* ನನಗೆ ಈಗಾಗಲೇ ನಾಲ್ಕೈದು ಕ್ಷೇತ್ರದಿಂದ ನಿಲ್ಲಲು ಹೇಳುತ್ತಿದ್ದಾರೆ
* ನಾನು ಈವರೆಗೂ ಎಲ್ಲಿ ನಿಲ್ಲಬೇಕು ಅಂತ ತೀರ್ಮಾನ ಮಾಡಿಲ್ಲ
* ಈ ಬಗ್ಗೆ ಯೋಚನೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ
ಮಂಡ್ಯ/ಗದಗ(ಮಾ.13): ನಾನು ಚಾಮುಂಡೇಶ್ವರಿ(Chamundeshwari) ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡುವುದಿಲ್ಲ. ನನಗೆ ಈಗಾಗಲೇ ನಾಲ್ಕೈದು ಕ್ಷೇತ್ರದಿಂದ ನಿಲ್ಲಲು ಹೇಳುತ್ತಿದ್ದಾರೆ. ಆದ್ರೆ ನಾನು ಈವರೆಗೂ ಎಲ್ಲಿ ನಿಲ್ಲಬೇಕು ಎಂದು ತೀರ್ಮಾನ ಮಾಡಿಲ್ಲ. ಈ ಬಗ್ಗೆ ಯೋಚನೆ ಮಾಡಿ ತೀರ್ಮಾನ ಮಾಡುತ್ತೇನೆ. ಆದ್ರೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಲ್ಲ ಅಂತ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಸ್ಪಷ್ಟಪಡಿಸಿದ್ದಾರೆ.
ಇಂದು(ಭಾನುವಾರ) ಮಂಡ್ಯ(Mandya) ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಅವಧಿಗೂ ಮುನ್ನ ರಾಜ್ಯದಲ್ಲಿ(Karnataka) ಚುನಾವಣೆ ಬರಲ್ಲ. ಈ ಬಗ್ಗೆ ಸ್ವತಃ ಬಿಜೆಪಿ ನಾಯಕರೇ ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai), ಬಿ.ಎಸ್. ಯಡಿಯೂರಪ್ಪ(BS Yediyurappa), ಸಿಟಿ ರವಿ(CT Ravi) ಸೇರಿದಂತೆ ಹಲವರು ಹೇಳಿದ್ದಾರೆ. ಅವಧಿಗೂ ಮುನ್ನ ಯಾಕಾಗಿ ಚುನಾವಣೆ ಮಾಡ್ತಾರೆ. ಮುಂದಿನ ವರ್ಷ(2023) ಏಪ್ರಿಲ್‌ನಲ್ಲಿ ಚುನಾವಣೆ(Election) ಇರೋದು. ಇದೆಲ್ಲ ಊಹಾಪೋಹಗಳಷ್ಟೇ ಅಂತ ಹೇಳಿದ್ದಾರೆ. ಅವಧಿಗೂ ಮುನ್ನ ಚುನಾವಣೆ ಬಂದ್ರೆ ನಾವು ಸಿದ್ಧರಿದ್ದೇವೆ. ಜನರು ನಮ್ಮ ಪರವಾಗಿದ್ದಾರೆ ಅಂತ ಸಿದ್ದರಾಮಯ್ಯ ತಿಳಿಸಿದ್ದಾರೆ.
Karnataka Politics: ನಾವೇನು ರಾಜಕೀಯ ಸನ್ಯಾಸಿಗಳಲ್ಲ, ಬಿಜೆಪಿ ಸರ್ಕಾರ ಕಿತ್ತೊಗೆಯಲು ಹೋರಾಟ: ಸಿದ್ದು
ರಾಹುಲ್ ಗಾಂಧಿ ಪಾರ್ಟ ಟೈಂ ರಾಜಕಾರಣಿ
ಗದಗ: ಇನ್ನು ಗದಗನಲ್ಲಿ(Gadag) ಮಾತನಾಡಿದ ಸಾರಿಗೆ ಸಚಿವ ಬಿ. ಶ್ರೀರಾಮುಲು(B Sriramulu) ಅವರು, ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ನೋಡಿದಾಗ ಇಡೀ ದೇಶದಲ್ಲಿ ಕಾಂಗ್ರೆಸ್(Congress) ಧೂಳಿಪಟ ಆಗುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ನಮ್ಮ ಹಿರಿಯ ನಾಯಕ ಸಂತೋಷಜಿ(BL Santosh) ಹೇಳಿದ ಹಾಗೆಯೇ ಆಗಿದೆ. ರಾಹುಲ್ ಗಾಂಧಿ(Rahul Gandhi) ಪಾರ್ಟ ಟೈಂ ರಾಜಕಾರಣಿ ಆಗಿ ಉಳಿತಾರೆ ಅಂತ ಹೇಳಿದ್ರು.
