮುಂದೆಯೂ ನಮಗೆ ಬೆಂಬಲಿಸುವಂತೆ ಮನವಿ ಮಾಡುತ್ತೇವೆ ಎಂದರು.