Goa Elections: ಕಾಂಗ್ರೆಸ್‌ ಅಭ್ಯರ್ಥಿಗಳ ಆಣೆ, ಪ್ರಮಾಣ: ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

By Suvarna News  |  First Published Jan 24, 2022, 12:58 PM IST

*  ಆಣೆ ಪ್ರಮಾಣ ಅದು ಎಷ್ಟರ ಮಟ್ಟಿಗೆ ಸರಿ ಆ ಬಗ್ಗೆ ಗೊತ್ತಿಲ್ಲ
*  ನಿಷ್ಠೆಯಿಂದ ಇರಬೇಕು ಅಂತಾ ಹೇಳಿರಬಹುದು ಅಷ್ಟೇ 
*  ಯಾರೂ ಪಕ್ಷಕ್ಕೆ ಹಾನಿ ಮಾಡಬಾರದು ಅಂತಾ ಹೇಳಿರಬಹುದು ಅದರಲ್ಲೇನು ತಪ್ಪಿಲ್ಲ
 


ಬೆಳಗಾವಿ(ಜ.24): ಗೋವಾ(Goa) ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿಗಳು(Congress Candidates) ಯಾವ ರೀತಿ ಆಣೆ ಪ್ರಮಾಣ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನಾಳೆ ಜ.25, 26 ರಂದು ಎರಡು ದಿನ ಗೋವಾದಲ್ಲಿ ಚುನಾವಣಾ ಪ್ರಚಾರದಲ್ಲಿ(Election Campaign) ಭಾಗಿಯಾಗುತ್ತೇನೆ. ಆಣೆ ಪ್ರಮಾಣ ಅದು ಎಷ್ಟರ ಮಟ್ಟಿಗೆ ಸರಿ ಆ ಬಗ್ಗೆ ಗೊತ್ತಿಲ್ಲ. ನಿಷ್ಠೆಯಿಂದ ಇರಬೇಕು ಅಂತಾ ಹೇಳಿರಬಹುದು ಅಷ್ಟೇ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ(Satish Jarkiholi) ಹೇಳಿದ್ದಾರೆ. 

ಗೋವಾ ವಿಧಾನಸಭೆ ಕಾಂಗ್ರೆಸ್ ಅಭ್ಯರ್ಥಿಗಳ ಆಣೆ ಪ್ರಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ನಮ್ಮದೇ ಸರ್ಕಾರ ರಚನೆ ಮಾಡುವ ಅವಕಾಶ ಇದ್ರು ಕಳೆದುಕೊಂಡೆವು. ಈ ಬಾರಿ ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಹೇಳಿರಬಹುದು. ಯಾರೂ ಪಕ್ಷಕ್ಕೆ ಹಾನಿ ಮಾಡಬಾರದು ಅಂತಾ ಹೇಳಿರಬಹುದು ಅದರಲ್ಲೇನು ತಪ್ಪಿಲ್ಲ ಅಂತ ಆಣೆ ಪ್ರಮಾಣವನ್ನ ಸಮರ್ಥಿಸಿಕೊಂಡಿದ್ದಾರೆ. 
ಗೋವಾಗೆ ಈಗಾಗಲೇ ನಮ್ಮ ಸದಸ್ಯರು ತೆರಳಿದ್ದಾರೆ. ಗ್ರೌಂಡ್‌ ರಿಯಾಲಿಟಿ ರಿಪೋರ್ಟ್ ಕೊಟ್ಟ ಮೇಲೆ ಚರ್ಚೆ ಮಾಡುತ್ತೇವೆ. ಅಲ್ಲಿನ ಉಸ್ತುವಾರಿ ಪಿ.ಚಿದಂಬರಂ, ದಿನೇಶ್ ಗುಂಡೂರಾವ್ ಜೊತೆ ಚರ್ಚೆ ಮಾಡಲಾಗುವುದು ಅಂತ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. 

