ಜನರ ಕಣ್ಣೀರು ಒರೆಸಲು ಪೂರ್ಣ ಪ್ರಮಾಣದ ಸರ್ಕಾರ ಬರಲು ಶಾಸಕ ಸಾ.ರಾ. ಮಹೇಶ್ ಅವರನ್ನು ಆಯ್ಕೆ ಮಾಡುವ ಮೂಲಕ ಎಚ್.ಡಿ. ಕುಮಾರಸ್ವಾಮಿಗೆ ಬಹುಮತ ನೀಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿದರು.
ಭೇರ್ಯ (ಏ.26): ಜನರ ಕಣ್ಣೀರು ಒರೆಸಲು ಪೂರ್ಣ ಪ್ರಮಾಣದ ಸರ್ಕಾರ ಬರಲು ಶಾಸಕ ಸಾ.ರಾ.ಮಹೇಶ್ ಅವರನ್ನು ಆಯ್ಕೆ ಮಾಡುವ ಮೂಲಕ ಎಚ್.ಡಿ. ಕುಮಾರಸ್ವಾಮಿಗೆ ಬಹುಮತ ನೀಡುವಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮನವಿ ಮಾಡಿದರು. ಮಿರ್ಲೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಶಾಸಕ ಸಾ.ರಾ. ಮಹೇಶ್ ಪರ ಮತಯಾಚಿಸಿ ಮಾತನಾಡಿದ ಅವರು, ಈ ರಾಜ್ಯದಲ್ಲಿ ಜನರ ಪರವಾಗಿ ಆಡಳಿತ ನಡೆಸಿ, ನುಡಿದಂತೆ ನಡೆಯುವ ಏಕೈಕ ಮುಖ್ಯಮಂತ್ರಿ ಎಂದರೆ ಅದು ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ತರಲು ಎಲ್ಲರೂ ಕೈಜೋಡಿಸಬೇಕು ಎಂದು ಕೈ ಮುಗಿದು ಪ್ರಾರ್ಥಿಸಿದರು.
ಪ.ಪಂಗಡ ಮತ್ತು ಮುಸ್ಲಿಂ ಸಮುದಾಯ ಹಾಗೂ ಮಹಿಳೆಯರು ಸ್ಥಳೀಯ ಸಂಸ್ಥೆಯಲ್ಲಿ ಮೀಸಲಾತಿ ಪಡೆದಿದ್ದರೆ ಅದಕ್ಕೆ ನಾನು ಕಾರಣ. ರಾಜ್ಯದಲ್ಲಿ ನೀರಾವರಿ ಯೋಜನೆಗಾಗಿ ಹೋರಾಟ ಮಾಡಿ ಕೈನಡುಗುತ್ತಿದ್ದರೂ ಲೋಕಸಭೆಯಲ್ಲಿ ಹೊರಾಟ ಮಾಡಿದೆ. ನನ್ನ ಕೈಯನ್ನು ಹಿಡಿದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ತಮಿಳುನಾಡಿನಲ್ಲಿ ಅತಿ ಹೆಚ್ಚು ಸಂಸದರು ಹೊಂದಿರುವುದರಿಂದ ನಾನು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ಎಂದು ತಿಳಿಸಿದ್ದಾಗಿ ಅವರು ಆರೋಪಿಸಿದರು.
undefined
ಅಮಿತ್ ಶಾ ಮಾತನಾಡಿದ್ರು ವಿಶ್ವಾಸ ದ್ರೋಹ ಮಾಡಿ ಶೆಟ್ಟರ್ ಹೋಗಿದ್ದಾರೆ: ಬಿ.ಎಸ್.ಯಡಿಯೂರಪ್ಪ
5 ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಅ ಭಾಗ್ಯ ಈ ಭಾಗ್ಯಗಳನ್ನು ಕೊಡಲು ಹಣ ಬೇಕು. ರೈತರ ಸಾಲ ಮನ್ನ ಮಾಡಲು ಸಾಧ್ಯವಿಲ್ಲ ಎಂದು ರೈತರ ಮನವಿಯನ್ನು ತಿರಸ್ಕರಿಸಿದರು. ಅದರೆ 14 ತಿಂಗಳು ಮುಖ್ಯಮಂತ್ರಿಯಾದ ಎಚ್.ಡಿ. ಕುಮಾರಸ್ವಾಮಿ ಈ ರಾಜ್ಯದ ಅನ್ನದಾತರ ಅಳಲನ್ನು ನೋಡಲಾರದೇ ರೈತರ ಸಾಲ ಮನ್ನ ಮಾಡಿ ಜನಮೆಚ್ಚಿಗೆಯನ್ನು ಪಡೆದಿದ್ದಾರೆ ಇದನ್ನು ಮರೆಯದಿರಿ ಎಂದು ನೆನಪಿಸಿದರು.
