ವರದಿಗಾರರ ಡೈರಿ: ರಾಹುಲ್‌ ಗಾಂಧಿ ನಡೆಸಲಿರುವ ಹೊಸ ಯಾತ್ರೆ ಯಾವುದು ಅಂತ ಸಿದ್ದರಾಮಯ್ಯಗೆ ಗೊತ್ತಿಲ್ವಾ?

Published : Jan 01, 2024, 12:40 PM IST
ವರದಿಗಾರರ ಡೈರಿ: ರಾಹುಲ್‌ ಗಾಂಧಿ ನಡೆಸಲಿರುವ ಹೊಸ ಯಾತ್ರೆ ಯಾವುದು ಅಂತ ಸಿದ್ದರಾಮಯ್ಯಗೆ ಗೊತ್ತಿಲ್ವಾ?

ಸಾರಾಂಶ

ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲೆ ಕೆ.ಆರ್‌. ನಗರದಲ್ಲಿ ಕೃಷಿಕ ಸಮಾಜ, ಕೃಷಿ ಪೂರಕ ಇಲಾಖೆ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ವಿಸ್ತರಣಾ ಶಿಕ್ಷಣ ಘಟಕ, ತಾಲೂಕು ಯುವ ರೈತ ವೇದಿಕೆ ವತಿಯಿಂದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ತಾಲೂಕು ಮಟ್ಟದ ಕಿಸಾನ್‌ ಗೋಷ್ಠಿಯಲ್ಲಿ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಡಾ.ಮಂಜುನಾಥ್‌ ಅಂಗಡಿ ಹಾಗೂ ರೈತ ಮಹಿಳೆಯರ ನಡುವೆ ಸಂಭಾಷಣೆ ಆರಂಭವಾಯಿತು.

ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲೆ ಕೆ.ಆರ್‌. ನಗರದಲ್ಲಿ ಕೃಷಿಕ ಸಮಾಜ, ಕೃಷಿ ಪೂರಕ ಇಲಾಖೆ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ವಿಸ್ತರಣಾ ಶಿಕ್ಷಣ ಘಟಕ, ತಾಲೂಕು ಯುವ ರೈತ ವೇದಿಕೆ ವತಿಯಿಂದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ತಾಲೂಕು ಮಟ್ಟದ ಕಿಸಾನ್‌ ಗೋಷ್ಠಿಯಲ್ಲಿ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಡಾ.ಮಂಜುನಾಥ್‌ ಅಂಗಡಿ ಹಾಗೂ ರೈತ ಮಹಿಳೆಯರ ನಡುವೆ ಸಂಭಾಷಣೆ ಆರಂಭವಾಯಿತು.

ಈ ವೇಳೆ ಡಾ.ಮಂಜುನಾಥ್‌ ಅಂಗಡಿ ರೈತ ಮಹಿಳೆಯರಿಗೆ ಒಂದೊಂದೇ ಪ್ರಶ್ನೆ ಕೇಳತೊಡಗಿದರು.

ಒಂದು ದಿನಕ್ಕೆ ಒಬ್ಬ ವ್ಯಕ್ತಿ ಎಷ್ಟು ಸೊಪ್ಪು, ಎಷ್ಟು ತರಕಾರಿ ತಿನ್ನಬೇಕು?

-ಗೊತ್ತಿಲ್ಲ ಸಾ..

ಒಂದು ದಿನಕ್ಕೆ ಒಬ್ಬ ಮನುಷ್ಯ 50 ಗ್ರಾಂ ಸೊಪ್ಪು, 250 ಗ್ರಾಂ ತರಕಾರಿ ತಿನ್ನಬೇಕು.

-ಹೌದಾ ಸಾ..

- ನಿಮಗೆಲ್ಲಿ ಗೊತ್ತಿದೆ. ಸೊಪ್ಪು ತಿನ್ನಿ ಅಂದ್ರೆ 50 ಗ್ರಾಂ ಪಾನಿಪುರಿ ತಿಂತೀರಾ, ತರಕಾರಿ ತಿನ್ನಿ ಅಂದ್ರೆ 250 ಗ್ರಾಂ ಗೋಬಿ ಮಂಚೂರಿ ತಿಂತಿರಾ ಎಂದಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿತು.

ನೆನಪಿನ ರಾಮಯ್ಯಗೂ ಮರೆವು!

