ತನಿಖೆ ಎದುರಿಸಲು ಸಿದ್ಧ, 'ಅಮ್ಮ'ನ ಚಿಕಿತ್ಸೆಯಲ್ಲಿ ತಲೆಹಾಕಿಲ್ಲ: ಜಯಲಲಿತಾ ಸಾವಿನ ಆರೋಪಿ ಶಶಿಕಲಾ

Published : Oct 19, 2022, 12:39 PM IST
ತನಿಖೆ ಎದುರಿಸಲು ಸಿದ್ಧ, 'ಅಮ್ಮ'ನ ಚಿಕಿತ್ಸೆಯಲ್ಲಿ ತಲೆಹಾಕಿಲ್ಲ: ಜಯಲಲಿತಾ ಸಾವಿನ ಆರೋಪಿ ಶಶಿಕಲಾ

ಸಾರಾಂಶ

Jayalalithaa Death: ಜಯಲಲಿತಾ ಸಾವಿಗೆ ಆಪ್ತಮಿತ್ರೆ ವಿ.ಕೆ. ಶಶಿಕಲಾ ಕಾರಣ ಎಂಬ ಆರುಮುಗಂ ಸಮಿತಿ ವರದಿಯನ್ನು ಶಶಿಕಲಾ ಖಂಡಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಈ ರೀತಿಯ ವರದಿಯನ್ನು ಸಮಿತಿ ನೀಡಿದೆ. ಇದರ ಪರಾಮರ್ಶೆಯನ್ನು ಜನರಿಗೇ ಬಿಡುತ್ತೇನೆ ಎಂದು ಶಶಿಕಲಾ ಹೇಳಿದ್ದಾರೆ. 

ಚೆನ್ನೈ: ಜಸ್ಟಿಸ್‌ ಆರುಮುಗಂ ಸ್ವಾಮಿ ಸಮಿತಿಯ ವರದಿಯಲ್ಲಿ ವಿ.ಕೆ. ಶಶಿಕಲಾ ಸೇರಿದಂತೆ ಹಲವರನ್ನು ಜಯಲಲಿತಾ ಸಾವಿಗೆ ಕಾರಣರು ಎಂದು ಹೇಳಲಾಗಿದೆ. ಜತೆಗೆ ಶಶಿಕಲಾ ವಿರುದ್ಧ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಶಿಕಲಾ, "ನಾನು ಯಾವುದೇ ರೀತಿಯ ತನಿಖೆಯನ್ನು ಎದುರಿಸಲು ಸಿದ್ಧಳಿದ್ದೇನೆ. ನಾನು ಎಂದೂ ಜಯಲಲಿತಾರ ಚಿಕಿತ್ಸೆಯಲ್ಲಿ ತಲೆ ಹಾಕಿಲ್ಲ," ಎಂದು ಹೇಳಿದ್ದಾರೆ. ಶಶಿಕಲಾ ನೀಡಿರುವ ಹೇಳಿಕೆಯಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಹೇಳಿದಂತೆ ಸಮಿತಿ ವರದಿ ನೀಡಿದೆ. ನಮ್ಮ ವಿರುದ್ಧ ಆರೋಪಿಸುವಂತೆ ಸರ್ಕಾರ ಹೇಳಿದೆ, ಅದರಂತೆ ಸಮಿತಿ ಸುಳ್ಳು ಆರೋಪಗಳನ್ನು ಮಾಡಿದೆ, ಎಂದು ಶಶಿಕಲಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

"ವರದಿಯಲ್ಲಿ ಹೇಳಿರುವಂತೆ 2012ರ ನಂತರ ನನ್ನ ಮತ್ತು ಅಮ್ಮ (ಜಯಲಲಿತಾ) ಸಂಬಂಧ ಹಳಸಿತ್ತು. ಸಮಿತಿಗೆ ಇದರ ಸತ್ಯಾಸತ್ಯತೆ ತಿಳಿಯಲು ಹೇಗೆ ಸಾಧ್ಯ. ಈ ರೀತಿಯ ಸುಳ್ಳು ಆರೋಪ ಮಾಡುವ ಅಗತ್ಯತೆ ಸಮಿತಿಗೆ ಏನಿತ್ತು? ನಾನು ಈ ಆರೋಪದ ಪರಾಮರ್ಶೆಯನ್ನು ಜನರಿಗೇ ಬಿಡಲು ಇಚ್ಚಿಸುತ್ತೇನೆ. ಯಾರ ರಾಜಕೀಯ ಹಿತಕ್ಕಾಗಿ ಈ ರೀತಿಯ ಆರೋಪ ಮಾಡಲಾಗಿದೆ ಎಂಬುದನ್ನು ಜನರೇ ಊಹಿಸಿಕೊಳ್ಳಲಿ," ಎಂದು ಶಶಿಕಲಾ ಹೇಳಿದ್ದಾರೆ. ಜಯಲಲಿತಾ ಅವರ ಜೊತೆ ನಾನು ಇದ್ದ ದಿನಗಳಿಂದಲೂ ಆರೋಪಗಳು ನನ್ನ ಮೇಲೆ ಬರುತ್ತಲೇ ಇವೆ. ಇದು ನನಗೆ ಅಭ್ಯಾಸವಾಗಿ ಹೋಗಿದೆ ಎಂದು ಶಶಿಕಲಾ ಹೇಳಿದ್ದಾರೆ. 

