
ಮುಂಬೈ (ಅ.20) ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ, ಗ್ಯಾನೇಶ್ ಕುಮಾರ್ ರಾಜೀನಾಮೆ, ಸುಪ್ರೀಂ ಕೋರ್ಟ್‌ಗೆ ಜಾಥಾ ಸೇರಿದಂತೆ ಹಲವು ಹೈಡ್ರಾಮ ಸೃಷ್ಟಿಸಿದ ರಾಹುಲ್ ಗಾಂಧಿ ಇದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಹಸಿ ಹಸಿ ಸುಳ್ಳು ಹೇಳಲು ಪ್ರಯತ್ನಿಸಿ ಅಸ್ವಸ್ಥರಾದ ರಾಹುಲ್ ಗಾಂಧಿ ರಿಲಾಕ್ಸ್‌ಗಾಗಿ ವಿಯೆಟ್ನಾಂ ಟೂರ್‌ನಲ್ಲಿದ್ದಾರೆ ಎಂದ ಬಿಜೆಪಿ ಆರೋಪಿಸಿತ್ತು. ಇತ್ತ ಕಾಂಗ್ರೆಸ್ ರಾಹುಲ್ ಗಾಂಧಿ ವಿದೇಶಿ ಯಾತ್ರೆಯನ್ನು ಬಿಜೆಪಿ ದೊಡ್ಡ ವಿಷಯ ಮಾಡುತ್ತಿದೆ ಎಂದಿತ್ತು. ಇದೀಗ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷ ಶಿವಸೇನೆ(ಉದ್ಧವ್ ಬಣ)ದ ನಾಯಕ ಸಂಜಯ್ ರಾವತ್, ರಿಜಿಮ್ ಚೇಂಜ್ ಎಂದು ಹೇಳುವ ಭರದಲ್ಲಿ ರಾಹುಲ್ ಗಾಂಧಿ ವಿಯೆಟ್ನಾಂ ಟೂರ್‌ನಲ್ಲಿದ್ದಾರೆ ಎಂದು ಸತ್ಯ ಬಾಯ್ಬಿಟ್ಟಿದ್ದಾರೆ. ಸಂಜಯ್ ರಾವತ್ ಹೇಳಿಕೆಯಿಂದ ಇದೀಗ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಪೇಚಿಗೆ ಸಿಲುಕಿದ್ದಾರೆ.
ಬಾಂಗ್ಲಾದೇಶ, ನೇಪಾಳ ರೀತಿಯಲ್ಲಿ ಭಾರತದಲ್ಲಿ ಆಡಳಿತ ಬದಲಾವಣೆಯಾಗಬೇಕು ಎಂದು ಕಾಕ್ರೋಚ್ ಜನತಾ ಪಾರ್ಟಿ ಘೋಷಣೆ ಮಾಡಿದೆ. ಸುಪ್ರೀಂ ಹಿರಿಯ ವಕೀಲ ಪ್ರಶಾಂತ್ ಭೂಷಣ್, ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ನಾಯಕರು ಹೇಳಿದ್ದಾರೆ. ಈ ಹೇಳಿಕೆಗೆ ತೇಪೆ ಹಚ್ಚುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ಈ ಕುರಿತು ಸಂಜಯ್ ರಾವತ್ ಬಳಿ ಪ್ರಶ್ನಿಸಲಾಗಿದೆ. ಖಡಕ್ ಉತ್ತರ ನೀಡುವ ಭರದಲ್ಲಿ ಸಂಜಯ್ ರಾವತ್ ಕಾಂಗ್ರೆಸ್‌ನ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಹೌದು, ರಿಜಿಮ್ ಬದಲಾವಣೆ ಆಗಲಿದೆ. ಇದರಲ್ಲಿ ಅನುಮಾನವಲ್ಲ. ಸದ್ಯ ರಾಹುಲ್ ಗಾಂಧಿ ವಿಯೆಟ್ನಾಂ ಪ್ರವಾಸದಲ್ಲಿದ್ದಾರೆ. ವಿಯೆಟ್ನಾಂನಿಂದ ಬದ ಬೆನ್ನಲ್ಲೇ ಭಾರತದಲ್ಲಿ ರಿಜಿಮ್ ಚೇಂಜ್ ಆಗಲಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ರಾಹುಲ್ ಗಾಂಧಿ ವಿಯೆಟ್ನಾಂ ಪ್ರವಾಸದಲ್ಲಿದ್ದಾರೆ ಎಂದು ಬಿಜೆಪಿ ನಾಯಕರು ಪೋಸ್ಟ್ ಮಾಡುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗಿದೆ. ಇದೀಗ ಸಂಜಯ್ ರಾವತ್ ಹೇಳಿಕೆಯಿಂದ ಕಾಂಗ್ರೆಸ್ ನಾಯಕರಿಗೆ ಇರಿಸು ಮುರಿಸು ಆಗಿದೆ. ಬಿಜೆಪಿ ವಿರುದ್ದ ರಾಹುಲ್ ಗಾಂಧಿ ವಿದೇಶಿ ಪ್ರವಾಸವನ್ನು ಸಾಮಾನ್ಯ ವಿಷಯದಂತೆ ಬಿಂಬಿಸಲು ಹೊರಟಿದ್ದ ಕಾಂಗ್ರೆಸ್‌ಗೆ ಮಿತ್ರ ನಾಯಕ ಸಂಜಯ್ ರಾವತ್ ವಿಯೆಟ್ನಾಂ ಎಂದು ಜಗಜ್ಜಾಹೀರು ಮಾಡಿದ್ದಾರೆ.
ಸಂಜಯ್ ರಾವುತ್ ಹೇಳಿಕೆ ವಿಡಿಯೋಗೆ ಭರ್ಜರಿ ಕಮೆಂಟ್ಸ್ ವ್ಯಕ್ತವಾಗಿದೆ. ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ಸ್ ಮಾಡಿದ್ದಾರೆ. ಬಿಜೆಪಿ ಪಕ್ಷದ ರಿಯಲ್ ಹಮ್ಜಾ ಆಲಿ ಮಝಾರಿ ಈ ಸಂಜಯ್ ರಾವುತ್ ಎಂದಿದ್ದಾರೆ. ಸಂಜಯ್ ರಾವುತ್ ಮೊದಲು ಉದ್ಧವ್ ಠಾಕ್ರೆಯನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿದರು. ಶಿವಸೇನೆಯನ್ನು ಎರಡು ಬಣ ಮಾಡಿ ಉದ್ಧವ್ ಠಾಕ್ರೆಯ ಶಕ್ತಿಯನ್ನು ದುರ್ಬಲಗೊಳಿಸಿದರು. ಇಷ್ಟು ಸಾಲದ ಎಂಬಂತೆ ಮುಂಬೈ ಮಹಾನಗರ ಪಾಲಿಕೆಯಲ್ಲಿ ಉದ್ಧವ್ ಬಣವನ್ನು ಸೋಲಿಸಿದರು. ಇದೀಗ ಕಾಂಗ್ರೆಸ್ ಧೂಳೀಪಟ ಮಾಡಲು ಎಲ್ಲಾ ಪ್ಲಾನ್ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.