* ಸಿದ್ದು ವೇಸ್ಟ್ ಬಾಡಿ, ಮುಂದಿನ ಬಾರಿ ಸೋಲ್ತಾನೆ
* ಸಿದ್ದರಾಮಯ್ಯಗೆ ಭಯ ಹುಟ್ಟಿದೆ
* ‘ವೇಸ್ಟ್ ಬಾಡಿ’ ಯಾರಂತ ರಾಜ್ಯಕ್ಕೇ ಗೊತ್ತು: ಸಿದ್ದು
ಗೋಕಾಕ(ಡಿ,16): ತಮ್ಮ ರಾಜಕೀಯ ಗುರು, ವಿಪ್ಷಕ ನಾಯಕ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ವೇಸ್ಟ್ ಬಾಡಿ, ಅವನದ್ದು ಮುಗಿದ ಕಥೆ. ಮುಂದಿನ ಬಾರಿ ಸೋಲ್ತಾನೆ ಎಂದು ಟೀಕಿಸಿದ್ದಾರೆ. ನಗರದ ತಮ್ಮ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಕ್ಷೇತ್ರದಲ್ಲಿ ಅಡ್ಡಾದಂತಹ ಮನುಷ್ಯ. ಅವನ ಕಥೆ ಮುಗಿದುಹೋಗಿದೆ. ಮುಂದಿನ ದಿನಗಳಲ್ಲಿ ಎಲ್ಲಿಯೇ ನಿಂತರೂ ಸೋಲುತ್ತಾನೆ ಎಂದರು.
ಬಿಜೆಪಿಯವರಿಗೆ ತಾಕತ್ ಇದ್ದರೆ ರಮೇಶ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಒಬ್ಬ ಹಿಂದುಳಿದ ಪ್ರಮುಖ ನಾಯಕ ಹೊರಬೀಳ್ತಾ ಇದಾನೆ (ಹೊರಹೊಮ್ಮುತ್ತಿದ್ದಾನೆ) ಎಂದು ಸಿದ್ದರಾಮಯ್ಯಗೆ ಭಯ ಹುಟ್ಟಿದೆ. ಇದರಿಂದ ನನಗೆ ಚ್ಯುತಿ ಬರುತ್ತದೆಂದು ಹೆದರಿದ್ದಾನೆ. ಕುರುಬರೆಲ್ಲ ಸಿದ್ದರಾಮಯ್ಯನನ್ನು ರಿಜೆಕ್ಟ್ ಮಾಡಿದ್ದಾರೆ. ಸೋತ ಮನುಷ್ಯ, ತೆಗ್ಗಿಗೆ ಬೀಳೋ ಮನುಷ್ಯನ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
undefined
Council Election Result: ಬೆಳಗಾವಿಯಲ್ಲಿ ಲಖನ್ ಗೆಲುವು, ಬಿಜೆಪಿಗೆ ರಮೇಶ ಜಾರಕಿಹೊಳಿ ಬಿಸಿತುಪ್ಪ!
ಡಿಕೆಶಿಗೆ ಕಠೋರ ಉತ್ತರ
ನಾನು ಮನೆಯನ್ನು ಬಿಡುವ ಪೂರ್ವದಲ್ಲಿ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಹಾಗೂ ಸಂಘದಿಂದ ನನಗೆ ಕರೆ ಮಾಡಿದ್ದರು. ಏನೂ ಮಾತನಾಡಬೇಡ ಎಂದು ಅವರು ಆದೇಶ ಮಾಡಿದ್ದಾರೆ. ಹೀಗಾಗಿ ಸದ್ಯಕ್ಕೆ ನಾನು ಏನು ಮಾತನಾಡುವುದಿಲ್ಲ. ಅವರ ಆದೇಶ ಪಾಲನೆ ಮಾಡುವುದು ನನ್ನ ಕರ್ತವ್ಯವಾಗಿದೆ. ಬಹಳಷ್ಟುವಿಷಯಗಳ ಕುರಿತು ಬಹಳ ಗಂಭೀರವಾಗಿ ಹೇಳುವ ವಿಚಾರವಿತ್ತು. ಡಿಕೆಶಿ ಆರೋಪಗಳ ಬಗ್ಗೆಯೂ ಬಹಳ ಕಠೋರವಾಗಿ ಹೇಳುವವನಿದ್ದೆ. ಆದರೆ, ಅನಿವಾರ್ಯ ಕಾರಣಗಳಿಂದ ಏನನ್ನು ಹೇಳಲು ಆಗುತ್ತಿಲ್ಲ. ಕೆಲವೇ ದಿನಗಳಲ್ಲಿ ಬಹಿರಂಗವಾಗಿ ಉತ್ತರ ಕೊಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಡಿ.ಕೆ.ಶಿವಕುಮಾರ್ ಬಗ್ಗೆ ಬಹಳ ಕಠೋರವಾಗಿ ಹೇಳುವನಿದ್ದೆ. ಆದರೆ, ಬಿಜೆಪಿ ರಾಜ್ಯ ಪ್ರಮುಖರು ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ತಿಳಿಸಿದ್ದಾರೆ. ಕೆಲವೇ ದಿನಗಳಲ್ಲಿ ಬಹಿರಂಗವಾಗಿ ಡಿಕೆಶಿ ಹೇಳಿಕೆ ಬಗ್ಗೆ ಕಠೋರ ಉತ್ತರ ಕೊಡುತ್ತೇನೆ.
-ರಮೇಶ್ ಜಾರಕಿಹೊಳಿ, ಶಾಸಕ
Council Election Karnataka : ಬಿಜೆಪಿಗರ ಕೆಂಗಣ್ಣಿಗೆ ಗುರಿಯಾದ ರಮೇಶ್ ಜಾರಕಿಹೊಳಿ ?
ರಮೇಶ್ ಜಾರಕಿಹೊಳಿಗೆ ಸಂಸ್ಕೃತಿ ಇಲ್ಲ; ಸಿದ್ದು
‘ನಾನು ರಾಜಕೀಯಕ್ಕೆ ಬಂದು 50 ವರ್ಷಗಳಾಗಿದೆ. ಇಂತಹ ಬಹಳಷ್ಟುಜನರನ್ನು ನಾನು ನೋಡಿದ್ದೇನೆ. ಅವರಿಗೆ ರಾಜಕೀಯ ಭಾಷೆ ಇಲ್ಲ. ಸಂಸ್ಕೃತಿ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ‘ವೇಸ್ಟ್ ಬಾಡಿ’ ಎಂದು ಜರಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ.
ಸುವರ್ಣಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಂದು ಕಡೆ ಗುರು ಎನ್ನುತ್ತಾರೆ. ಇನ್ನೊಂದೆಡೆ ಹೀಗೆ ಹೇಳುತ್ತಾರೆ. ಅದಕ್ಕೆ ಏನು ಬೆಲೆ ಇರುತ್ತದೆ. ಏನು ಕಿಮ್ಮತ್ತು ಇರುತ್ತದೆ ಹೇಳಿ’ ಎಂದರು.
‘ವೇಸ್ಟ್ ಬಾಡಿ ಯಾರಂತ ಇಡಿ ರಾಜ್ಯಕ್ಕೆ ಗೊತ್ತಾಗಿದೆ, ರಾಜಕೀಯ ಕಲ್ಚರ್ ಇಲ್ಲದಿರುವವರು ಈ ತರಹ ಮಾತನಾಡುತ್ತಾರೆ . ಯಾರು ವೇಸ್ಟ್ ಬಾಡಿ, ಯಾರು ಉಪಯೋಗ ಆಗುವ ