'ಸಿಎಂ ನಿವಾಸಕ್ಕೆ ಬಂದಿದ್ದ ಸ್ವಾಮೀಜಿ ಶ್ರೀರಾಮುಲು ಸಿಎಂ ಆಗ್ಲಿ ಅಂದ್ರು'

Published : Jul 22, 2021, 09:48 PM ISTUpdated : Jul 22, 2021, 09:50 PM IST
'ಸಿಎಂ ನಿವಾಸಕ್ಕೆ ಬಂದಿದ್ದ ಸ್ವಾಮೀಜಿ ಶ್ರೀರಾಮುಲು ಸಿಎಂ ಆಗ್ಲಿ ಅಂದ್ರು'

ಸಾರಾಂಶ

* ಶ್ರೀರಾಮುಲು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದ ಸ್ವಾಮೀಜಿ * ಮುಖ್ಯಮಂತ್ರಿ ನಿವಾಸಕ್ಕೆ ಬಂದಿದ್ದ ಸ್ವಾಮೀಜಿ ಶ್ರೀರಾಮುಲು ಪರ ಬ್ಯಾಟಿಂಗ್ * ಸಿಎಂ ನಿವಾಸ ಕಾವೇರಿ ಬಳಿ ಶ್ರೀರಾಮುಲು ಪರ ಹೇಳಿಕೆ ಕೊಟ್ಟ ಶ್ರೀಗಳು

ಬೆಂಗಳೂರು, (ಜು.22): ಬಿಎಸ್ ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಖಚಿತ ಎನ್ನಲಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಹಲವು ಸ್ವಾಮೀಜಿಗಳು ಕಾವೇರಿ ನಿವಾಸಕ್ಕೆ ಆಗಮಿಸಿ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ರು. ಈ ವೇಳೆ ಸ್ವಾಮೀಜಿಯೊಬ್ಬರು ಶ್ರೀರಾಮುಲು ಅವರನ್ನ ಸಿಎಂ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

ನಾಯಕತ್ವ ಬದಲಾವಣೆ ಮಧ್ಯೆ ಶ್ರೀರಾಮುಲು ಕನಸು ನನಸಾಗುವ ಸಮಯ ಬಂತಾ?

ಇಂದು (ಗುರುವಾರ) ಮುಖ್ಯಮಂತ್ರಿ ನಿವಾಸ 'ಕಾವೇರಿ'ಯಲ್ಲಿ ಮಾತನಾಡಿದ ದೊಡ್ಡಬಳ್ಳಾಪುರದ ವಾಲ್ಮೀಕಿ ಮಠದ ಬ್ರಹ್ಮಾನಂದ ಸ್ವಾಮೀಜಿ ಅವರು, ಯಡಿಯೂರಪ್ಪರನ್ನು ಬದಲಾಯಿಸಿದ್ರೆ ಶ್ರೀರಾಮುಲು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು. 

ಯಾರು ಸಿಎಂ ಆಗ್ತಾರೆ..? ಬರೀ ಸಿಎಂ ಬದಲಾವಣೆನಾ ಅಥವಾ ಸಚಿವ ಸಂಪುಟ ಸಹ ಬದಲಾಗುತ್ತಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ. ಇದರ ಮಧ್ಯೆ ಸಚಿವ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಪಟ್ಟಕಟ್ಟಲು ಹೈಕಮಾಂಡ್ ಪ್ಲಾನ್ ಮಾಡಿದೆ. ಆದ್ರೆ, ಶ್ರೀರಾಮುಲು ಅವರನ್ನ ಮುಖ್ಯಮಂತ್ರಿ ಮಾಡುವಂತೆ ಬ್ರಹ್ಮಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್