ನಗರದಲ್ಲಿ ವಿಧಾನಸಭಾ ಚುನಾವಣೆ ಕಾವು ಬಿಸಿಲಿನಂತೆ ಜೋರಾಗಿದ್ದು, ಬುಧವಾರ ಜೆಡಿಎಸ್ ಪಕ್ಷದಿಂದ ಪ್ರಚಾರ ಬಿರುಸಾಗಿ ಸಾಗಿತು.
ಶಿವಮೊಗ್ಗ (ಏ.27) :ನಗರದಲ್ಲಿ ವಿಧಾನಸಭಾ ಚುನಾವಣೆ ಕಾವು ಬಿಸಿಲಿನಂತೆ ಜೋರಾಗಿದ್ದು, ಬುಧವಾರ ಜೆಡಿಎಸ್ ಪಕ್ಷದಿಂದ ಪ್ರಚಾರ ಬಿರುಸಾಗಿ ಸಾಗಿತು.
ನವುಲೆಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ ಅಭ್ಯರ್ಥಿ ಆಯನೂರು ಮಂಜುನಾಥ್(Ayanuru manjunth JDS Candidate)ಅವರಿಗೆ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್(KB Prasannakumar) ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳನ್ನು ತೊರೆದ ಪ್ರಮುಖರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮತ್ತು ಜಿಲ್ಲಾಧ್ಯಕ್ಷ ಶ್ರೀಕಾಂತ್ ಜೊತೆಗೂಡಿ ಪ್ರಚಾರ ಕಾರ್ಯ ಆರಂಭಿಸಿದ್ದೇನೆ. ಮತದಾರರ ಉತ್ಸಾಹ ಕಂಡು ನಮಗೆ ಮತ್ತಷ್ಟುಹುಮ್ಮಸ್ಸು ಬಂದಿದೆ. ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿದ್ದು, ಕೊನೆಯ ದಿನದವರೆಗೂ ಇದರ ವೇಗವನ್ನು ಕಾಯ್ದುಕೊಂಡು ಗೆಲುವನ್ನು ಸಾಧಿಸುತ್ತೇವೆ ಎಂದರು.
ಶಿವಮೊಗ್ಗ: ಬಿಜೆಪಿಗೆ ಮತ ನೀಡದಿರಲು ರೈತ ಸಂಘ ನಿರ್ಧಾರ
ಜೆಡಿಎಸ್‌ಗೆ ಹೆಚ್ಚು ಸ್ಥಾನ:
ನಾನು ಹೊಸನಗರ ಕ್ಷೇತ್ರದ ಶಾಸಕ ಆಗಿದ್ದಾಗ ಮೊದಲು ಪ್ರಚಾರ ಆರಂಭಿಸಿದ ಗ್ರಾಮ ಇದು. ಈ ಹಿನ್ನೆಲೆಯಲ್ಲಿ ಇಲ್ಲಿಂದಲೇ ಪ್ರಚಾರ ಕಾರ್ಯ ಆರಂಭಿಸುತ್ತಿದ್ದೇನೆ. ಬೇರೆ ಪಕ್ಷಗಳದ್ದು ರಸ್ತೆ ಮೇಲೆ ನೀರು ಹರಿದರೇ ನಮ್ಮದು ಚಾಪೆ ಕೆಳಗೆ ನೀರು ಹರಿಯುವ ಸ್ಟ್ಯಾಟಜಿ. ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಪ್ರಮುಖ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ ಆಗುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರು ನಿರಾಸೆಗೊಂಡಿದ್ದಾರೆ. ಹೀಗಾಗಿ ಜೆಡಿಎಸ್ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನವನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದರು.
ಸ್ವಂತ ಬಲದ ಮೇಲೆ ಅಲ್ಲದಿದ್ದರೂ ಜೆಡಿಎಸ್ ನೇತೃತ್ವದಲ್ಲಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಬೇಕಾದ ಅನಿವಾರ್ಯತೆ ಇದೆ. ರಾಜ್ಯದ ಜನತೆ ಸಮ್ಮಿಶ್ರ ಸರ್ಕಾರದ ಸುಳಿವಿನ ಹಿನ್ನಲೆ ಶಿವಮೊಗ್ಗ ಕ್ಷೇತ್ರದಲ್ಲೂ ಜೆಡಿಎಸ್ ಬೆಂಬಲಿಸಲಿದ್ದಾರೆ. ರಾಜ್ಯದ ಮತದಾರರಿಗೆ ಯಾವ ರೀತಿಯ ಟ್ರೆಂಡ್ ನಡೆಯುತ್ತಿದೆ ಎಂಬ ಸುಳಿವು ಸಿಕ್ಕಿದೆ. ಎಲ್ಲ ಸಮಯದಲ್ಲೂ ಮೋದಿಯ ಅಲೆ ಪ್ರಭಾವ ಬೀರುವುದಿಲ್ಲ. ಪ್ರಾದೇಶಿಕವಾಗಿ ಸಿಗುವರರನ್ನು ಜನತೆ ಎದುರು ನೋಡುತ್ತಾರೆ. ರಾಷ್ಟ್ರೀಯ ನಾಯಕರು ಬಂದಾಗ ಹೇಗೆ ಜನ ಸೇರುತ್ತಾರೋ. ಹಾಗೆ ಒಂಟಿ ಸಲಗ ಕುಮಾರಸ್ವಾಮಿ ಅವರು ಬಂದಾಗಲೂ ಜನ ಸೇರುತ್ತಾರೆ. ಸ್ಥಳೀಯರು ನಮ್ಮ ಮೇಲೆ ಭರವಸೆ ಇಡುತ್ತಾರೆ ಎಂದು ಹೇಳಿದರು.
