ಮನಮೋಹನ ಸಿಂಗ್​ಗೆ ನೀಲಿ ಪೇಟಾದ ಮೇಲೆ ಯಾಕಿತ್ತು ಅಷ್ಟು ಮೋಹ? ಆ ಬಣ್ಣದ ಹಿಂದಿದೆ ಕೌತುಕ ಘಟನೆ...

By Suchethana D  |  First Published Dec 28, 2024, 10:32 PM IST

ಮನಮೋಹನ ಸಿಂಗ್​ಗೆ ಆ ನೀಲಿ ಪೇಟಾದ ಮೇಲೆ ಯಾಕಿತ್ತು ಅಷ್ಟು ಮೋಹ? ಆ ಬಣ್ಣದ ಹಿಂದಿದೆ ಕೌತುಕ ಘಟನೆ ಏನು? ಈ ಕುರಿತು ಮಾಜಿ ಪ್ರಧಾನಿ ಹೇಳಿದ್ದೇನು? 
 


ದೇಶ ಕಂಡ ಅಪರೂಪದ ಆರ್ಥಿಕ ತಜ್ಞ, ಭಾರತದ ಆರ್ಥಿಕತೆಯ ವಾಸ್ತುಶಿಲ್ಪಿ ಡಾ. ಮನಮೋಹನ್ ಸಿಂಗ್ ನಿಧನರಾದ ಬೆನ್ನಲ್ಲೇ ಅವರಿಗೆ ಸಂಬಂಧಿಸಿದ ಕೆಲವೊಂದು ಕುತೂಹಲದ ವಿಷಯಗಳು ತೆರೆದುಕೊಳ್ಳುತ್ತಿವೆ.  ಮೌನವಾಗಿದ್ದುಕೊಂಡೇ ಸಾಕಷ್ಟು ನೋವಿನ ನಡುವೆಯೇ ಪ್ರಧಾನಿ ಹುದ್ದೆ ನೆರವೇರಿಸಿದ್ದ ಡಾ.ಮನಮೋಹನ್​ ಸಿಂಗ್​ ಅವರ ಜೀವನ ಕಥೆಯೇ ರೋಚಕವಾದದ್ದು. ಪಾಕಿಸ್ತಾನದಲ್ಲಿ ಹುಟ್ಟಿ ವಿಭಜನೆ ಸಂದರ್ಭದಲ್ಲಿ ಭಾರತಕ್ಕೆ ಬಂದು, ಇಲ್ಲಿ ಹಂತ ಹಂತವಾಗಿ ಮೇಲೇರುತ್ತಾ ಪ್ರಧಾನಿ ಹುದ್ದೆಯವರೆಗೆ ಏರಿದ್ದ ಮನಮೋಹನ ಅವರ ನೀಲಿ ಪೇಟ (ಟರ್ಬನ್​) ಮಾತ್ರ ಸದಾ ಅವರ ಜೊತೆಗೇ ಇರುವುದನ್ನು ನೋಡಿರಬಹುದು. ತಮ್ಮ ಜೀವನದುದ್ದಕ್ಕೂ ಅವರು ನೀಲಿ ಪೇಟವನ್ನೇ ಹೆಚ್ಚಾಗಿ ಧರಿಸುತ್ತಿದ್ದರು. ತಿಳಿ ನೀಲಿ ಬಣ್ಣದ ಪೇಟಾ ಅದು. ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿಯೂ ಇದೇ ನೀಲಿ ಪೇಟ ಅವರ ಜೊತೆಗಿತ್ತು!

ಹಾಗಿದ್ದರೆ, ಈ ತಿಳಿನೀಲಿ ಬಣ್ಣಕ್ಕೂ, ಮನಮೋಹನ ಸಿಂಗ್​ ಅವರಿಗೂ ಅದೇನು ಸಂಬಂಧವಿತ್ತು ಎನ್ನುವ ಬಗ್ಗೆ ಇದೀಗ ಕುತೂಹಲದ ಘಟನೆ ಬಯಲಾಗಿದೆ.  ಈ ಬಗ್ಗೆ ಖುದ್ದು ಮನಮೋಹನ ಸಿಂಗ್​ ಅವರೇ ಭಾಷಣವೊಂದರಲ್ಲಿ ಬಹಿರಂಗಪಡಿಸಿದ್ದರು. ಅದರ ವಿಡಿಯೋ ಕೂಡ ಈಗ ವೈರಲ್​ ಆಗುತ್ತಿದೆ. 2006ರಲ್ಲಿ ಡಾಕ್ಟರೇಟ್ ಆಫ್ ಲಾ ಗೌರವಕ್ಕೆ ಪಾತ್ರರಾದ ಸಂದರ್ಭದಲ್ಲಿ ಈ ವಿಷಯವನ್ನು ಅವರು ಹೇಳಿದ್ದರು. ಈ ತಿಳಿ ನೀಲಿ ಬಣ್ಣದ ಪೇಟವು ತಾವು ವ್ಯಾಸಂಗ ಮಾಡಿದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಗೌರವ ಸೂಚಕ ಎಂದು ಹೇಳಿದ್ದರು. 

