*ಈಗಲ್ಟನ್ ವಿಚಾರವಾಗಿ ಸಂಸದರ ಹೇಳಿಕೆ
*ಡಿ.ಕೆ.ಸುರೇಶ್‌ಗೆ ಟಾಂಗ್ ನೀಡಿದ ಎಚ್‌ಡಿಕೆ
*ರಾಮನಗರದಲ್ಲಿ ಮಾಜಿ ಸಿಎಂ ವಾಗ್ದಾಳಿ
ರಾಮನಗರ (ಮಾ. 13): ನಗರದ ಹೊರವಲಯದಲ್ಲಿನ ಈಗಲ್ಟನ್ ರೆಸಾರ್ಟ್‌ಗೆ (Eagleton Resort) ದಂಡ ವಿಧಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ನಡುವೆ ಬಜೆಟ್ ಮೇಲಿನ ಚರ್ಚೆ ವೇಳೆ ತೀವ್ರ ವಾಗ್ಯುದ್ಧ ನಡೆದಿತ್ತು. ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್‌ಡಿಕೆ ನಾನು ರಾಮನಗರದಲ್ಲಿ ಇರೋದು ಅನ್ಯಾಯದ ಬಗ್ಗೆ ಪ್ರಶ್ನಿಸಲು ಎಂದು ಹೇಳಿದ್ದಾರೆ.
"ಸದನದಲ್ಲಿ ನೀರಾವರಿ ವಿಚಾರ ಪ್ರಸ್ತಾಪ ಮಾಡಿದ್ದು ನೋಡಲಿಲ್ವ, ಸದನದಲ್ಲಿ ನೀರಾವರಿ ಬಗ್ಗೆ ಚರ್ಚೆ ಮಾಡಿದ್ದೇನಲ್ಲ, ಅದನ್ನೇನು ನೋಡಿದ್ರಂತ, ಈಗಲ್ಟನ್‌ಗೆ 98 ಸಾವಿರ ಕೊಡಬೇಕು ಎಂದು ಹೇಳಿ 980 ಕೋಟಿ ದಂಡ ಹಾಕಿದ್ದು ಯಾರು, ಬಂಡೆಗಳನ್ನು ವಿದೇಶಕ್ಕೆ ಸಾಗಿಸಿದವರಿಂದ ನಾನು ಬುದ್ದಿ ಕಲಿಯಬೇಕೇ?" ಎನ್ನುವ ಮೂಲಕ ಸಂಸದ ಡಿ.ಕೆ.ಸುರೇಶ್‌ಗೆ ಎಚ್‌ಡಿಕೆ ಟಾಂಗ್ ನೀಡಿದ್ದಾರೆ
ಇದನ್ನೂ ಓದಿ: Karnataka Politics: ಡಿಕೆಶಿ ಬ್ರದರ್ಸ್ ಮಣ್ಣಿನ ಮಕ್ಕಳಲ್ಲ, ಕಲ್ಲಿನ ಮಕ್ಕಳು: HDK
"ಯಾವುದೇ ವಿಷಯದಲ್ಲಿ ಅನ್ಯಾಯ ಆಗಿರಲಿ ಅದನ್ನು ಜನತೆ ಮುಂದಿಡುವೆ, ಇಂತಹದನ್ನು ಜನತೆ ಮುಂದೆ ಇಡಲು ಇಲ್ಲಿ ನಾನಿರುವುದು, ಅವರಿಂದ ನಾನು ವಿಚಾರಗಳನ್ನು ಕಲಿಯಬೇಕಿಲ್ಲ. ಅವರಿಂದ ಯಾವ ವಿಷಯ ಎತ್ತಬೇಕು, ರೈತರ ವಿಷಯದಲ್ಲಿ ಏನು ಮಾತನಾಡಬೇಕು ಎಂದು ಕಲಿಯಬೇಕಾಗಿಲ್ಲ, ಕನಕಪುರದಲ್ಲಿ ಎಷ್ಟು ರೈತ ಕುಟುಂಬಗಳನ್ನು ಹಾಳು ಮಾಡಿದ್ದಾರೋ, ಹಣ ದಾಹಕ್ಕೆ ಜಮೀನು ಹೊಡೆದು ಬಂಡೆಗಳನ್ನು ಲೂಟಿ ಮಾಡಿದ್ದಾರೋ" ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ
ನೀರಾವರಿ ಬಗ್ಗೆ ಚರ್ಚೆ ನಡೆಸಿದ್ದೇನೆ: "ರೈತರ ಪರವಾಗಿ ಯಾವ ವಿಷಯ ಚರ್ಚೆ ಮಾಡಬೇಕು ಎಂದು ಹೇಳಿ. ನೀರಾವರಿ ಬಗ್ಗೆ 3 ಗಂಟೆಗಳ ಜಾಲ ಚರ್ಚೆ ನಡೆಸಿದ್ದೇನೆ. ಎತ್ತಿನಹೊಳೆ ಪರಿಸ್ಥಿತಿ ಏನು, ಮೇಕೆದಾಟು ಪರಿಸ್ಥಿತಿ ಏನು, ಅಪ್ಪರ್ ಕೃಷ್ಣ ಪರಿಸ್ಥಿತಿ ಏನಾಗಿದೆ. ನವಿಲೇ ಡ್ಯಾಮ್ ಕಟ್ಡಲು ಏನಾಗಿದೆ ಸಮಸ್ಯೆ ಇದೆಲ್ಲಾ ವಿಷಯ ಸುದೀರ್ಘವಾಗಿ ಸದನದಲ್ಲಿ ಚರ್ಚೆ ಮಾಡಿದ್ದೇನಲ್ಲ, ಇವರ ಬಳಿ ಒಂದು ಸಬ್ಜೆಕ್ಟ್ ಮಾಹಿತಿ ಇಟ್ಟುಕೊಂಡಿದ್ದರೋ" ಎಂದು ಹೇಳಿದ್ದಾರೆ
"ನೀರಾವರಿ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ದ್ರೋಹ ಮಾಡಿವೆ, ಇದನ್ನು ಸದನದಲ್ಲಿ ಚರ್ಚೆ ನಡೆಸುವ ಸಂದರ್ಭದಲ್ಲಿ ಹೇಳಿದ್ದೇನೆ. ಈಗಲ್‌ಟನ್ ವಿಚಾರವಾಗಿ ಕೋರ್ಟ್ ಆದೇಶ ಧಿಕ್ಕರಿಸಿದ್ದಾರೆ. ಇದರ ಬಗ್ಗೆ ನಾನು ಚರ್ಚೆ ಮಾಡಿದ್ದೇನೆ ಇದು ತಪ್ಪೇ?" ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಯೋಜನೆ, ಕೇಂದ್ರ ಸಚಿವರ ಹೇಳಿಕೆಗೆ ಡಿಕೆ ಬ್ರದರ್ಸ್ ಕಿಡಿ
ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಕರ್ತವ್ಯ: "ಒಬ್ಬ ಜನ ಪ್ರತಿನಿಧಿಯಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದೇನೆ, ಯಾರಿಗೆ ಅನ್ಯಾಯವಾಗಲಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಜನ ಪ್ರತಿನಿಧಿ ಕರ್ತವ್ಯ. ಜನ ಪ್ರತಿನಿಧಿ ಕರ್ತವ್ಯ ಅಂದ್ರೆ ಇವರಿಗೆ ಕಂಡವರ ಜಮೀನು ಲೂಟಿ ಹೊಡೆಯುವುದು, ಕಿಡ್ನಾಪ್ ಮಾಡಿಸೋದು, ಮಕ್ಕಳನ್ನ ಹೆದರಿಸಿ ತಂದೆ ತಾಯಿ ಕೈಯಲ್ಲಿ ರುಜು ಹಾಕಿಸಿಕೊಳ್ಳೋದು, ಇದು ಅವರ ಜೀವನ ನಾನು ಈ ಜೀವನ ಮಾಡಿಲ್ಲ, ಇವನಿಂದ ನಾನೇನು ಕಲಿಯಬೇಕಾಗಿಲ್ಲ"
"ನನ್ನ ಸುದ್ದಿಗೆ ಇವನು ಬರಬೇಕಾಗಿಲ್ಲ. ಇವರು ಯಾವ ರೀತಿ ದೇಶ ಲೂಟಿ ಹೊಡೆದಿದ್ದಾರೆ, ಇವರ ಬ್ಯಾಕ್ ಗ್ರೌಂಡ್ ನನಗೆ ಗೊತ್ತು. ಸರ್ಕಾರ ನಡೆಸುವವರಿಗೆ ಸಹಿ ಮಾಡಬೇಕಾದರೆ ಬುದ್ದಿ ಇರಬೇಕು. ಒಂದು ಸಹಿ ಹಾಕಬೇಕಾದರೆ ತಲೆಯಲ್ಲಿ ಬುದ್ದಿ ಇರಬೇಕು. ಕಾಂಗ್ರೆಸ್ ಸರ್ಕಾರದಲ್ಲೇ ತಾನೇ ಈಗಲ್‌ಟನ್ ವಿಚಾರ ಆಗಿರೋದು . ನಾಳೆ ಮತ್ತೆ ಸದನದಲ್ಲಿ ಮತ್ತಷ್ಟು ದಾಖಲೆ ಬಿಡುಗಡೆ ಮಾಡುತ್ತೇನೆ " ಎಂದು ಎಚ್‌ಡಿಕೆ ಹೇಳಿದ್ದಾರೆ