Tap to resize

Latest Videos

Goa Elections: ತಂದೆಯನ್ನು ನೆನಪಿಸಿಕೊಳ್ಳಿ, ಬಿಜೆಪಿ ಬಿಡದಂತೆ ಪರಿಕ್ಕರ್ ಪುತ್ರನಿಗೆ ಸಿ. ಟಿ. ರವಿ ಮನವಿ!

ಪಕ್ಷಾಂತರ ತಡೆಗೆ ಗೋವಾ ಕಾಂಗ್ರೆಸ್‌ ಆಣೆ, ಪ್ರಮಾಣ..!

ಪಣಜಿ: ಕಳೆದ 5 ವರ್ಷಗಳಲ್ಲಿ ಪಕ್ಷದ ಶಾಸಕರ ಪಕ್ಷಾಂತರ ಪರ್ವದಿಂದ ಕಂಗೆಟ್ಟಿರುವ ಕಾಂಗ್ರೆಸ್‌(Congress), ಈ ಬಾರಿ ಟಿಕೆಟ್‌ ನೀಡುವ ಹಂತದಲ್ಲೇ ಪಕ್ಷಾಂತರ ತಡೆಗೆ ಮುನ್ನೆಚ್ಚರಿಕೆ ವಹಿಸಲು ಮುಂದಾಗಿದೆ. ಇದರ ಭಾಗವಾಗಿ ವಿಧಾನಸಭಾ ಚುನಾವಣೆಗೆ(Assembly Election) ಪಕ್ಷದ ಟಿಕೆಟ್‌ ಪಡೆದಿರುವ 34 ಅಭ್ಯರ್ಥಿಗಳನ್ನು ಶನಿವಾರ ವಿಶೇಷ ಬಸ್ಸಿನಲ್ಲಿ ದೇವಸ್ಥಾನ(Temple), ಚರ್ಚ್‌(Church) ಮತ್ತು ದರ್ಗಾಗಳಿಗೆ(Dargah) ಕರೆದೊಯ್ದಿರುವ ಪಕ್ಷದ ನಾಯಕರು, ಗೆದ್ದ ಮೇಲೆ ಪಕ್ಷಾಂತರ(Defection) ಮಾಡುವುದಿಲ್ಲ ಎಂದು ಅವರೆಲ್ಲರಿಂದ ಆಣೆ- ಪ್ರಮಾಣ ಮಾಡಿಸಿಕೊಂಡಿದ್ದಾರೆ.

ಎಲ್ಲಾ 34 ಅಭ್ಯರ್ಥಿಗಳನ್ನು ಪಣಜಿಯ(Panajim) ಮಹಾಲಕ್ಷ್ಮೀ ದೇವಾಲಯ, ಬಂಬೋಲಿಮ್‌ನ ಚರ್ಚ್‌ ಮತ್ತು ಪಣಜಿ ಸಮೀಪದ ಬೇಟಿಂ ಎಂಬ ಹಳ್ಳಿಯ ದರ್ಗಾಕ್ಕೆ ಕರೆದೊಯ್ದು ‘ಚುನಾವಣೆಯಲ್ಲಿ ಗೆದ್ದ ಬಳಿಕವೂ ಹಣ, ಅಧಿಕಾರ ಸೇರಿದಂತೆ ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ’ ಎಂದು ಪ್ರಮಾಣ ಮಾಡಿಸಿಕೊಳ್ಳಲಾಗಿದೆ. ಈ ಕುರಿತ ಫೋಟೋ ಮತ್ತು ವಿಡಿಯೋಗಳನ್ನು ಕಾಂಗ್ರೆಸ್‌ ಭಾನುವಾರ ಬಹಿರಂಗಪಡಿಸಿದೆ. ಶಾಸಕರ ಈ ಪ್ರಮಾಣದ ವೇಳೆ ರಾಜ್ಯದಲ್ಲಿ(Goa) ಪಕ್ಷದ ಉಸ್ತುವಾರಿಯಾಗಿರುವ ಪಿ.ಚಿದಂಬರಂ(P Chidambaram) ಕೂಡ ಉಪಸ್ಥಿತರಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಗಿರೀಶ್‌ ಚೋಡಂಕರ್‌(Girish Jodankar) ‘ಜನರ ಮನಸ್ಸಿನಲ್ಲಿ ಜನಪ್ರತಿನಿಧಿಗಳ ಕುರಿತು ಭರವಸೆ ಮೂಡಿಸುವ ನಿಟ್ಟಿನಲ್ಲಿ, ಎಲ್ಲಾ ಅಭ್ಯರ್ಥಿಗಳನ್ನೂ ದೇವರ ಮುಂದೆ ಕರೆದೊಯ್ದು ಪಕ್ಷಾಂತರ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸಲಾಗಿದೆ’ ಎಂದು ತಿಳಿಸಿದ್ದಾರೆ.