Tap to resize

Latest Videos

undefined

ದಿನಕ್ಕೆ 6 ಚಾಟಿ ಏಟು, 48 ದಿನ ಉಪವಾಸ, ಚಪ್ಪಲಿ ನಿಷೇಧ: ಏನಿದು ಅಣ್ಣಾಮಲೈ ಪ್ರತಿಭಟನೆ? ಶಾಕಿಂಗ್‌ ವಿಡಿಯೋ ವೈರಲ್‌

 ಕಾಲೇಜು ಕಲಿಯುವ ಸಂದರ್ಭದಿಂದಲೂ ಇದೇ   ಬಣ್ಣದ ಪೇಟ ಧರಿಸುತ್ತಿದ್ದ ಬಗ್ಗೆ ಅವರು ತಿಳಿಸಿದ್ದರು. ಇದೇ  ಕಾರಣಕ್ಕೆ ತಮ್ಮ ಅಡ್ಡ ಹೆಸರು  'ಬ್ಲೂ ಟರ್ಬನ್' ಎಂದೇ ಬಂದಿತ್ತು. ಫ್ರೆಂಡ್ಸ್​ ಅದೇ ಹೆಸರಿನಿಂದ  ಕರೆಯುತ್ತಿದ್ದರು.  ಇದೇ ಕಾರಣಕ್ಕೆ  ಈ ಬಣ್ಣದ ಪೇಟ ಧರಿಸಲು ಆರಂಭಿಸಿರುವುದಾಗಿ ತಿಳಿಸಿದ್ದರು. ಕ್ರಮೇಣ ಇದೇ ಬಣ್ಣದ  ಮೇಲೆ ಪ್ರೀತಿ ಹುಟ್ಟಿತು. ನೀಲಿಯ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸಗಳು ಗೋಚರಿಸಿದರೂ ಪೇಟಾ ಮಾತ್ರ ನೀಲಿಯದ್ದಾಗಿಯೇ ಇರುತ್ತದೆ ಎಂದಿದ್ದರು.  ಇದು ಕೇಂಬ್ರಿಡ್ಜ್‌ನಲ್ಲಿನ ಸ್ಮರಣೀಯ ದಿನಗಳನ್ನು ನೆನಪಿಸುತ್ತದೆ ಎಂದು ವಿವರಿಸಿದ್ದರು.
 
ಅಷ್ಟಕ್ಕೂ ಪೇಟದ ವಿಷಯವನ್ನು ಅಂದು ಮನಮೋಹನ್​ ಸಿಂಗ್​ ಅವರು ಭಾಷಣದ ಮೂಲಕ ಹೇಳಲು ಕಾರಣವೂ ಇತ್ತು. ಅದೇನೆಂದರೆ, ಆ ಕಾರ್ಯಕ್ರಮದಲ್ಲಿ  ಪ್ರಿನ್ಸ್ ಫಿಲಿಪ್ ಅವರು ಸಿಂಗ್ ಅವರ ವಿಶಿಷ್ಟವಾದ ನೀಲಿ ಪೇಟದ ಬಗ್ಗೆ ಮಾತನಾಡಿದ್ದರು. ಸಿಂಗ್​ ಅವರ ಪೇಟ ಎಷ್ಟು ಚೆನ್ನಾಗಿದೆ ನೋಡಿ ಎಂದಾಗ ಎಲ್ಲರೂ ಚಪ್ಪಾಳೆ ತಟ್ಟಿದ್ದರು. ಸದಾ  ಇದೇ ಬಣ್ಣದ ಪೇಟಾ ಯಾಕೆ ಧರಿಸುತ್ತೇನೆ ಎಂದು ಹೇಳಿದ್ದರು.   ಕೇಂಬ್ರಿಡ್ಜ್‌ಗೂ ನನಗೂ ತುಂಬಾ ನಿಕಟ ಸಂಬಂಧವಿದೆ. ನನ್ನಲ್ಲಿ  ಮುಕ್ತ ಮನಸ್ಸು, ನಿರ್ಭಯತೆ ಮತ್ತು ಬೌದ್ಧಿಕ ಕುತೂಹಲದ ಮೌಲ್ಯಗಳನ್ನು ಹುಟ್ಟುಹಾಕಿದ ಕೀರ್ತಿ ಈ ಕಾಲೇಜಿಗೆ ಇದೆ.   ಕೇಂಬ್ರಿಡ್ಜ್‌ನಲ್ಲಿ ಕಾಲ ಕಳೆದಿದ್ದ ಸಂದರ್ಭದಲ್ಲಿ  ತಮ್ಮೊಂದಿಗೆ ಇದ್ದ ನಿಕೋಲಸ್ ಕಾಲ್ದೋರ್, ಜೋನ್ ರಾಬಿನ್ಸನ್ ಮತ್ತು ಅಮರ್ತ್ಯ ಸೇನ್ ಅವರಂತಹ ಗಮನಾರ್ಹ ಅರ್ಥಶಾಸ್ತ್ರಜ್ಞರನ್ನು ಅವರು ಉಲ್ಲೇಖಿಸಿದ್ದರು.  

ದಿನಕ್ಕೆ 6 ಚಾಟಿ ಏಟು, 48 ದಿನ ಉಪವಾಸ, ಚಪ್ಪಲಿ ನಿಷೇಧ: ಏನಿದು ಅಣ್ಣಾಮಲೈ ಪ್ರತಿಭಟನೆ? ಶಾಕಿಂಗ್‌ ವಿಡಿಯೋ ವೈರಲ್‌

click me!