20 ಕೋಟಿ ರೂ. ಆಸ್ತಿಯೊಡೆಯ ಮಾಜಿ ಸ್ಪೀಕರ್ ಕೋಳಿವಾಡ!

By Web Desk  |  First Published Nov 17, 2019, 8:05 AM IST

 ಕೋಳಿವಾಡ . 20 ಕೋಟಿ ಆಸ್ತಿಯೊಡೆಯ| 2018 ಕ್ಕಿಂತ ಆಸ್ತಿಯಲ್ಲಿ 4.75 ಕೋಟಿ ಇಳಿಕೆ


ಹಾವೇರಿ[ನ.17]: ರಾಣಿಬೆನ್ನೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶನಿವಾರ ನಾಮಪತ್ರ ಸಲ್ಲಿಸಿರುವ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರು 20.47 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ಕೋಳಿವಾಡ ಅವರು ಚುನಾವಣಾಧಿಕಾರಿಗಳಿಗೆ ಶನಿವಾರ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಕುಟುಂಬದ ಆಸ್ತಿ ವಿವರವನ್ನು ಘೋಷಣೆ ಮಾಡಿಕೊಂಡಿದ್ದಾರೆ. ಕೆ.ಬಿ. ಕೋಳಿವಾಡ ಹೆಸರಿನಲ್ಲಿ . 9,93,96,628 ಮೌಲ್ಯದ ಚರಾಸ್ಥಿ ಹಾಗೂ1,05,61,500 ಮೌಲ್ಯದ ಸ್ಥಿರಾಸ್ತಿ ಸೇರಿದಂತೆ 10,99,58,128 ಕೋಟಿ ಮೌಲ್ಯದ ಆಸ್ತಿ ವಿವರ ಸಲ್ಲಿಸಿದ್ದಾರೆ.

Tap to resize

Latest Videos

ಪತ್ನಿ ಪ್ರಭಾವತಿ ಹೆಸರಿನಲ್ಲಿ 40,83,099 ಮೌಲ್ಯದ ಚರಾಸ್ತಿ, 9.07,25,175 ಮೌಲ್ಯದ ಸ್ಥಿರಾಸ್ತಿ ಸೇರಿದಂತೆ 9,48,08,274 ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಕೆ.ಬಿ. ಕೋಳಿವಾಡರ ಹೆಸರಿನಲ್ಲಿ . 21.60 ಲಕ್ಷ ಮೌಲ್ಯದ 600 ಗ್ರಾಂ ಬಂಗಾರ, 2.25 ಲಕ್ಷ ಮೌಲ್ಯದ 5 ಕೆಜಿ ಬೆಳ್ಳಿ, ಪತ್ನಿ ಹೆಸರಿನಲ್ಲಿ 36 ಲಕ್ಷ ಮೌಲ್ಯದ 1000 ಗ್ರಾಂ ಬಂಗಾರ, 4.50 ಲಕ್ಷ ಮೌಲ್ಯದ 10 ಕೆಜಿ ಬೆಳ್ಳಿ ಇದೆ. ಕೆ.ಬಿ. ಕೋಳಿವಾಡ ಅವರು ಯಾವುದೇ ವಾಹನ ಹೊಂದಿಲ್ಲ.

ಕೆ.ಬಿ. ಕೋಳಿವಾಡ ಅವರಲ್ಲಿ 40 ಸಾವಿರ ನಗದು ಹೊಂದಿದ್ದಾರೆ. ವಿವಿಧ ಹಣಕಾಸು ಸಂಸ್ಥೆ, ಬ್ಯಾಂಕಿನಲ್ಲಿ 12,07,81,950 ಹಾಗೂ ಪತ್ನಿ ಹೆಸರಿನಲ್ಲಿ 3,24,36,458 ರು. ಸೇರಿ ಒಟ್ಟು 15.32 ಕೋಟಿ ಸಾಲ ಇದೆ ಎಂದು ಘೋಷಣಾ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ 2018ರ ಚುನಾವಣೆಯಲ್ಲಿ ಕೆ.ಬಿ.ಕೋಳಿವಾಡ ಅವರು ಒಟ್ಟು 25,22,31,668 ರು. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಈ ಬಾರಿ ಆಸ್ತಿಯಲ್ಲಿ ಸುಮಾರು 4.75 ಕೋಟಿಯಷ್ಟುಇಳಿಕೆ ಕಂಡು ಬಂದಿದೆ.

click me!