
ಮೈಸೂರು[ಅ.19]: ಅನರ್ಹ ಶಾಸಕ ಎಚ್. ವಿಶ್ವನಾಥ್ ಜೊತೆಗಿನ ರಾಜಕೀಯ ಸಂಘರ್ಷಕ್ಕಾಗಿ ಚಾಮುಂಡಿ ಬೆಟ್ಟ ಬಳಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ತಾಯಿ ಚಾಮುಂಡೇಶ್ವರಿ ಬಳಿ ಮಾಜಿ ಸಚಿವ ಸಾ.ರಾ.ಮಹೇಶ್ ಕ್ಷಮೆ ಯಾಚಿಸಿದರು.
'ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಂತೆ ಗುಡಿಯಲ್ಲೇಕೆ ಕುಳಿತೆ? ಬಾ...'
ಗುರುವಾರ ನಡೆದ ಆಣೆ, ಪ್ರಮಾಣದ ಹೈಡ್ರಾಮದಿಂದ ಬೇಸರಗೊಂಡಿದ್ದ ಅವರು ಶುಕ್ರವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಮತ್ತೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗುರುವಾರ ನಡೆದ ಘಟನೆಯ ಬಗ್ಗೆ ದೇವರಲ್ಲಿ ಕ್ಷಮೆ ಕೋರಿದರು.
ಚಾಮುಂಡಿ ಸನ್ನಿಧಿಯಲ್ಲಿ ವಿಶ್ವನಾಥ್‌ಗೆ ಎರಡು ಸವಾಲೆಸೆದ ಸಾರಾ ಮಹೇಶ್!
ಬಳಿಕ ಮಾತನಾಡಿದ ಸಾ.ರಾ. ಮಹೇಶ್, ನಮ್ಮ ರಾಜಕಾರಣಕ್ಕೆ ತಾಯಿ ಸನ್ನಿಧಾನ ಬಳಸಿಕೊಂಡಿದ್ದು ತಪ್ಪು. ನಮ್ಮ ವೈಯಕ್ತಿಕ ವಿಚಾರಗಳಿಗೆ ತಾಯಿ ಸನ್ನಿಧಾನ ಬಳಸಿಕೊಂಡಿದ್ದಕ್ಕೆ ಚಾಮುಂಡೇಶ್ವರಿ ಮತ್ತು ನಾಡಿನ ಜನತೆ ಬಳಿ ಕ್ಷಮೆ ಕೋರುತ್ತೇನೆ. ನನ್ನನ್ನು ಕ್ಷಮಿಸು ತಾಯಿ ಎಂದು ಪ್ರಾರ್ಥಿಸಿದ್ದಾಗಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.