Goa Election 2022 Result ಗೋವಾದಲ್ಲಿ ರೆಸಾರ್ಟ್‌ ರಾಜಕೀಯ ಶುರು!

By Kannadaprabha NewsFirst Published Mar 9, 2022, 4:45 AM IST
Highlights

ಸರ್ಕಾರ ರಚನೆಗೆ ಬಿಜೆಪಿ-ಕಾಂಗ್ರೆಸ್‌ ಭಾರೀ ಕಸರತ್ತು

ಕುದುರೆ ವ್ಯಾಪಾರ ಭೀತಿಯಿಂದ ಅಭ್ಯರ್ಥಿಗಳನ್ನು ರೆಸಾರ್ಟ್‌ಗೆ ಸೇರಿಸಿದ ಕಾಂಗ್ರೆಸ್‌

ಅತಂತ್ರ ಸ್ಥಿತಿ ಸೃಷ್ಟಿಯಾದರೆ ಆಪ್‌, ಟಿಎಂಸಿ ಜತೆ ಮೈತ್ರಿಗೆ ಸಿದ್ಧ: ದಿನೇಶ್‌ ಗುಂಡೂರಾವ್‌

ಪಣಜಿ/ನವದೆಹಲಿ: ಗೋವಾದಲ್ಲಿ (Goa)  ಯಾರಿಗೂ ಬಹುಮತ ಬಾರದೇ ಹೋಗಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು (Exit Poll ) ಸುಳಿವು ನೀಡಿರುವ ಹಿನ್ನೆಲೆಯಲ್ಲಿ, ಸರ್ಕಾರ ರಚನೆಗೆ ಈಗಿನಿಂದಲೇ ಬಿಜೆಪಿ (BJP) ಹಾಗೂ ಕಾಂಗ್ರೆಸ್‌ (Congress) ಪಕ್ಷಗಳು ಕಸರತ್ತು ಆರಂಭಿಸಿವೆ.

ಕಾಂಗ್ರೆಸ್‌ ಪಕ್ಷದವರು ಎಲ್ಲ ಅಭ್ಯರ್ಥಿಗಳನ್ನು ಗೋವಾದ ರೆಸಾರ್ಟ್‌ (Resort) ಒಂದರಲ್ಲಿ ಕೂಡಿ ಹಾಕಿದ್ದು, ಗೆದ್ದ ನಂತರ ತಮ್ಮವರ ಕುದುರೆ ವ್ಯಾಪಾರ ಆಗದಂತೆ ನೋಡಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಇದೇ ವೇಳೆ, ‘ಬಿಜೆಪಿ ವಿರೋಧಿಗಳಾದ ಆಪ್‌ (AAP), ಟಿಎಂಸಿ (TMS) ಯಾರೇ ಆಗಲಿ ಅವರ ಜತೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಮೈತ್ರಿಗೆ ಸಿದ್ಧ’ ಎಂದು ಪಕ್ಷದ ಗೋವಾ ಪ್ರಭಾರಿ, ಕರ್ನಾಟಕ ಕಾಂಗ್ರೆಸ್‌ ಮುಖಂಡ ದಿನೇಶ್‌ ಗೂಂಡೂರಾವ್‌ (Dinesh Gundu Rao) ಹೇಳಿದ್ದಾರೆ. ಈ ಮೂಲಕ ತನ್ನ ಆಪ್‌, ಟಿಎಂಸಿ ವಿರೋಧಿ ನೀತಿಯನ್ನು ಕಾಂಗ್ರೆಸ್‌ ಸಡಿಲಿಸಿದೆ.
ಮತ್ತೊಂದೆಡೆ ಟಿಎಂಸಿ ರಾಜ್ಯ ಅಧ್ಯಕ್ಷ ಕಿರಣ್‌ ಕಾಕೋಂಡ್ಕರ್‌ ಅವರು ‘ಟಿಎಂಸಿ-ಎಂಜಿಪಿ ಮೈತ್ರಿಗೆ ರಾಜ್ಯದಲ್ಲಿ 11 ಸ್ಥಾನ ಬರಲಿವೆ. ನಮ್ಮ ಬೆಂಬಲ ಬಯಸಿದವರ ಜತೆ ನಂತರ ಸಮಾಲೋಚನೆ ಮಾಡಲಿದ್ದೇವೆ’ ಎಂದಿದ್ದಾರೆ. ರಾಜ್ಯಕ್ಕೆ ಟಿಎಂಸಿ ನಾಯಕರಾದ ಅಭಿಷೇಕ್‌ ಬ್ಯಾನರ್ಜಿ, ಡೆರಿಕ್‌ ಓ’ಬ್ರಿಯಾನ್‌, ಟಿಎಂಸಿ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ (Prashanth Kishore) ಕೂಡ ಆಗಮಿಸಿದ್ದಾರೆ.

ಮೋದಿ ಭೇಟಿಯಾದ ಸಾವಂತ್‌: ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ( Goa CM Pramod Sawant ) ದಿಲ್ಲಿಗೆ ತೆರಳಿ ತಮ್ಮ ಸರ್ಕಾರ ರಚನೆ ಕಾರ್ಯತಂತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Prime Minister Modi) ಅವರ ಜತೆ ಹಾಗೂ ಮುಂಬೈನಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ (Maharastra Former CM Devendra Fadnevis ) ಜತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ‘ಎಂಜಿಪಿ ಜತೆ ಮೈತ್ರಿಗೆ ಬಿಜೆಪಿ ಸಿದ್ಧ’ ಎಂದಿದ್ದಾರೆ.