ಇವತ್ತು ಕಾಂಗ್ರೆಸ್ ಪಕ್ಷ ಕೂಡ ಪಕ್ಷವಾಗಿ ಉಳಿಯದೇ ಪಾರ್ಟ ಟೈಂ ಪಾರ್ಟಿಯಾಗಿ ಉಳಿದಿದೆ. ದೇಶದಾದ್ಯಂತ ಮೋದಿಜಿ(Narendra Modi) ಅವರಿಂದ ವೈಟ್ ವಾಶ್ ಮಾಡುವಂಥ ಕೆಲಸ ಆಗಿದೆ ಅಂತ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಎಲ್ಲಿಯೂ ಅಸ್ತಿತ್ವ ಉಳಿದಿಲ್ಲ. ಎಲ್ಲಾ ಕಡೆ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಕರ್ನಾಟಕದಲ್ಲಿ(Karnataka) ಹುಡುಕಾಟ ಮಾಡುವಂಥ ಪ್ರಯತ್ನ ಮಾಡ್ತಿದೆ. ಇಂದು ಅವರು ಎಷ್ಟೇ ತಿಪ್ಪರಲಾಗ ಹಾಕಿದರೂ ಸಹ 2023 ಕ್ಕೆ ಜನ ನಮಗೆ ಬಹುಮತ ನೀಡುತ್ತಾರೆ. ಕಾಂಗ್ರೆಸ್‌ನವರಿಗೆ ಯಾವುದೇ ರೀತಿಯ ಅಜೆಂಡಾ ಇಲ್ಲ. ರಾಜಕಾರಣ ಯಾವ ಆಧಾರದ ಮೇಲೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಹೋರಾಟಗಳೆಲ್ಲವೂ ಬರೀ ನಾಟಕದ ಹೋರಾಟವಾಗಿವೆ ಅಂತ ಶ್ರೀರಾಮುಲು ಲೇವಡಿ ಮಾಡಿದ್ದಾರೆ.
ದೇಶ, ರಾಜ್ಯವನ್ನು ಆರ್ಥಿಕ ದಿವಾಳಿಯಾಗಿಸಿದ ಬಿಜೆಪಿ ಸರ್ಕಾರ
ಕೆ.ಆರ್. ನಗರ: ಪ್ರಧಾನಿ ನರೇಂದ್ರಮೋದಿ ಮತ್ತು ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ದೇಶ ಮತ್ತು ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯನ್ನಾಗಿ ಮಾಡಿವೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದರು.
Russia-Ukraine Crisis: ಕೇಂದ್ರದ ನಿರ್ಲಕ್ಷ್ಯದಿಂದಲೇ ನವೀನ್ ಸಾವು: ಸಿದ್ದರಾಮಯ್ಯ
ಮಾ.4 ರಂದು ಸಾಲಿಗ್ರಾಮ ತಾಲೂಕಿನ ತಂದ್ರೆಕೊಪ್ಪಲು (Tandreoppal) ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕೋಣಮ್ಮ ತಾಯಿ ದೇವಾಲಯ (Konamma Temple) ಉದ್ಘಾಟನೆ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ 5 ಲಕ್ಷದ 18 ಸಾವಿರ ಕೋಟಿ ಮತ್ತು ರಾಜ್ಯ ಸರ್ಕಾರ 2 ಲಕ್ಷದ 20 ಸಾವಿರ ಕೋಟಿ ಸಾಲ ಮಾಡಿದ್ದು, ಜನರನ್ನು ಸಾಲದ ಸುಳಿಯಲ್ಲಿ ಮುಳುಗಿಸಿದ್ದು, ಇದು ಅಭಿವೃದ್ಧಿ ಕಾರ್ಯಗಳಿಗೆ ಮಾರಕವಾಗಿ ಪರಿಣಮಿಸಿದೆ ಎಂದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಸರ್ಕಾರಗಳು ಸಾಲ ಮಾಡುವುದು ಸಹಜ, ಆದರೆ ಆ ಹಣದಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಿ ಸರ್ಕಾರಕ್ಕೆ ಮತ್ತು ದೇಶಕ್ಕೆ ಆಸ್ತಿಯನ್ನು ಮಾಡದೇ ಕೇವಲ ಸಂಬಳ ನೀಡಲು ಸಾಲ ಮಾಡುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು. ನಾನು ಬಜೆಟ್ ಮಂಡಿಸುವ ವೇಳೆ ಕೇವಲ 13 ಸಾವಿರ ಕೋಟಿ ಸಾಲವಿತ್ತು. ಆದರೆ, ಈಗ ಎಲ್ಲಾ ಮಿತಿಗಳನ್ನು ಮೀರಿಯಾಗಿದೆ ಎಂದು ಸಿದ್ಧರಾಮಯ್ಯ ಹೇಳಿದರು. ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದುಕೊಂಡಿದೆ. ಜನರ ಬೆಂಬಲದಿಂದ ಅವರು ಅಧಿಕಾರಕ್ಕೆ ಏರಿಲ್ಲ ಎಂದು ಟೀಕೆ ಮಾಡಿದ್ದರು.