"ಅಮ್ಮನ ಸಾವಿನ ವಿಚಾರದಲ್ಲಿ ಯಾವುದೇ ಸಂಶಯವಿಲ್ಲ. ಅವರು ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದರು, ಆದರೆ ದುರಾದೃಷ್ಟದಿಂದ ಸಾವನ್ನಪ್ಪಿದರು. ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೆಲ್ಲರಿಗೂ ಈ ವಿಚಾರದ ಅರಿವಿದೆ," ಎಂದು ಶಶಿಕಲಾ ಪ್ರತಿಕ್ರಿಯಿಸಿದ್ದಾರೆ. 

ತಮಿಳು ನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ಮಾಡಿರುವ ಆರುಮುಗಸ್ವಾಮಿ ಕಮೀಷನ್‌ 608 ಪುಟಗಳ ವರದಿಯನ್ನು ಸಲ್ಲಿಸಿದೆ. ಜಯಲಲಿತಾ ಅವರ ಸಾವಿಗೆ ಶಶಿಕಲಾ ಅವರೇ ಕಾರಣ ಎಂದು ಕಮೀಷನ್‌ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಜತೆಗೆ ಶಶಿಕಲಾ ಮತ್ತು ಮಾಜಿ ಆರೋಗ್ಯ ಸಚಿವರ ವಿರುದ್ಧ ತನಿಖೆ ನಡೆಸುವಂತೆ ಆಯೋಗ ಸಲಹೆ ನೀಡಿದೆ. ವರದಿಯ ಪ್ರಕಾರ ಶಶಿಕಲಾ, ಜಯಲಲಿತಾರ ಖಾಸಗಿ ವೈದ್ಯ ಮತ್ತು ಶಶಿಕಲಾರ ಸಂಬಂಧಿ ಡಾ. ಶಿವಕುಮಾರ್‌, ಮಾಜಿ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಧಾಕೃಷ್ಣನ್‌ ಮತ್ತು ಮಾಜಿ ಆರೋಗ್ಯ ಸಚಿವ ವಿಜಯಭಾಸ್ಕರ್‌ ಅವರು ತಪ್ಪಿತಸ್ಥರು ಎಂದು ಹೇಳಲಾಗಿದೆ. ಆಯೋಗ ಈ ಎಲ್ಲರ ವಿರುದ್ಧವೂ ತನಿಖೆ ನಡೆಸುವಂತೆ ಸಲಹೆ ನೀಡಿದೆ. 2016ರ ಸೆಪ್ಟೆಂಬರ್‌ ತಿಂಗಳಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಜಯಲಲಿತಾ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಹಿಡಿದು ಅವರ ಸಾವಿನ ವರೆಗೂ ಅವರಿಗೆ ನೀಡಲಾದ ಚಿಕಿತ್ಸೆ, ಅವರ ಆರೋಗ್ಯದಲ್ಲಾದ ಬದಲಾವಣೆಗಳು ಎಲ್ಲದರ ಕುರಿತು ಆಯೋಗ ವಿಚಾರಣೆ ನಡೆಸಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ಅವರಿಗೆ ವರದಿ ನೀಡಿದ್ದರು. ಇಂದು ತಮಿಳುನಾಡು ವಿಧಾಸಭೆಯಲ್ಲಿ ಎಂ ಕೆ ಸ್ಟಾಲಿನ್‌ ಆಯೋಗದ ವರದಿಯನ್ನು ಪ್ರಸ್ತುತ ಪಡಿಸಿದ್ದಾರೆ. 

