ಸಾವರ್ಕರ್ ಪುತ್ಥಳಿಗೆ ಮತ್ತೆ ಬಿಗಿಪಟ್ಟು; ಸರ್ಕಲ್ ಸಾಲಲ್ಲ, ಪುತ್ಥಳಿಯೇ ನಿರ್ಮಾಣವಾಗಲಿ -ಯಶ್ಪಾಲ್ ಸುವರ್ಣ

By Ravi JanekalFirst Published Oct 2, 2022, 4:00 PM IST
Highlights

ಸರ್ಕಲ್ ಸಾಲಲ್ಲ, ಪುತ್ಥಳಿಯೇ ನಿರ್ಮಾಣವಾಗಲಿ ದೇಶದ ಹಿತಕ್ಕಾಗಿ ಸಾವರ್ಕರ್ ಶಿಕ್ಷೆ ಅನುಭವಿಸಿದ್ದಾರೆ. ನಮಗೆ ಆಸ್ಕರ್ ಬಗ್ಗೆ ಗೌರವ ಇದೆ. ಆದರೆ ಇಬ್ಬರ ಕೊಡುಗೆಗೆ ಬಹಳ ವ್ಯತ್ಯಾಸವಿದೆ. ಉಡುಪಿ(Udupi)ಯಂಥ ಪ್ರದೇಶದಲ್ಲಿ ಸಾವರ್ಕರ್ ಪುತ್ಥಳಿ ಇರಲೇಬೇಕು. ಈ ಮೂಲಕ ನಮ್ಮ ದೇಶಪ್ರೇಮ  ಪ್ರಕಟಿಸಬೇಕು‌ ಎಂದಿದ್ದಾರೆ.

ಉಡುಪಿ (ಅ.2) : ಬ್ರಹ್ಮಗಿರಿ ಸರ್ಕಲ್ ನಲ್ಲಿ ಸಾವರ್ಕರ್ ಪುತ್ಥಳಿ ಸ್ಥಾಪನೆಗೆ ಮತ್ತೆ ಒತ್ತಾಯ ಮುಂದುವರಿದಿದೆ. ಸಾವರ್ಕರ್ ಪುತ್ಥಳಿಗೆ ಬೇಡಿಕೆ ಇಟ್ಟಿರುವ ಸ್ಥಳದಲ್ಲಿ ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ನ ನಾಯಕ ಆಸ್ಕರ್ ಫರ್ನಾಂಡಿಸ್ ಅವರ ವೃತ್ತ ಸ್ಥಾಪನೆಗೆ ನಗರಸಭೆ ನಿರ್ಣಯ ಕೈಗೊಂಡಿದೆ. ನಗರಸಭೆಯ ಈ ನಿರ್ಣಯವನ್ನು ಮರುಪರಿಶೀಲಿಸಬೇಕು ಎಂದು ಹಿಂದೂ ಮುಖಂಡ ಯಶ್ ಪಾಲ್ ಸುವರ್ಣ(Yashpal Suvarna)  ಒತ್ತಾಯಿಸಿದ್ದಾರೆ. ಈ ಮೂಲಕ ಸಾವರ್ಕರ್ ಪುತ್ಥಳಿ(Statue of Savarkar)ಯ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.

ಜೀವನದ ಕೊನೆಯವರೆಗೂ ಸೈದ್ಧಾಂತಿಕ ಬದ್ಧತೆ ಹೊಂದಿದ್ದ ಫರ್ನಾಂಡೀಸ್‌: ಸಿದ್ದರಾಮಯ್ಯ

ಅಗಸ್ಟ್ 15 ರಂದು ಸ್ವಾತಂತ್ರ್ಯ ದ ಅಮೃತ ಮಹೋತ್ಸವ(Azadi Ka Amrit Mahotsav) ಆಚರಣೆಯ ಸಂದರ್ಭದಲ್ಲಿ ಬ್ರಹ್ಮಗಿರಿ ವೃತ್ತ(Brahmagiri Circle)ದಲ್ಲಿ ಸಾವರ್ಕರ್ ಅವರ ಭಾವಚಿತ್ರವುಳ್ಳ ಬ್ಯಾನರ್ ಅಳವಡಿಸಲಾಗಿತ್ತು. ಆ ಬಳಿಕ ಹಿಂದೂ ಸಂಘಟನೆಗಳು ಸಾವರ್ಕರ್ ಪುತ್ಥಳಿಯನ್ನು ಇಲ್ಲೇ ಸ್ಥಾಪಿಸಬೇಕು ಎಂದು ಒತ್ತಡ ಹೇರಿದ್ದವು. 

ಪುತ್ಥಳಿ ಗೆ ಬದಲಾಗಿ ಹಳೇ ತಾಲೂಕು ಆಫೀಸ್ ಕಚೇರಿಯ ಮುಂಭಾಗದಲ್ಲಿ ಸಾವರ್ಕರ್ ವೃತ್ತ(Savarkar Circle) ನಿರ್ಮಿಸೋಣ ಎಂದು ಶಾಸಕರು ಸಲಹೆ ನೀಡಿದ್ದರು. ಬ್ರಹ್ಮಗಿರಿಯಲ್ಲಿ ಆಸ್ಕರ್ ಫರ್ನಾಂಡೀಸ್ ವೃತ್ತ(Oscar Fernandes circle) ನಿರ್ಮಾಣಕ್ಕೆ ಈ ಮೊದಲೇ ತೀರ್ಮಾನ ಮಾಡಲಾಗಿತ್ತು.

ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಯಶ್ ಪಾಲ್ ಸುವರ್ಣ(Yashpal Suvarna), ಸಾವರ್ಕರ್ ದೇಶ ಕಂಡ ಮಹಾನ್ ವ್ಯಕ್ತಿ. ದೇಶದ ಇತಿಹಾಸದಲ್ಲಿ ಎರಡು ಬಾರಿ ಜೀವಾವಧಿ ಶಿಕ್ಷೆ ಅನುಭವಿಸಿದ್ದ ಏಕೈಕ ಸ್ವಾತಂತ್ರ್ಯ ವೀರ.  ಸಾವರ್ಕರ್ ಗೂ ಆಸ್ಕರ್ ಫರ್ನಾಂಡಿಸ್ ಗೂ ಅಜಗಜಾಂತರ ವ್ಯತ್ಯಾಸವಿದೆ, ಹಾಗಾಗಿ ಬ್ರಹ್ಮಗಿರಿ ವೃತ್ತದಲ್ಲೇ ಸಾವರ್ಕರ್ ಪುತ್ಥಳಿ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದ್ದಾರೆ. 

ದೇಶದ ಹಿತಕ್ಕಾಗಿ ಸಾವರ್ಕರ್ ಶಿಕ್ಷೆ ಅನುಭವಿಸಿದ್ದಾರೆ. ನಮಗೆ ಆಸ್ಕರ್ ಬಗ್ಗೆ ಗೌರವ ಇದೆ. ಆದರೆ ಇಬ್ಬರ ಕೊಡುಗೆಗೆ ಬಹಳ ವ್ಯತ್ಯಾಸವಿದೆ. ಉಡುಪಿ(Udupi)ಯಂಥ ಪ್ರದೇಶದಲ್ಲಿ ಸಾವರ್ಕರ್ ಪುತ್ಥಳಿ ಇರಲೇಬೇಕು. ಈ ಮೂಲಕ ನಮ್ಮ ದೇಶಪ್ರೇಮ  ಪ್ರಕಟಿಸಬೇಕು‌ ಎಂದಿದ್ದಾರೆ.

ನಮಗೆ ಶಾಸಕರ ಬಗ್ಗೆ ಗೌರವವಿದೆ, ಆಸ್ಕರ್ ಫರ್ನಾಂಡಿಸ್ ತೀರಿಕೊಂಡಾಗ ನಗರಸಭೆ ಸರ್ಕಲ್ ನಿರ್ಮಿಸುವ ನಿರ್ಣಯ ಕೈಗೊಂಡಿತ್ತು.ನಗರಸಭೆ ಕೈಗೊಂಡ ನಿರ್ಧಾರ ಅಂದು ಸರಿಯೇ ಇತ್ತು. ಆದರೆ ಈ ನಿರ್ಣಯವನ್ನು ವಾಪಾಸು ಪಡೆಯಲು ನಗರ ಸಭೆಗೆ ಅವಕಾಶವಿದೆ. ನಿರ್ಣಯ ವಾಪಸ್ ಪಡೆದು ಸಾವರ್ಕರ್ ವೃತ್ತ, ಪುತ್ಥಳಿ ನಿರ್ಮಿಸಿ. ಆಸ್ಕರ್ ಗೆ ಗೌರವ ಸೂಚಿಸುವ ರೀತಿಯಲ್ಲಿ ಬೇರೆ ಕೆಲಸ ಮಾಡಿ. ಬೇರೆ ಕಟ್ಟಡ, ಕ್ರೀಡಾಂಗಣ, ರಸ್ತೆಗೆ ಆಸ್ಕರ್ ಹೆಸರು ಇಡಿ. ಬ್ರಹ್ಮಗಿರಿಗೆ ಸಾವರ್ಕರ್ ಸರ್ಕಲ್ ಹೆಸರಿಟ್ಟು ಪುತ್ಥಳಿ ಸ್ಥಾಪಿಸಿ ಎಂದು ಮತ್ತೊಮ್ಮೆ ಆಗ್ರಹಿಸಿದ್ದಾರೆ.

ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾವರ್ಕರ್ ಪುತ್ಥಳಿ:ಯಶ್ ಪಾಲ್ ಸುವರ್ಣ ನಗರಸಭೆಗೆ ಪತ್ರ

ಪುತ್ಥಳಿ ನಿರ್ಮಾಣದಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಆಸ್ಕರ್ ಫರ್ನಾಂಡಿಸ್ ಅವರ ಭೂಮಿ ಬ್ರಹ್ಮಗಿರಿಯಲ್ಲೇ ಇದೆ. ಕಾಂಗ್ರೆಸಿಗರಿಗೆ, ಕುಟುಂಬದವರಿಗೆ ಅಭಿಮಾನವಿದ್ದರೆ ಖಾಸಗಿ ಭೂಮಿಯಲ್ಲಿ ಪುತ್ಥಳಿ ಸ್ಥಾಪಿಸಲಿ. ಒಂದೆರಡು ಸೆಂಟ್ಸ್ ಜಾಗ ನಗರ ಸಭೆಗೆ ಬಿಟ್ಟುಕೊಟ್ಟು ಪುತ್ಥಳಿ ನಿರ್ಮಿಸಲಿ. ಆಸ್ಕರ್ ವಾಸವಿದ್ದ ಮನೆಯ ಎದುರಲ್ಲೇ ಪುತ್ಥಳಿ ನಿರ್ಮಾಣ ಮಾಡಲಿ ಎಂದಿದ್ದಾರೆ.

click me!