ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಅಗತ್ಯ ಬಿದ್ದರೆ ಮಾತ್ರ ಎನ್‌ಐಎ ತನಿಖೆಗೆ: ಸಿಎಂ ಸಿದ್ದರಾಮಯ್ಯ

By Govindaraj SFirst Published Mar 3, 2024, 8:17 PM IST
Highlights

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಬಾಂಬ್ ಸ್ಫೋಟ ಪ್ರಕರಣವನ್ನು ಅಗತ್ಯ ಬಂದಾಗ ಎನ್ಐಎ ತನಿಖೆಗೆ ವಹಿಸುವ ಕುರಿತು ಯೋಚನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಬಾಂಬ್ ಸ್ಫೋಟ ಪ್ರಕರಣವನ್ನು ಅಗತ್ಯ ಬಂದಾಗ ಎನ್ಐಎ ತನಿಖೆಗೆ ವಹಿಸುವ ಕುರಿತು ಯೋಚನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಬಾಂಬ್ ಸ್ಫೋಟ ಪ್ರಕರಣವನ್ನು ಎನ್ಐಎಗೆ ವಹಿಸಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿರುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ. ತನಿಖೆ ಆರಂಭವಾಗಿದೆ. ಆರೋಪಿಗಳು ಸಿಕ್ಕಿಲ್ಲ. ಎನ್ಐಎಗೆ ವಹಿಸುವ ಅಗತ್ಯ ಇದ್ದರೆ ನೋಡೋಣ ಎಂದರು.

Latest Videos

ಸಿಲ್ಲಿ ಘಟನೆ ಅಲ್ಲ: ಸಚಿವ ಶರಣ ಪ್ರಕಾಶ ಪಾಟೀಲ ಅವರು ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಸಿಲ್ಲಿ ಘಟನೆ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಬಾಂಬ್ ಬ್ಲಾಸ್ಟ್ಗಳು ಯಾವಾಗಲೂ ಸಿಲ್ಲಿ ಘಟನೆಗಳಾಗುವುದಿಲ್ಲ. ಸರ್ಕಾರ ಇದನ್ನು ಗಂಭೀರವಾಗಿಯೇ ತೆಗೆದುಕೊಳ್ಳುತ್ತದೆ. ಜನರ ಸುರಕ್ಷತೆ ಬಹಳ ಮುಖ್ಯ ಎಂದು ಹೇಳಿದರು. ಬ್ರಾಂಡ್ ಬೆಂಗಳೂರು ಬದಲಿಗೆ ಬಾಂಬ್ ಬೆಂಗಳೂರು ಆಗುತ್ತಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಉತ್ತರಿಸಿದ ಸಿದ್ದರಾಮಯ್ಯ, ಅವರ ಕಾಲದಲ್ಲಿ ನಾಲ್ಕು ಬಾರಿ ಬಾಂಬ್ ಸ್ಫೋಟಗೊಂಡಾಗ ಬೆಂಗಳೂರು ಏನಾಗಿತ್ತು, ಎನ್ಐಎ, ಐಬಿ, ರಾ ಯಾರದ್ದು, ಅವರ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದರು.ಬಾಂಬ್ ಸ್ಫೋಟವನ್ನು ನಾನು ಸಮರ್ಥನೆ ಮಾಡುತ್ತಿಲ್ಲ. ಖಂಡಿಸುತ್ತೇನೆ. ಆದರೆ ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡಬಾರದು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆದಾಗ, ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುಂದೆ ಬಾಂಬ್ ಸ್ಫೋಟಿಸಿದಾಗ ಯಾರು ಅಧಿಕಾರದಲ್ಲಿದ್ದರು ಎಂದರು.

ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದ ಓಪಿಎಸ್‌ ಜಾರಿಗೆ ಬದ್ಧ: ಸಚಿವ ಸಂತೋಷ್‌ ಲಾಡ್‌

ನಿಗಮ, ಮಂಡಳಿ-ಸಮರ್ಥನೆ: ಬರದ ಸಂದರ್ಭದಲ್ಲಿ ನಿಗಮ ಮಂಡಳಿಗಳಿಗೆ ನೇಮಕ ಮಾಡಿದ್ದನ್ನು ಸಮರ್ಥಿಸಿಕೊಂಡ ಮುಂಖ್ಯಮಂತ್ರಿಗಳು, ಬರಗಾಲ ಬಂದಿರುವುದು ನಿಜ. ಅಧಿಕಾರಕ್ಕೆ ಬರಲು ಕಾರ್ಯಕರ್ತರು ಕಾರಣವಲ್ಲವೇ, ನಾವೆಲ್ಲ ಅಧಿಕಾರವನ್ನು ಹಂಚಿಕೊಳ್ಳಬೇಕಲ್ಲವೇ, ಬರೇ ನಾವೇ ಸಚಿವರಾದರೆ ಪಕ್ಷವನ್ನು ಅಧಿಕಾರಕ್ಕೆ ತಂದ ಕಾರ್ಯಕರ್ತರು ಏನು ಮಾಡಬೇಕು ಎಂದು ಮರು ಪ್ರಶ್ನೆ ಹಾಕಿದ ಅವರು, ಕರ್ನಾಟಕದ ಬಜೆಟ್ ೩ ಲಕ್ಷ ೭೧ ಸಾವಿರ ಕೋಟಿ ಇದೆ. ನಿಗಮ ಮಂಡಳಿಗೆ ಒಂದೆರಡು ಕೋಟಿ ಬೇಕಾಗಬಹುದು ಎಂದರು.ತಾಲ್ಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸಲು ಕೆಲವು ನಿಯಮಗಳಿವೆ ಅದರ ವ್ಯಾಪ್ತಿಯಲ್ಲಿ ಬರದ್ದಿದ್ದರೆ ಪಟ್ಟಿಯಲ್ಲಿ ಸೇರಿಸಲು ಆಗುವುದಿಲ್ಲ. 

ದೇಶಕ್ಕಾಗಿ, ಯುವಜನರ ಭವಿಷ್ಯಕ್ಕಾಗಿ ನರೇಂದ್ರ ಮೋದಿ ಮತ್ತೆ ಗೆಲ್ಲಬೇಕಿದೆ: ಸಿ.ಟಿ.ರವಿ

ಈಗ ೨೨೩ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಉಳಿದವು ಕೇವಲ 17 ತಾಲ್ಲೂಕು ಮಾತ್ರ. ನಿಯಮದ ಒಳಗೆ ಬರುವುದಾಗಿದ್ದರೆ ಅದನ್ನೇಕೆ ಬಿಡುತ್ತಿದ್ದೆವು ಎಂದರು.ಮಂಗನ ಕಾಯಿಲೆಗೆ ನಿಯಂತ್ರಣಕ್ಕೆ ಲಸಿಕೆ ನೀಡುವ ಕುರಿತು ಆರೋಗ್ಯ ಇಲಾಖೆ ಸಚಿವರು ಮತ್ತು ಇಲಾಖೆ ಕಾರ್ಯದರ್ಶಿಗಳ ಜೊತೆ ಮಾತನಾಡುತ್ತೇನೆ ಎಂದರು.ಲೋಕಸಭೆ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದೆ. ಅದನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ. ಕನಿಷ್ಟ 20 ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ಬಿಜೆಪಿಯವರ ರೀತಿ ನಾವು ಸುಳ್ಳು ಹೇಳುವುದಿಲ್ಲ ಎಂದರು.

click me!