ನಾನು ಸಿಎಂ ಆಗಿದ್ದಾಗ ನನ್ನದೂ ಒಂದು ಸಿಡಿ ಮಾಡಿದ್ರಲ್ಲಾ / ನಾನು ಸಿಎಂ ಆಗಿ ಎರಡೇ ತಿಂಗಳಲ್ಲಿ ಒಂದು ಸಿಡಿ ಮಾಡಿದ್ರಲ್ಲಾ/ ನೂರಾ ಐವತ್ತು ಕೋಟಿ ಹಗರಣದ ಬಗ್ಗೆ ಏನೋ ಸಿಡಿ ಮಾಡಿದ್ರಲ್ಲಾ. ಕಡೆಗೆ ಅದು ಎಲ್ಲಿಗೆ ಹೋಗಿ ತಲುಪಿತು.?/ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು(ಮಾ. 15) 'ನಾನು ಸಿಎಂ ಆಗಿದ್ದಾಗ ನನ್ನದೂ ಒಂದು ಸಿಡಿ ಮಾಡಿದ್ರಲ್ಲಾ? ನಾನು ಸಿಎಂ ಆಗಿ ಎರಡೇ ತಿಂಗಳಲ್ಲಿ ಒಂದು ಸಿಡಿ ಮಾಡಿದ್ರಲ್ಲಾ.. ನೂರಾ ಐವತ್ತು ಕೋಟಿ ಹಗರಣದ ಬಗ್ಗೆ ಏನೋ ಸಿಡಿ ಮಾಡಿದ್ರಲ್ಲಾ. ಕಡೆಗೆ ಅದು ಎಲ್ಲಿಗೆ ಹೋಗಿ ತಲುಪಿತು.? ಹೌದು ಹೀಗೆಂದು ಪ್ರಶ್ನೆ ಮಾಡಿದ್ದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ.
ಸಿಡಿ ಪ್ರಕರಣದ ಬಗ್ಗೆ ಮಾಧ್ಯಗಳು ಪದೇ ಪದೇ ಪ್ರಶ್ನೆ ಕೇಳಿದ್ದಕ್ಕೆ ಕುಮಾರಸ್ವಾಮಿ ಈ ರೀತಿ ಉತ್ತರ ಕೊಟ್ಟರು. ನಂತರ ರಾಜಕಾರಣದ ಕೆಲ ವಿಚಾರಗಳನ್ನು ಮಾತನಾಡಿದರು.
ಮಹಾನ್ ನಾಯಕನ ಹೆಸರು ಕೊನೆಗೂ ರಿವೀಲ್
ನಾನು ಸೋಲು ಗೆಲುವು ಎಲ್ಲಾ ನೋಡಿ ಆಗಿದೆ. ಮೂರೂ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕುತ್ತೇವೆ. ಸಿಂದಗಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಯನ್ನೇ ಕರೆದುಕೊಂಡು ಹೋಗಿದ್ದಾರೆ. ಆ ಪಕ್ಷದ ದರಿದ್ರ ಇನ್ನೆಷ್ಟು ಮಟ್ಟದ್ದಿರಬೇಕು ಎಂದು ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡಿದರು.
ನನಗೆ ಶಕುನಿ ಯಾರು, ಮಂಥರೆ ಯಾರು ಅಂತಾ ಗೊತ್ತಿದೆ. ಬೇರೆಯವರ ಮಾತು ಕೇಳಿ ತಲೆಯಾಡಿಸಲು ನಾನೇನೂ ಕೋಲೆಬಸವನಲ್ಲ ಎಂದು ಸಾರಾ ಮಹೇಶ್ ಟೀಕೆಗೆ ಎಚ್ಡಿಕೆ ತಿರುಗೇಟು ನೀಡಿದರು.
ಕೊರೋನಾ ಹೆಚ್ಚಳವಾಗುತ್ತಿರುವ ಬಗ್ಗೆಯೂ ಮಾತನಾಡಿದ ಕುಮಾರಸ್ವಾಮಿ, ಮತ್ತೆ ಲಾಕ್ ಡೌನ್ ಮಾಡುವುದು ಸೂಕ್ತ. ಕೊರೋನಾ ಎರಡನೇ ಅಲೆ ಜೋರಾಗ್ತಿದೆ. ಜನ ಎಚ್ಚರಿಕೆ ಯಿಂದ ಇರಬೇಕು. ಕಾರ್ಯಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಾನೂ ಕೂಡಾ ಪ್ರತಿದಿನ ಐದಾರು ನೂರು ಕಿಲೋಮೀಟರ್ ಪ್ರಯಾಣ ಮಾಡ್ತಿದ್ದೇನೆ. ನೂರಾರು ಜನರ ಸಂಪರ್ಕದಲ್ಲಿ ಇದ್ದೇನೆ. ದೇವರ ದಯೆಯಿಂದ ಏನೂ ಅನಾಹುತ ಆಗಿಲ್ಲ. ಆದರೂ ಜನ ಎಚ್ಚರಿಕೆ ಯಿಂದ ಇರೋದು ಸೂಕ್ತ ಎಂದು ಸಲಹೆ ನೀಡಲು ಮರೆಯಲಿಲ್ಲ.