ಜನರ ಕಷ್ಟ- ಸುಖಗಳಿಗೆ ಸಿಗುವ ಸ್ಥಳೀಯ ನಾಯಕತ್ವವನ್ನು ಗುರುತಿಸುತ್ತಾರೆ. ಹೊರಗಿನಿಂದ ಬರುವ ನಾಯಕತ್ವವನ್ನು ಬೆಂಬಲಿಸುವುದಿಲ್ಲ. ಈ ಚುನಾವಣೆಯಲ್ಲಿ ಯಾರ ಸೋಲು ಖಚಿತ ಎನ್ನುವುದಕ್ಕಿಂತ ಜೆಡಿಎಸ್‌ನ ಗೆಲುವು ಖಚಿತವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಚಾರ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ್ ಕಂಕಾರಿ, ಪಾಲಾಕ್ಷಿ, ಧೀರರಾಜ್ ಹೊನ್ನವಿಲೆ, ದೀಪಕ್ ಸಿಂಗ್, ಮಹೇಶ್, ಉದಯ್, ಸುಬ್ಬೇಗೌಡ, ಬೊಮ್ಮನಕಟ್ಟೆಮಂಜು, ಮುಜೀಬ್, ನವಾಬ್, ಗಾಡಿಕೊಪ್ಪ ರಾಜಣ್ಣ, ಗೋವಿಂದಪ್ಪ, ಪುಷ್ಟಾ, ದಿವ್ಯಾ ಪ್ರವೀಣ್, ಡಾ.ಶಾಂತಾ ಸುರೇಂದ್ರ ಹಲವರಿದ್ದರು.
ಆಯನೂರು ಮಂಜುನಾಥ್ ಗೆದ್ದೇ ಗೆಲ್ಲುತ್ತಾರೆ. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮತ್ತರವರ ತಂಡ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಬಹುದೊಡ್ಡ ತಂಡವನ್ನೇ ಕರೆದುಕೊಂಡು ಬರುತ್ತಿದ್ದಾರೆ. ಈ ಬಾರಿ ಜೆಡಿಎಸ್‌ಗೆ ಬಹುದೊಡ್ಡ ಅವಕಾಶವಿದೆ. ಶಿವಮೊಗ್ಗ ನಗರವಲ್ಲದೇ ಗ್ರಾಮಾಂತರ, ಭದ್ರಾವತಿ, ಸೊರಬ ಸೇರಿದಂತೆ ಜಿಲ್ಲೆಯಲ್ಲಿ 3ರಿಂದ 4 ಸ್ಥಾನಗಳನ್ನು ನಾವು ಪಡೆದೇ ಪಡೆಯುತ್ತೇವೆ
- ಎಂ.ಶ್ರೀಕಾಂತ್, ಜಿಲ್ಲಾಧ್ಯಕ್ಷ, ಜೆಡಿಎಸ್
Karnataka election 2023: ಇಂದು ಶಿವಮೊಗ್ಗಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಭೇಟಿ
ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಈ ಬಾರಿ ರಾಜ್ಯದಲ್ಲಿಯೇ ಅತಿ ಹೆಚ್ಚು ಸ್ಥಾನ ಗಳಿಸಲಿದೆ. ಕುಮಾರಸ್ವಾಮಿ ಅವರ ಸರ್ಕಾರ ಆಡಳಿತ ನಡೆಸುತ್ತದೆ ಎಂಬ ಬಲವಾದ ವಿಶ್ವಾಸವಿದೆ. ಮೋದಿ ಅಲೆ ಸ್ಥಳೀಯವಾಗಿ ನಡೆಯದು. ಲೋಕಸಭಾ ಚುನಾವಣೆಯೇ ಬೇರೆ, ವಿಧಾನಸಭೆ ಚುನಾವಣೆಯೇ ಬೇರೆ
- ಕೆ.ಬಿ.ಪ್ರಸನ್ನಕುಮಾರ್, ಮಾಜಿ ಶಾಸಕ