ತಮ್ಮ ಸ್ಮರಣ ಶಕ್ತಿ, ಭಾಷೆಯ ಮೇಲಿನ ಹಿಡಿತ, ವಾಕ್ಚಾತುರ್ಯದಿಂದ ಗಮನ ಸೆಳೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಶಕಗಳ ಹಿಂದಿನ ಘಟನೆಯನ್ನು ದಿನಾಂಕದ ಸಹಿತ ಸ್ಮರಿಸಿಕೊಂಡು ಎಳೆ-ಎಳೆಯಾಗಿ ಬಿಚ್ಚಿಡುವ ಸಾಮರ್ಥ್ಯವಿದೆ. ಆದರೆ ಅವರಿಗೂ ಒಂದೊಂದು ಸಾರಿ ನೆನಪು ಕೈಕೊಡುತ್ತಿದೆ. 

 ರಿಪೋರ್ಟರ್ಸ್ ಡೈರಿ: ಸಿದ್ದು ಸ್ಟ್ರಾಂಗ್, ಅವರಿಗೆ ಮಾಟ-ಮಂತ್ರ ತಟ್ಟಲ್ಲ!

ಇದಕ್ಕೆ ಸಾಕ್ಷಿ ಏನು ಅಂತೀರಾ, ಕಾರ್ಯಕ್ರಮವೊಂದರಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಮುಂಬರುವ ದಿನಗಳಲ್ಲಿ ಹಮ್ಮಿಕೊಂಡಿರುವ ಬೃಹತ್‌ ಜಾಥಾದ ಹೆಸರನ್ನು ನೆನಪಿಸಿಕೊಳ್ಳಲು ಸಿದ್ದು ಕಷ್ಟ ಪಡಬೇಕಾಯಿತು. ಕೊನೆಗೆ ಸಭಿಕರೇ ಹೇಳಿ ಸರಿಪಡಿಸಿದ ಪ್ರಸಂಗ ನಡೆಯಿತು.

ಹೌದು. ಕಳೆದ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್‌ನ 139ನೇ ಸಂಸ್ಥಾಪನಾ ದಿನದ ವೇಳೆ ಮಾತನಾಡಿದ ಸಿದ್ದರಾಮಯ್ಯ, ‘ರಾಹುಲ್‌ ಗಾಂಧಿ ಪ್ರಧಾನಮಂತ್ರಿ ಆಗಬೇಕು. ಅವರು ದೇಶದಲ್ಲಿ ಸಾಮಾಜಿಕ ನ್ಯಾಯ ಸ್ಥಾಪನೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಮಣಿಪುರದಿಂದ ಮುಂಬೈವರೆಗೆ ಎರಡನೇ ಭಾರತ್‌ ಜೋಡೋ ಯಾತ್ರೆ’ ಮಾಡುತ್ತಿದ್ದಾರೆ ಎಂದರು. 

 

ಭಾಷಣ ಮಾಡಲು ಜೋಶ್‌ನಿಂದ ಬಂದಿದ್ದ ನಾಯಕರು; ವಿಶ್ವಕಪ್‌ ಫೈನಲ್‌ನಿಂದ ಕಂಗಾಲು

ಇದಕ್ಕೆ ಸಭಿಕರು, ‘ಅದು ಭಾರತ್‌ ಜೋಡೋ ಅಲ್ಲ ಸಾರ್‌’ ಎಂದು ಕೂಗಿದರು. ಸಿದ್ದರಾಮಯ್ಯ, ‘ಭಾರತ ನ್ಯಾಯ ಅಲ್ಲವೇ’ ಎಂದು ಮರು ಪ್ರಶ್ನಿಸಿದರು. ಸಭಿಕರು ‘ಭಾರತ ನ್ಯಾಯ ಯಾತ್ರೆ’ ಎಂದು ಕೂಗಿದರು. ಅದು ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ಕೇಳದ ಕಾರಣ, ‘ಭಾರತ್‌ ಜೋಡೋ 2, ನ್ಯಾಯ ಭಾರತ’ ಎನ್ನತೊಡಗಿದರು. ಕೊನೆಗೆ ಸಭಿಕರು ಜೋರಾಗಿ ಕೂಗಿದ್ದರಿಂದ ಸಿದ್ದರಾಮಯ್ಯ ತಮ್ಮ ಹೇಳಿಕೆ ಸರಿಪಡಿಸಿಕೊಂಡರು. ‘ಆ... ಹೌದು.. ಭಾರತ ನ್ಯಾಯ ಯಾತ್ರೆ’ ಎಂದು ತಮ್ಮ ದಾಟಿಯಲ್ಲೇ ಸರಿ ಮಾಡಿಕೊಂಡು ಮುಂದುವರೆದರು.

- ಅಂಶಿ ಪ್ರಸನ್ನಕುಮಾರ್‌

- ಗಿರೀಶ್‌ ಗರಗ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