ಅಮಾನತು ಸಚಿವನ ರೆಡ್ ರೈಡಿಗೆ ಬೆದರಿದ ಸಿಎಂ ಗೆಹ್ಲೋಟ್, ಸದನದಿಂದ ಹೊರಹಾಕಿದ ಮಾರ್ಶಲ್!

By Suvarna NewsFirst Published Jul 24, 2023, 1:42 PM IST
Highlights

ರಾಜಸ್ಥಾನ ಕಾಂಗ್ರೆಸ್ ಕಿತ್ತಾಟ ಜೋರಾಗಿದೆ. ಸರ್ಕಾರದ ವಿರುದ್ಧ ಮಾತನಾಡಿ ಅಮಾನತುಗೊಂಡಿರುವ ಸಚಿವ, ಇದೀಗ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ರೆಡ್ ಡೈರಿ ಬಾಂಬ್ ಸಿಡಿಸಿದ್ದಾರೆ. ರೆಡ್ ಡೈರಿಗೆ ಸಿಎಂ ಅಶೋಕ್ ಗೆಹ್ಲೋಟ್ ಬೆಚ್ಚಿ ಬಿದ್ದಿದ್ದಾರೆ. ಇದರ ಬೆನ್ನಲ್ಲೇ ಸದನದಿಂದಲೇ ಅಮಾನತು ಸಚಿವನನ್ನು ಹೊರಹಾಕಿದ ಘಟನೆಯೂ ನಡೆದಿದೆ.

ಜೈಪುರ(ಜು.24) ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ನಡುವಿನ ಬಡಿದಾಟ ಇನ್ನೂ ಹೆಚ್ಚಾಗಿದೆ. ಇಷ್ಟು ದಿನ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲೆಟ್ ನಡುವಿನ ಬಡಿದಾಟ ಇದೀಗ ಮತ್ತೊಂದು ಸ್ವರೂಪ ಪಡೆದಿದೆ. ರಾಜಸ್ಥಾನದಲ್ಲೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದರ ಬಗ್ಗೆ ಕಾಳಜಿವಹಿಸಬೇಕಿದೆ ಎಂಬ ಹೇಳಿಕೆ ನೀಡಿದ ಸಚಿವ ರಾಜೇಂದ್ರ ಸಿಂಗ್ ಗುಧಾ ವಿರುದ್ಧ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಠಿಣ ಕ್ರಮ ಕೈಗೊಂಡಿದ್ದರು. ರಾಜೇಂದ್ರ ಸಿಂಗ್ ಗುಧಾರನ್ನು ಸಚಿವ ಸ್ಥಾನದಿಂದ ಅಮಾನತು ಮಾಡಲಾಗಿದೆ. ಇಂದು ಅಮಾನತು ಸಚಿವ ಕೆಂಪು ಡೈರಿ ಹಿಡಿದು ಕಲಾಪದಲ್ಲಿ ಪಾಲ್ಗೊಂಡಿದ್ದರು. ರೆಡ್ ಡೈರಿ ಬಹಿರಂಗಪಡಿಸಲು ಅವಕಾಶ ನೀಡಬೇಕು ಎಂದು ಸ್ಪೀಕರ್ ಬಳಿ ತೆರಳಿದ್ದಾಳೆ. ರೆಡ್ ಡೈರಿ ವಿಚಾರ ಸದನದಲ್ಲಿ ಕೇಳಿಬರುತ್ತಿದ್ದಂತೆ ಸಿಎಂ ಅಶೋಕ್ ಗೆಹ್ಲೋಟ್ ಬೆಚ್ಚಿ ಬಿದ್ದಿದ್ದಾರೆ. ಇತ್ತ ಸದನದಲ್ಲಿ ಗಲಾಟೆ ಜೋರಾಗಿದೆ. ಹೀಗಾಗಿ ಸ್ಪೀಕರ್ ಅಮಾನತು ಸಚಿವನನ್ನು ಮಾರ್ಶಲ್ ಕರೆಯಿಸಿ ಹೊರಹಾಕಲಾಗಿದೆ.

ಶೂನ್ಯವೇಳೆಯಲ್ಲಿ ರಾಜೇಂದ್ರ ಸಿಂಗ್ ಗುಧಾ, ಅಶೋಕ್ ಗೆಹ್ಲೋಟ್ ಕುರಿತ ಸ್ಫೋಟಕ ಮಾಹಿತಿಗಳ ರೆಡ್ ರೈಡ್ ಬಹಿರಂಗಪಡಿಸಲು ಅವಕಾಶ ಕೋರಿದ್ದಾರೆ. ಸ್ಪೀಕರ್ ಸಿಪಿ ಜೋಶಿ ಸ್ಥಾನದ ಬಳಿಕ ರೆಡ್ ರೈಡಿ ಹಿಡಿದು ತೆರಳಿದ ರಾಜೇಂದ್ರ ಸಿಂಗ್ ಗುಧಾ, ಈ ಡೈರಿಯಲ್ಲಿ ಐಟಿ ದಾಳಿಯ ರಹಸ್ಯ ಅಡಗಿದೆ. ಇದು ಬಯಲಾದರೆ ಅಶೋಕ್ ಗೆಹ್ಲೋಟ್ ನಿಜ  ಬಣ ಬಯಲಾಗಲಿದೆ ಎಂದು ರಾಜೇಂದ್ರ ಸಿಂಗ್ ಗುಧಾ ಹೇಳಿದ್ದಾರೆ.