Goa Elections: ಬಿಜೆಪಿಗೆ ಇಕ್ಕಟ್ಟು, ಹಿಂದೆ ಸರಿಯಲು ಪರಿಕ್ಕರ್ ಪುತ್ರನ ಷರತ್ತು!

ಇದಕ್ಕೆ ಕಾರಣವೇನು?:

2017ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 40 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 17 ಕ್ಷೇತ್ರಗಳಲ್ಲಿ ಗೆದ್ದು ರಾಜ್ಯದ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಇದರಲ್ಲಿ 15 ಶಾಸಕರು ಬಿಜೆಪಿಗೆ(BJP) ಪಕ್ಷಾಂತರವಾಗಿದ್ದು, ಕೇವಲ ಇಬ್ಬರು ಮಾತ್ರವೇ ಪಕ್ಷದಲ್ಲೇ ಉಳಿದುಕೊಂಡಿದ್ದಾರೆ. ಕಳೆದ 5 ವರ್ಷದಲ್ಲಿ ಗೋವಾ ವಿಧಾನಸಭೆಗೆ ಆಯ್ಕೆಯಾಗಿದ್ದ 40 ಜನರ ಪೈಕಿ ಶೇ.60ರಷ್ಟು ಅಂದರೆ 24 ಶಾಸಕರು ಪಕ್ಷ ಬದಲಾಯಿಸಿದ್ದಾರೆ.

ಏಕೆ ಈ ಕಸರತ್ತು?

- ಗೋವಾದ 40 ಕ್ಷೇತ್ರ ಪೈಕಿ 2017ರಲ್ಲಿ ಕಾಂಗ್ರೆಸ್‌ 17ರಲ್ಲಿ ಗೆದ್ದು, ಅತಿದೊಡ್ಡ ಪಕ್ಷವಾಗಿತ್ತು
- ಕಾಂಗ್ರೆಸ್‌ ಶಾಸಕರ ಸೆಳೆದು ಬಿಜೆಪಿ ಸರ್ಕಾರ ರಚಿಸಿದ್ದರಿಂದ ಪಕ್ಷಕ್ಕೆ ಮುಖಭಂಗವಾಗಿತ್ತು
- 5 ವರ್ಷಗಳ ಅವಧಿಯಲ್ಲಿ 15 ಕಾಂಗ್ರೆಸ್ಸಿಗರು ಪಕ್ಷಾಂತರ ಮಾಡಿದ್ದು, ಇಬ್ಬರಷ್ಟೆಉಳಿದಿದ್ದಾರೆ
- ಇದು ಮತ್ತೊಮ್ಮೆ ಆಗದಂತೆ ನೋಡಿಕೊಳ್ಳಲು ಅಭ್ಯರ್ಥಿಗಳಿಂದ ಕಾಂಗ್ರೆಸ್‌ ಆಣೆ ಮಾಡಿಸಿದೆ
 

click me!