RR ನಗರ ವಿಧಾನಸಭಾ ವ್ಯಾಪ್ತಿಯಲ್ಲಿ 4 ದಿನಗಳ ಕಾಲ ನಿಷೇಧಾಜ್ಞೆ ಜಾರಿ

By Suvarna NewsFirst Published Oct 29, 2020, 9:36 PM IST
Highlights

ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಾದ್ಯಂತ ನಾಲ್ಕು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 

ಬೆಂಗಳೂರು, (ಅ.29): ರಾಜರಾಜೇಶ್ವರಿನಗರ ಕ್ಷೇತ್ರದ ವಿಧಾನಸಭಾ ಉಪ ಚುನಾವಣೆ ದಿನದಿಂದ ರಂಗೇರುತ್ತಿದ್ದು, ಮತದಾನಕ್ಕೆ ದಿನಗಣನೆ ಆರಂಭವಾಗಿದೆ.

ಇದೇ ನವೆಂಬರ್ 3ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆರ್ ಆರ್ ನಗರ ವಿಧಾನಸಭಾ ವ್ಯಾಪ್ತಿಯಲ್ಲಿ ನಾಲ್ಕು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಈ ಕುರಿತಂತೆ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಇಂದು (ಗುರುವಾರ) ಅಧಿಕೃತ ಆದೇಶ ಹೊರಡಿಸಿದ್ದು,  ಮುಂಜಾಗ್ರತಾ ಕ್ರಮವಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ನವೆಂಬರ್ 1ರ ಸಂಜೆ 6 ಗಂಟೆಯಿಂದ ನವೆಂಬರ್ 4ರ ಸಂಜೆ 6 ಗಂಟೆಯವರೆಗೆ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬೈ ಎಲೆಕ್ಷನ್: ಕೈ ಹಿಡಿಯಲು, ಕಮಲ ಅರಳಿಸಲು, ದಳಪತಿಗಳು ದಾಳ ಉರುಳಿಸಲು ಹೈವೋಲ್ಟೇಜ್ ಪ್ರಚಾರ!

ಆದೇಶದಲ್ಲೇನಿದೆ..?
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ-154ರ ಉಪ ಚುನಾವಣೆಯ ಮತದಾನವನ್ನು ದಿನಾಂಕ 03-11-2020ಕ್ಕೆ ನಿಗದಪಡಿಸಿದ್ದು, ಮತ ಎಣಿಕೆ ಕಾರ್ಯವನ್ನು ದಿನಾಂಕ 10-11-2020ರಂದು ಹಮ್ಮಿಕೊಳ್ಳಲಾಗಿದೆ.

ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಸುವ ಸಲುವಾಗಿ, ಚುನಾವಣಾ ಆಯೋಗವು ಮತದಾನ ಮುಗಿಯುವ ಅವಧಿಯ ಹಿಂದಿನ 48 ಗಂಟೆಗಳು ಮತ್ತು ಮತದಾನ ಮುಗಿದ ನಂತ್ರದ 24 ಗಂಟೆಗಳ ಅವಧಿಯಲ್ಲಿ ಕಾನೂನು ಬಾಹಿರವಾಗಿ ಗುಂಪು ಸೇರುವುದನ್ನು ಹಾಗು ಸಭಎಗಳನ್ನು ನಡೆಸುವುದನ್ನು ನಿಷೇಧಿಸುವ ಹಿನ್ನಲೆಯಲ್ಲಿ ಸಿ ಆರ್ ಪಿ ಸಿ ಕಲಂ-144 ಅಡಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲು ನಿರ್ದೇಶನ ನೀಡಿರುತ್ತಾರೆ.

ಈ ದಿಸೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಕಲಂ.144 ರನ್ವಯ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಂಜಾಗ್ರತಾ ಕ್ರಮವಾಗಿ ದಿನಾಂಕ 01-11-2020ರ ಸಂಜೆ 6ಗಂಟೆಯಿಂದ ದಿನಾಂಕ 04-11-2020ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ.

click me!