
ಬೆಂಗಳೂರು, [ಅ.18]: ಜೆಡಿಎಸ್ ವರಿಷ್ಠರ ಮೇಲೆ ಅಸಮಾಧಾನಗೊಂಡಿರುವ ಪರಿಷತ್ ಸದಸ್ಯರನ್ನು ಮನವೊಲಿಸಲು ಇಂದು [ಶುಕ್ರವಾರ] ಸಭೆ ಕರೆಯಲಾಗಿದ್ದರೂ ಬಂದಿದ್ದು ಬೆರಳೆಣಿಕೆಯಷ್ಟು ಜನ ಮಾತ್ರ.
ಬೆಂಗಳೂರಲ್ಲಿ ಪರಿಷತ್ ಸದಸ್ಯರ ಮನವೊಲಿಸಲು ದೇವೇಗೌಡರು ಮುಂದಾಗಿದ್ದರೆ, ಅತ್ತ ಮೈಸೂರಿನಲ್ಲಿ ಅತೃಪ್ತರ ಮೇಲೆ ಕುಮಾರಸ್ವಾಮಿ ಕಿಡಿಕಾರಿದರು. ಸಭೆಗೆ ಬಂದ ಪರಿಷತ್ ಸದಸ್ಯರ ಜತೆ ಪದವೀಧರ ಕ್ಷೇತ್ರಗಳ ಸ್ಥಾನಗಳಿಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಮಾತ್ರ ಚರ್ಚೆ ನಡೆಸಲಾಗಿದ್ದು. ಅಸಮಾಧಾನಗಳನ್ನು ಶಮನ ಮಾಡಲು ಜೆಡಿಎಸ್ ವರಿಷ್ಠ ದೇವೇಗೌಡರು ಪ್ರಯತ್ನಿಸಿದರು.
ವಿಶ್ವಾಸ ಇಲ್ಲದಿದ್ದರೆ ನಾಯಕತ್ವ ತ್ಯಾಗಕ್ಕೆ ಸಿದ್ಧ: ಕುಮಾರಸ್ವಾಮಿ
ಆದ್ರೆ ಕುಮಾರಸ್ವಾಮಿ ನಡವಳಿಕೆಯಿಂದ ಬೇಸತ್ತ ಪರಿಷತ್ ಸದಸ್ಯರು ಇಂದಿನ ಸಭೆಗೆ ಚಕ್ಕರ್ ಹೊಡೆದರು. ಈ ಹಿನ್ನೆಲೆಯಲ್ಲಿ ಅತೃಪ್ತರ ಮನವೊಲಿಕೆಗೆ ನಡೆಸಿದ ಯತ್ನ ವಿಫಲವಾಗಿದೆ. ಇರುವ 16 ಪರಿಷತ್ ಸದಸ್ಯರ ಪೈಕಿ ಬಂದಿದ್ದು ಕೇವಲ ಆರು ಜನ. ಉಳಿದವರಲ್ಲಿ ಹೊರಟ್ಟಿ ಪೂರ್ವ ನಿಗದಿತ ಕಾರ್ಯಕ್ರಮ ಇದೆ ಎಂದು ತಪ್ಪಿಸಿಕೊಂಡರೆ, ಇನ್ನುಳಿದವರು ನಾಟ್ ರೀಚಬಲ್.
ಸಾ.ರಾ. ಮಹೇಶ್ ರಾಜೀನಾಮೆ ಬೆನ್ನಲ್ಲೇ ಮತ್ತೋರ್ವ JDS ನಾಯಕ ಸರದಿಯಲ್ಲಿ?
ಒಟ್ಟಿನಲ್ಲಿ ಇತ್ತ ತಂದೆ ಅಸಮಾಧಾನಿತ ನಾಯಕರ ಮನವೋಲಿಸಲು ಪ್ರಯತ್ನಿಸಿದ್ದರೆ, ಅತ್ತ ಮೈಸೂರಿನಲ್ಲಿ ಪುತ್ರ ಕುಮಾರಸ್ವಾಮಿ ಅಸಮಾಧಾನಿತ ನಾಯಕರ ವಿರುದ್ಧ ಕಿಡಿಕಾರಿದರು.
"
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.