ಇದನ್ನೂ ಓದಿ: BIG BREAKING: ಬಯಲಾಯ್ತು Jayalalithaa ಸಾವಿನ ರಹಸ್ಯ, ಸಾವಿಗೆ ಆಪ್ತ ಸ್ನೇಹಿತೆ ಶಶಿಕಲಾರೇ ಕಾರಣ

ಜಯಲಲಿತಾ 2016ರ ಡಿಸೆಂಬರ್‌ 5ರಂದು ಮೃತಪಟ್ಟಿದ್ದರು. ಆರುಮುಗಸ್ವಾಮಿ ಆಯೋಗವನ್ನು ಹಿಂದಿನ ಎಐಎಡಿಎಂಕೆ ಸರ್ಕಾರ 2017ರ ನವೆಂಬರ್‌ 22ರಂದು ರಚಿಸಿತ್ತು. ಮಡ್ರಾಸ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರುಮುಗಂ ಅವರು ಆಯೋಗದ ಮುಖ್ಯಸ್ಥರಾಗಿ ತನಿಖೆ ನಡೆಸಿದರು. ಇದಾದ ಸುಮಾರು ಐದು ವರ್ಷಗಳ ನಂತರ ಇದೀಗ ಆಯೋಗ ವರದಿ ನೀಡಿದೆ. ಇದರಿಂದ ಶಶಿಕಲಾ ಮತ್ತು ಇತರ ಆರೋಪಿಗಳ ವಿರುದ್ಧ ಶೀಘ್ರ ತನಿಖೆಯಾಗುವ ಸಾಧ್ಯತೆಯಿದೆ. ಜಯಲಲಿತಾ ಅವರ ಸಾವಿನ ದಿನದಿಂದಲೂ ಶಶಿಕಲಾ ಅವರ ಮೇಲೆ ಶಂಕೆ ಕೇಳಿಬಂದಿತ್ತು. ಜಯಲಲಿತಾ ಅವರಿಗೆ ಹಲವು ದಿನಗಳಿಂದ ವಿಷವನ್ನು ನಿಧಾನವಾಗಿ ಶಶಿಕಲಾ ಕೊಡುತ್ತಾ ಬಂದಿದ್ದರು ಎಂಬ ಆರೋಪಗಳು ಕೇಳಿ ಬಂದಿತ್ತು. ಈಗ ಈ ಆರೋಪಗಳು ವರದಿಯಲ್ಲಿ ದೃಢಪಟ್ಟಿವೆ. 

ಇದನ್ನೂ ಓದಿ: ಜಯಲಲಿತಾ ಸಾವಿನ ಕೇಸಲ್ಲಿ ಶಶಿಕಲಾ ವಿರುದ್ಧ ಕ್ರಮಕ್ಕೆ ಶಿಫಾರಸು

ವರದಿಯ ಮುಖ್ಯಾಂಶಗಳು:

  • ವರದಿಯನ್ನು ತಮಿಳು ನಾಡು ಸರ್ಕಾರಕ್ಕೆ ಆರುಮುಗಮ್‌ ಸಮಿತಿ ಆಗಸ್ಟ್‌ ತಿಂಗಳಲ್ಲೇ ನೀಡಿತ್ತು. ಜಯಲಲಿತಾ ಸಾವಿನ ಬಗ್ಗೆ ಇರುವ ಸಂಶಯವನ್ನು ನಿವಾರಿಸುವಂತೆ ಡಿಎಂಕೆ ಪಕ್ಷ ಈ ಹಿಂದೆಯೇ ಭರವಸೆ ನೀಡಿತ್ತು. ಅದರಂತೆ ಇಂದು ಸದನದ ಮುಂದೆ ವರದಿಯನ್ನು ಸ್ಟಾಲಿನ್‌ ಪ್ರಸ್ತಾಪಿಸಿದ್ದಾರೆ. 
  • ಜಯಲಲಿತಾ ಸಾವಿನ ಸಂದರ್ಭದಲ್ಲಿ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಡಾ. ರಮಾ ಮೋಹನ ರಾವ್‌ ಅವರು ಜಯಲಲಿತಾ ಅವರೂ ಜಯಲಲಿತಾ ಸಾವಿಗೆ ಕಾರಣರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 
  • ತಮಿಳು ನಾಡು ಮಾಜಿ ಆರೋಗ್ಯ ಸಚಿವ ವಿಜಯ ಭಾಸ್ಕರ್‌ ಮತ್ತು ಅಪೋಲೊ ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರತಾಪ್‌ ರೆಡ್ಡಿ ಜಯಲಲಿತಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!