ದಿಢೀರ್ ಕ್ರಮ: 7 ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಿದ ಕರ್ನಾಟಕ ಕಾಂಗ್ರೆಸ್

By Web DeskFirst Published Oct 18, 2019, 7:20 PM IST
Highlights

ಕಾಂಗ್ರೆಸ್ ನ 7 ಮುಖಂಡರು ಪಕ್ಷದಿಂದ ಅಮಾನತ್ತು| ಅಮಾನತ್ತು ಮಾಡಿ ಕೆಪಿಸಿಸಿ ಆದೇಶ| ಕೆ.ಎಚ್ ಮುನಿಯಪ್ಪ ಆಪ್ತರು ಅಮಾನತ್ತು| ಪಕ್ಷ ವಿರೋಧಿ ಚಟುವಟಿಕೆ ಕಾರಣ ನೀಡಿ ಸಸ್ಪೆಂಡ್.

ಬೆಂಗಳೂರು/ಕೋಲಾರ, [ಅ.18]:  ಕೋಲಾರ ಜಿಲ್ಲಾ ಕಾಂಗ್ರೆಸ್‌ನ 7 ಮುಖಂಡರನ್ನು ಪಕ್ಷದಿಂದ ಅಮಾನತ್ತು ಮಾಡಲಾಗಿದೆ. ಪಕ್ಷ ವಿರೋಧಿ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ  7 ಮುಖಂಡರನ್ನು ಅಮಾನತ್ತು ಮಾಡಿ ಕೆಪಿಸಿಸಿ ಆದೇಶ ಹೊರಡಿಸಿದೆ. 

ಶಾಸಕ ಭೈರತಿ ಸುರೇಶ್ ಹತ್ಯೆ ಯತ್ನ ನಡೆದಿದ್ದು ಹೇಗೆ..?

ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್ ಮುನಿಯಪ್ಪ ಆಪ್ತರಾದ 7 ಮುಖಂಡನ್ನು ಅಮಾನತು ಮಾಡಿ ಇಂದು [ಶುಕ್ರವಾರ] ಕರ್ನಾಟಕ ಪ್ರದೇಶ ಕಾಂಗ್ರೆಸ್ (KPCC) ಆದೇಶ ಹೊರಡಿಸಿದೆ. 

ತಮ್ಮ ಬೆಂಬಲಿಗರನ್ನು ಅಮಾನತ್ತು ಮಾಡದಂತೆ ಕೆ.ಎಚ್ ಮುನಿಯಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಮೇಲೆ ಒತ್ತಡ ಹೇರಿದ್ದರು. ಆದರೂ ಇದಕ್ಕೆ ಸೊಪ್ಪು ಹಾಕದ ಗುಂಡೂರಾವ್ ಸಸ್ಪೆಂಡ್ ಮಾಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಘೋರ್ಪಡೆ ಅವರಿಗೆ ಸೂಚಿಸಿದ್ದಾರೆ.

ಅಧ್ಯಕ್ಷರ ಸೂಚನೆ ಮೇರೆಗೆ ಘೋರ್ಪಡೆ ಅವರು ಮುನಿಯಪ್ಪ ಅವರ 7 ಬೆಂಬಲಿಗರನ್ನು ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ.

1. ಪ್ರಸಾದ್ ಬಾಬು, ಅಧ್ಯಕ್ಷರು ಕೋಲಾರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ.
2. ಕುಮಾರ್, ಮಾಜಿ ಕಾರ್ಯದರ್ಶಿ ಕೆಪಿಸಿಸಿ.
3. ಅತವುಲ್ಲಾ, ಕೋಲಾರ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷರು 
4. ಇಕ್ಬಾಲ್ ಅಹಮದ್,   ಉಪಾಧ್ಯಕ್ಷರು,ಅಲ್ಪಸಂಖ್ಯಾತ ವಿಭಾಗ, ಕೆಪಿಸಿಸಿ ಕೋಲಾರ. 
5. ಕೆ. ಜಯದೇವ, ಕೋಲಾರ ಡಿಸಿಸಿಯ ಎಸ್.ಸಿ ವಿಭಾಗದ ಅಧ್ಯಕ್ಷರು.
6. ನಾಗರಾಜ್, ಕೋಲಾರ ಡಿಸಿಸಿಯ ಎಸ್.ಟಿ ವಿಭಾಗದ ಅಧ್ಯಕ್ಷರು.
7. ಎಲ್. ಕಲೀಲ್, ಕೋಲಾರ.

ಇವರುಗಳನ್ನು ಅಮಾನತು ಮಾಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ ಆದೇಶ ಹೊರಡಿಸಿದ್ದಾರೆ. ಇಂದು [ಶುಕ್ರವಾರ] ಮೇಲ್ಕಂಡ ಮುಖಂಡರು ಸುದ್ದಿಗೊಷ್ಟಿ ನಡೆಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಸತ್ಯಶೋಧನಾ ಸಮಿತಿ ಸದಸ್ಯರಿಗೆ 5 ಸ್ಟಾರ್ ಹೋಟೆಲ್ ನಲ್ಲಿ ವಾಸ್ತವ್ಯ ಮಾಡಿಸಿ ನಿದ್ದೆ ಮಾತ್ರೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದ

BSY ಅನ್‌ವಾಂಟೆಡ್ ಚೈಲ್ಡ್ ಎಂದ ಸಿದ್ದು, ಟ್ರಂಪ್ ಇನ್ಮುಂದೆ ಮಾಡಲ್ವಂತೆ ಮುದ್ದು: ಅ.18ರ ಟಾಪ್ 10 ಸುದ್ದಿ!

ಇದನ್ನು ಗಮನಿಸಿದ ಕೆಪಿಸಿಸಿ, ಇದು ಆಧಾರರಹಿತ ಆರೋಪಗಳನ್ನು ಮಾಡಿ ಪತ್ರಿಕೆಗಳಿಗೆ, ಟಿವಿಗಳಿಗೆ  ಹೇಳಿಕೆ ನೀಡಿದ್ದಾರೆ ಎಂದು ಪಕ್ಷವಿರೋಧಿ ಚಟುವಟಿಕೆ ಆಧಾರದ ಮೇಲೆ 7 ನಾಯಕರುಗಳನ್ನು ಅಮಾನತು ಮಾಡಲಾಗಿದೆ ಎಂದು  ವಿ.ವೈ. ಘೋರ್ಪಡೆ ಅಮಾನತು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
 

click me!