Latest Videos

ನಾನಿಲ್ಲದಿದ್ರೆ ರಾಜಸ್ಥಾನ ಸಿಎಂ ಜೈಲಲ್ಲಿರ್ತಿದ್ರು; ಇಡಿ, ಐಟಿ ರೇಡ್‌ ವೇಳೆ ಬಚಾವ್ ಮಾಡಿದ್ದೆ: ಕಾಂಗ್ರೆಸ್‌ ಶಾಸಕ

ರಾಜೇಂದ್ರ ಸಿಂಗ್ ಗುಧಾಗೆ ಬಿಜೆಪಿ ಶಾಸಕರು ಸಾಥ್ ನೀಡಿದ್ದಾರೆ. ಸದನದ ಬಾವಿಯೊಳಗೆ ಭಾರಿ ಗದ್ದಲ ಎರ್ಪಟ್ಟಿತ್ತು. ರಾಜಸ್ಥಾನ ಸರ್ಕಾರದ ಸಚಿವರು ಹಾಗೂ ಶಾಸಕರು ರಾಜೇಂದ್ರ ಸಿಂಗ್ ಗುಧಾ ವಿರುದ್ಧ ಧ್ವನಿ ಎತ್ತಿದ್ದಾರೆ. ಇದರಿಂದ ಸದನ ಗದ್ದಲದ ಗೂಡಾಗಿತ್ತು. ಹೀಗಾಗಿ ಸ್ಪೀಕರ್ ರಾಜೇಂದ್ರ ಸಿಂಗ್ ಗುಧಾರನ್ನು ಸದನದಿಂದ ಹೊರಹಾಕಲು ಸೂಚಿಸಿದ್ದಾರೆ. ಮಾರ್ಶಲ್ ಕರೆಯಿಸಿ ಅಮಾನತು ಸಚಿವನನ್ನ ಹೊರಹಾಕಲಾಗಿದೆ.

ಆದರೆ ರಾಜಸ್ಥಾನದಲ್ಲಿ ಇದೀಗ ರೆಡ್ ರೈಡಿ ರಹಸ್ಯ ಕುತೂಹಲ ಹೆಚ್ಚಿಸಿದೆ. ಈ ಡೈರಿಯಲ್ಲಿ ಅಶೋಕ್ ಗೆಹ್ಲೋಟ್ ಹಾಗೂ ರಾಜಸ್ಥಾನ ಸರ್ಕಾರದ ಹಗರಣಗಳು ಬಯಲಿಗೆ ಬರುವ ಸಾಧ್ಯತೆ ಇದೆ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಬಗ್ಗೆಯೇ ಟೀಕೆ ಮಾಡಿದ ಸಚಿವನನ್ನು ವಜಾ ಮಾಡಿದ ಅಶೋಕ್‌ ಗ್ಲೆಹೊಟ್

ಗುದಾ ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ಸೈನಿಕ ಕಲ್ಯಾಣ, ಹೋಮ್‌ ಗಾರ್ಡ್‌ ಇಲಾಖೆಯ ರಾಜ್ಯ ದರ್ಜೆ ಸಚಿವರಾಗಿದ್ದರು. ಆದರೆ ರಾಜ್ಥಾನದಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯದ ಕುರಿತು ಮಾತನಾಡಿ ಅಮಾನತ್ತಾಗಿದ್ದಾರೆ. ‘ರಾಜಸ್ಥಾನವು ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ನಂ.1 ಸ್ಥಾನದಲ್ಲಿದೆ. ಮಹಿಳೆಯರಿಗೆ ರಕ್ಷಣೆ ನೀಡಲು ನಾವು ವಿಫಲರಾಗಿದ್ದೇವೆ. ಮಣಿಪುರದತ್ತ ಬೊಟ್ಟು ಮಾಡುವ ಮೊದಲು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು. ಈ ಹೇಳಿಕೆಯಿಂದ ಕಾಂಗ್ರೆಸ್‌ ಶಾಸಕರು ಕಂಗಾಲಾದಂತೆ ಕಂಡುಬಂದರೆ, ಬಿಜೆಪಿ ಶಾಸಕರು ಖುಷಿಗೊಂಡು ಗಢಾ ಅವರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಗಢಾ ಹೇಳಿಕೆಯಿಂದ ಗೆಹ್ಲೋಟ್‌ ಬಣ್ಣ ಬಯಲಾಗಿದೆ ಎಂದರು.

click me!