ಈ ಬಾರಿ ಕುಮಾರಸ್ವಾಮಿ ತಮ್ಮ ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರಂತೆ ವಯೋವೃದ್ದರಿಗೆ . 5 ಸಾವಿರ ಮಾಸಾಸನ ಮತ್ತು ಮಹಿಳೆಯರು ಮಾಡಿರುವ ಸ್ತೀಶಕ್ತಿ ಸಂಘಗಳಲ್ಲಿ ಮಾಡಿರುವ ಸಾಲಮನ್ನ ಸೇರಿದಂತೆ ರೈತರಿಗೆ . 10 ಸಾವಿರ ಸಹಾಯ ಧನ, ರೈತರ ಮಕ್ಕಳ ವಿವಾಹಕ್ಕೆ . 2 ಲಕ್ಷ, ಎಲ್ಲಾ ಗ್ರಾಪಂಗಳಲ್ಲಿ ಉಚಿತ ಅಂಗ್ಲ ಮಾಧ್ಯಮ ಶಾಲೆ ಸೇರಿದಂತೆ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತರಲು ಜೆಡಿಎಸ್ ಬೆಂಬಲಿಸುವಂತೆ ಅವರು ಮನವಿ ಮಾಡಿದರು.
ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಸರ್ಕಾರ ರಚಿಸಿ, ರಾಜ್ಯದಲ್ಲಿ ಜನಪರ ಆಡಳಿತ ನೀಡಲು ಬಿಡದ ಈ ಪಕ್ಷಗಳ ಬೆಂಬಲವಿಲ್ಲದೆ ಸ್ವಾತಂತ್ರ್ಯವಾಗಿ ಸರ್ಕಾರ ರಚನೆ ಮಾಡಲು ಒಂದು ವರ್ಷದಿಂದ 31 ಜಿಲ್ಲೆಗಳಲ್ಲಿ ಪಂಚರತ್ನ ಯಾತ್ರೆಯ ಮೂಲಕ ಪ್ರವಾಸ ಮಾಡಿ ಸ್ವತಂತ್ರ್ಯ ಸರ್ಕಾರ ರಚಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ ನೀಡಬೇಕು ಎಂಬ ಹಠದಿಂದ ಎರಡು ಶಸ್ತಚಕಿತ್ಸೆಯನ್ನು ಲೆಕ್ಕಿಸದೇ ತನ್ನ ಜೀವಕ್ಕಿಂತ ಈ ರಾಜ್ಯದ ಜನರ ಹಿತ ಕಾಪಾಡಲು ಪ್ರಯತ್ನಿಸುತ್ತಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಲಪಡಿಸಲು ತಾಲೂಕಿನ ಜನಪ್ರಿಯ, ಜನಸೇವಕ, ಮಡಿಕೇರಿಯಲ್ಲಿ ಸಚಿವನಾಗಿ ಉತ್ತಮ ಕೆಲಸ ಮಾಡಿದ ಸಾ.ರಾ. ಮಹೇಶ್ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ನಾನು ಮಿರ್ಲೆಯ ಮಗನಾಗಿ, ಇದು ನನ್ನ ಗ್ರಾಮ ಎಂದು ಕಣ್ಣೀರು ಸುರಿಸಿ ಮತದಾರರಲ್ಲಿ ಕೈಮುಗಿದು ಮನವಿ ಮಾಡಿದರು.
ಭರವಸೆ ಈಡೇರಿಸದಿದ್ದರೆ ಮುಂದಿನ ಚುನಾವಣೆಗೆ ನಿಲ್ಲೋಲ್ಲ: ಸಚಿವ ಸುಧಾಕರ್
ಶಾಸಕ ಸಾ.ರಾ. ಮಹೇಶ್ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಅಚ್ಚುತಾನಂದ, ನೇತ್ರಾವತಿ, ಶೋಭಾ ಕೋಟೆಗೌಡ, ಅಣ್ಣೇಗೌಡ, ಮೋಹನ, ಧನಂಜಯ, ರಾಧಕೃಷ್ಣ, ಅರವಿಂದ, ಮಧು, ಪ್ರಸನ್ನ, ಎ.ಟಿ. ಗೋಪಾಲ, ತಿಮ್ಮಪ್ಪ, ರಂಗಸ್ವಾಮಿ, ಲೋಕನಾಥ್, ಒಕ್ಕಲಿಗರ ಸಂಘದ ನಿರ್ದೇಶಕ ಮೂಲೆಪೆಟ್ಲು ಮಹದೇವ್, ಭೂ ನ್ಯಾಯ ಮಂಡಳಿ ಮಾಜಿ ಸದಸ್ಯ ಹೆಬ್ಬಾಳು ಶಿವಣ್ಣ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಧನಂಜಯ, ಸಾಲಿಗ್ರಾಮ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕರ್ತಾಳು ಮಧು, ತಾಲೂಕು ಜೆಡಿಎಸ್ ಅಧ್ಯಕ್ಷ ಮಿರ್ಲೆ ತುಕರಾಂ ಮೊದಲಾದವರು ಇದ್ದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.