ಎಕ್ಸಿಟ್ ಪೋಲ್ ಗಳಿಗೆ ಹಣ ನೀಡ್ತಿರೋರು ಯಾರು? ಅಖಿಲೇಶ್ ಯಾದವ್ ಪ್ರಶ್ನೆ
ಆದರೆ, ‘ನಮ್ಮನ್ನು ಈ ಹಿಂದೆ ಸಂಪುಟದಿಂದ ಕೈಬಿಟ್ಟಿದ್ದ ಸಾವಂತ್‌ ಮತ್ತೆ ಸಿಎಂ ಆಗದಿದ್ದರೆ ಮಾತ್ರ ಬಿಜೆಪಿಗೆ ಬೆಂಬಲಿಸುವ ಬಗ್ಗೆ ಯೋಚಿಸುತ್ತೇವೆ’ ಎಂದು ಎಂಜಿಪಿ ನಾಯಕ ಸುದಿನ್‌ ಧಾವಳೀಕರ್‌ ( MGP Leader Sudin Dhavalikar )ಸ್ಪಷ್ಟಪಡಿಸಿದ್ದಾರೆ. ಆದರೆ, ‘ಇನ್ನೊಂದು ಪಕ್ಷದ ಸಿಎಂ ಉಮೇದುವಾರರ ಬಗ್ಗೆ ಎಂಜಿಪಿಗೆ ಮಾತಾಡುವ ಹಕ್ಕಿಲ್ಲ’ ಎಂದು ಸಾವಂತ್‌ ತಿರುಗೇಟು ನೀಡಿದ್ದಾರೆ. ಈ ನಡುವೆ ಬುಧವಾರ ರಾಜ್ಯಕ್ಕೆ ಫಡ್ನವೀಸ್‌ ಹಾಗೂ ರಾಜ್ಯ ಬಿಜೆಪಿ ಪ್ರಭಾರಿ ಸಿ.ಟಿ. ರವಿ ( CT Ravi) ಆಗಮಿಸಲಿದ್ದಾರೆ.

ದೇಶದೆಲ್ಲೆಡೆಯಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಧೂಳೀಪಟ, ಶ್ರೀರಾಮುಲು ಭವಿಷ್ಯ
ಮಣಿಪುರದಲ್ಲೂ ಕಟ್ಟೆಚ್ಚರ
ಇಂಫಾಲ:
2017ರಲ್ಲಿ 28 ಸ್ಥಾನ ಗೆದ್ದರೂ, 21 ಸ್ಥಾನ ಗೆದ್ದ ಬಿಜೆಪಿ ಅಧಿಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಘಟನೆ ಇನ್ನೂ ರಾಜ್ಯ ರಾಜಕೀಯದಲ್ಲಿ ಮಾಸಿಲ್ಲ. ಹೀಗಾಗಿಯೇ ಈ ಬಾರಿ ಉಳಿದೆಲ್ಲಾ ಪಕ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಹೆಚ್ಚು ಜಾಗರೂಕವಾಗಿದೆ. ಪಕ್ಷದ ಎಲ್ಲಾ ಶಾಸಕರ ಜೊತೆ ರಾಜ್ಯ ಮತ್ತು ಕೇಂದ್ರ ನಾಯಕರು ನಿಕಟ ಸಂಪರ್ಕದಲ್ಲಿದ್ದು ಅವರ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ ಬಿಜೆಪಿ ನಾಯಕರು ಅಧಿಕಾರಕ್ಕೆ ಮರಳುವ ವಿಶ್ವಾಸ ಹೊಂದಿರುವರಾದರೂ, ಯಾವುದೇ ಎಡವಟ್ಟಿಗೆ ಅವಕಾಶ ನೀಡದೇ, ಶಾಸಕರ ಮೇಲೆ ನಿಗಾ ಇಟ್ಟಿದ್ದಾರೆ. ಮತ್ತೊಂಡೆಡೆ ಅತಂತ್ರ ವಿಧಾನಸಭೆ ರಚನೆಯಾದರೆ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇರುವ ಎನ್‌ಪಿಪಿ ಕೂಡಾ ಇದೇ ರೀತಿ ತನ್ನ ಶಾಸಕರನ್ನು ಬಣದಲ್ಲೇ ಉಳಿಸಿಕೊಳ್ಳಲು ತಂತ್ರ ಹೆಣೆದಿದೆ.

ಗೋವಾದಲ್ಲಿ ರಾಜಕೀಯ ಚಟುವಟಿಕೆ ಶುರು

* ಕಾಂಗ್ರೆಸ್‌ ರಣನೀತಿ ರೂಪಿಸಲು ಗೋವಾಗೆ ಡಿಕೆಶಿ, ಚಿದಂಬರಂ

* ಮೋದಿ ಭೇಟಿ ಮಾಡಿ ಸರ್ಕಾರ ರಚನೆ ಬಗ್ಗೆ ಮಾಹಿತಿ ನೀಡಿದ ಸಿಎಂ ಸಾವಂತ್‌

Latest Videos

* ಎಂಜಿಪಿ ಜತೆ ಮೈತ್ರಿಗೆ ಸಿದ್ಧ: ಸಾವಂತ್‌ ಘೋಷಣೆ

* ಸಾವಂತ್‌ ಸಿಎಂ ಆಗದಿದ್ದರೆ ಬಿಜೆಪಿಗೆ ಬೆಂಬಲ: ಎಂಜಿಪಿ ಇಂಗಿತ

* ರಾಜ್ಯಕ್ಕೆ ಧಾವಿಸಿದ ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ, ಡೆರಿಕ್‌ ಓ’ಬ್ರಿಯಾನ್‌

click me!