ಸಿಜೆಪಿ-ಕಾಂಗ್ರೆಸ್ ಎರಡೂ ಒಂದೇ, ಭಾರತ ವಿರೋಧಿಗಳಿಗೆ ರಾಹುಲ್ ಗಾಂಧಿ ಬೆಂಬಲ? ಶ್ರೀರಾಮುಲು ಹೇಳಿದ್ದೇನು?

Kannadaprabha News   | Kannada Prabha
Published : Oct 18, 2026, 07:29 AM IST
Congress CJP Anti-india

ಸಾರಾಂಶ

ರಾಹುಲ್ ಗಾಂಧಿ ಅವರು ಈಗ ಜಿರಳೆ ಪಕ್ಷದ ನಾಯಕರಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ವಿದ್ಯಾರ್ಥಿ ಹಾಗೂ ನೀಟ್ ಹೋರಾಟದ ನೆಪದಲ್ಲಿ ಕಾಂಗ್ರೆಸ್ ದೇಶದಲ್ಲಿ ಬಾಂಗ್ಲಾ ಮಾದರಿಯ ಅರಾಜಕತೆ ಸೃಷ್ಟಿಸಲು ಹುನ್ನಾರ ನಡೆಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಕೊಪ್ಪಳ (ಅ.17): ರಾಹುಲ್ ಗಾಂಧಿ ಅವರು ಈಗ ಜಿರಳೆ ಪಕ್ಷದ ನಾಯಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಜತೆಗೂಡಿಸಿ ಜಿರಳೆ ಪಕ್ಷದ ನಾಯಕ ಆಗಲಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದರು.

ಇದು ಕಾಂಗ್ರೆಸ್‌ನ ಇನ್ನೊಂದು ಮುಖ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿ ಹೋರಾಟದ ಮುಖವಾಡ ಧರಿಸಿ ಬಂದ ಜಿರಳೆಗಳ ನಿಜಬಣ್ಣ ಈಗ ಬಯಲಾಗಿದೆ. ಇದು ವಿದ್ಯಾರ್ಥಿ ಸಂಘಟನೆ ಅಲ್ಲ, ವಿದ್ಯಾರ್ಥಿ, ನೀಟ್ ನೆಪದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಬಂದ ಕಾಂಗ್ರೆಸ್‌ನ ಇನ್ನೊಂದು ಮುಖ ಎಂಬುದು ಈಗ ಬಯಲಾಗಿದೆ.

ಕಾಂಗ್ರೆಸ್‌ಗಿಂತ ಜಿರಳೆ ಪಕ್ಷದ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಹೆಚ್ಚಿನ ಒಲವು ಇದ್ದಂತಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರ ಮೂಲಕ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅರಾಜಕತೆಯ ಹಾದಿ ಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ನೇಹಾ ಬೋರಾ ಬಾಂಗ್ಲಾ ಮಾದರಿ ಹೋರಾಟ!

ನೇಹಾ ಬೋರಾ ಅವರು ಬಾಂಗ್ಲಾದ ಅರಾಜಕತೆಯ ಹೋರಾಟದ ಕುರಿತು ಮಾತನಾಡುವಾಗ ರಾಹುಲ್ ಗಾಂಧಿ ಅವರೂ ಪಕ್ಕದಲ್ಲಿದ್ದರು. ಬಾಂಗ್ಲಾ ಮಾದರಿಯ ಹೋರಾಟ ಭಾರತದಲ್ಲಿಯೂ ನಡೆಯಬೇಕು ಎಂಬ ಸಂದೇಶ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ದೇಶದ ಜನರು ಕಾಂಗ್ರೆಸ್‌ ವಿರುದ್ಧ ತೀರ್ಮಾನ ಕೈಗೊಳ್ಳುತ್ತಿದ್ದು, ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿನ್ನೆ-ಮೊನ್ನೆಯ ನೇಹಾ ಬೋರಾಗೆ ಮಣೆ: ಆಂತರಿಕ ಬಿರುಕು? ಓಪನ್ನಾಗಿ ಅಸಮಾಧಾನ ಹೊರಹಾಕಿದ ಕಾರ್ಯಕರ್ತರು
ಜಿರಳೆಗಳ ಕಾಟಕ್ಕೆ ವ್ಯಾಪಾರಸ್ಥರು ಹೈರಾಣ: ನಿತ್ಯ ಕೋಟಿ ಕೋಟಿ ಲಾಸ್​- ಪ್ರಧಾನಿ ಮೊರೆ ಹೋದ ವ್ಯಾಪಾರಿಗಳು