
ಅಮೆರಿಕದ ಲೇಖಕಿ ರೆನೆ ಲಿನ್ ಅವರು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, "ರಾಹುಲ್ ಗಾಂಧಿ ಅಮೆರಿಕ ಪ್ರವಾಸದಲ್ಲಿದ್ದಾಗ ನನ್ನ ಫೋನ್ ಮತ್ತು ವ್ಯಾಲೆಟ್ ಅನ್ನು ಕದ್ದಿದ್ದಾರೆ" ಎಂದು ಆರೋಪಿಸಿದ್ದಾರೆ. ಒಂದು ವೇಳೆ ಅವರು ತಾವು ಕದ್ದಿಲ್ಲ ಎಂದು ಹೇಳುವುದೇ ಆದರೆ, ಅದನ್ನು ಸಾಕ್ಷ್ಯಾಧಾರ ಸಹಿತ ಪ್ರೂವ್ ಮಾಡಲಿ ಎಂದು ಲೇಖಕಿ ಸವಾಲು ಹಾಕಿದ್ದಾರೆ!
ಅಷ್ಟಕ್ಕೂ ರಾಹುಲ್ ಗಾಂಧಿ ಅವರು ನಿಜವಾಗಿಯೂ ತಮ್ಮ ಪರ್ಸ್, ಮೊಬೈಲ್ ಕದ್ದಿದ್ದಾರೆ ಎನ್ನುವುದು ಲೇಖಕಿಯ ಆರೋಪವಲ್ಲ. ಬದಲಿಗೆ ಈ ವಿಡಿಯೋ ಅನ್ನು ಅವರು ಹಾಸ್ಯದ ರೂಪದಲ್ಲಿ ಪೊಸ್ಟ್ ಮಾಡಿದ್ದಾರೆ. ಇದಕ್ಕೆ ಕಾರಣ, ಭಾರತದ ಚುನಾವಣೆಯಲ್ಲಿ "ಮತಗಳ ಕಳ್ಳತನ" (Vote Chori) ನಡೆದಿದೆ ಎಂದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಪುರಾವೆಗಳಿಲ್ಲದೆ ಪದೇ ಪದೇ ಆರೋಪ ಮಾಡುವುದನ್ನು ಅಣಕಿಸಲು ರೆನೆ ಲಿನ್ ಈ ರೀತಿ ವ್ಯಂಗ್ಯವಾಡಿದ್ದಾರೆ.
ಕೆಲ ತಿಂಗಳ ಹಿಂದೆ ರಾಹುಲ್ ಗಾಂಧಿ ಅವರು, ವೋಟ್ ಚೋರಿ ನಡೆದಿದೆ ಎನ್ನುವುದಕ್ಕೆ ನನ್ನ ಬಳಿ ಸಾಕ್ಷ್ಯಾಧಾರಗಳು ಇವೆ. ಬೇಕಿದ್ದರೆ ತೋರಿಸುತ್ತೇನೆ. ಅವುಗಳನ್ನು Gen Z ಮುಂದಿಡುತ್ತೇನೆ ಎಂದು ರಾಜಾರೋಷವಾಗಿ ಮಾಧ್ಯಮದವರ ಎದುರು ಹೇಳಿದ್ದರು. ಆದರೆ ಇದೀಗ ಬಿಜೆಪಿಯವರು ವೋಟ್ ಚೋರಿ ಮಾಡಿದ್ದರೆ ಸಾಬೀತು ಮಾಡುವಂತೆ ನನಗೇ ಹೇಳುತ್ತಿದ್ದಾರೆ. ಇದೊಳ್ಳೆ ತಮಾಷೆಯಾಗಿದೆ ಎಂದು ಮತ್ತೆ ಮಾಧ್ಯಮದವರ ಎದುರು ಹೇಳಿ ಟ್ರೋಲ್ ಆಗುತ್ತಿದ್ದಾರೆ. ಅಂದು ಹೇಳಿದ ವಿಡಿಯೋ ಮತ್ತು ಇಂದಿನ ವಿಡಿಯೋ ಎರಡೂ ಹಾಕಿ ಜಾಲತಾಣದಲ್ಲಿ ಸಕತ್ ಟ್ರೋಲ್ ಮಾಡಲಾಗುತ್ತಿದೆ. ವೋಟ್ ಚೋರಿ ಮಾಡಿಲ್ಲ ಎಂದು ಪ್ರಧಾನಿ ಸಾಬೀತು ಮಾಡಬೇಕು ಎನ್ನುವುದು ರಾಹುಲ್ ಗಾಂಧಿ ಸವಾಲು. ಅದಕ್ಕಾಗಿಯೇ ಈಗ ಅಮೆರಿಕದ ಲೇಖಕಿ, ಸುಳ್ಳು ಆರೋಪ ಮಾಡಿ, ಅದನ್ನು ಸಾಬೀತು ಮಾಡುವಂತೆ ಹೇಳಿದರೆ ಹೇಗಿರುತ್ತದೆ ಎನ್ನುವ ಸಣ್ಣ ಝಲಕ್ ತೋರಿಸಿದ್ದಾರೆ ಅಷ್ಟೇ.
ಯಾವುದೇ ಸೂಕ್ತ ಆಧಾರ ಅಥವಾ ಸಾಕ್ಷ್ಯಗಳಿಲ್ಲದೆ ಗಂಭೀರವಾದ ಆರೋಪಗಳನ್ನು ಮಾಡಿದಾಗ ಅದು ಎಷ್ಟು ಹಾಸ್ಯಾಸ್ಪದವಾಗಿ ಕೇಳಿಸುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಹೇಳಿದ್ದಾರೆ ಲೇಖಕಿ.
Important Message: When Rahul Gandhi was in the USA, he stole my wallet and phone. Please listen. @RahulGandhi @narendramodi @Cockroachisback @BJP4India @INCIndia https://t.co/oL5xDXKNwB
— Renee Lynn (@Voice_For_India) October 18, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.