
ಬೆಂಗಳೂರು: ಸಣ್ಣ ಕಿರಾಣಿ ಅಂಗಡಿ, ಪಂಕ್ಚರ್ ಅಂಗಡಿ ಮಾಡಬೇಕೆಂದರೂ ನೋಂದಣಿಯಾಗಬೇಕು. ಹಾಗೆಯೇ, ಆರ್‌ಎಸ್‌ಎಸ್‌ನಂತಹ ದೊಡ್ಡ ಸಂಸ್ಥೆ ನೋಂದಣಿ ಮಾಡಬೇಕಲ್ಲವೇ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಪ್ರಶ್ನಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆರ್‌ಎಸ್‌ಎಸ್ ಕುರಿತ ಪ್ರಿಯಾಂಕ ಖರ್ಗೆ ಹೇಳಿಕೆಯನ್ನು ಈ ರೀತಿ ಸಮರ್ಥಿಸಿಕೊಂಡರು. ಸಂವಿಧಾನ, ಕಾನೂನು ಎಲ್ಲರಿಗೂ ಒಂದೇ. ನಮ್ಮದೂ ಒಂದು ಸಂಸ್ಥೆಯಿದೆ. ಹಾಗಾದರೆ, ನಾವು ನೋಂದಣಿ ಮಾಡಿಕೊಳ್ಳುವುದಿಲ್ಲ ಎಂದರೆ ಒಪ್ಪಲಾಗುತ್ತದೆಯೇ? ಆರ್‌ಎಸ್‌ಎಸ್‌ಗೆ ಸೇರಿದ ಶಿಕ್ಷಣ ಸಂಸ್ಥೆ ಸೇರಿ ಇನ್ನಿತರ ಸಂಸ್ಥೆಗಳಿಗೆ ಹಣ ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬ ಲೆಕ್ಕ ಇಡಬೇಕಲ್ಲ ಎಂದರು.
ಇದನ್ನೂ ಓದಿ: ಮೋದಿಗೆ ಧೈರ್ಯವಿದ್ದರೆ 12 ವರ್ಷ ಸಾಧನೆ ಹೇಳಿಕೊಳ್ಳಲಿ: RSS ನವ್ರು ದೇಶದ್ರೋಹಿಗಳು ಎಂದ ಪ್ರಿಯಾಂಕ್
ಸರ್ಕಾರದಲ್ಲಿ ಖಾತೆ ವಿಚಾರದಲ್ಲಿನ ಯಾವುದೇ ಗೊಂದಲವಿಲ್ಲ, ಅವೆಲ್ಲ ಮಾಧ್ಯಮಗಳ ಸೃಷ್ಟಿ. ಹಾಗೇನಾದರೂ ಸಮಸ್ಯೆಯಿದ್ದರೂ ಹೈಕಮಾಂಡ್ ನಾಯಕರು ಬಗೆಹರಿಸುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಇದನ್ನೂ ಓದಿ: Priyank Kharge challenges RSS: ವಿಷ ಸರ್ಪಕ್ಕೆ ಹಾಲೆರೆಯಲು ಸಾಧ್ಯವೇ?: ಆರೆಸ್ಸೆಸ್ ಪ್ರಿಯಾಂಕ್ ಖರ್ಗೆ ಸವಾಲೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.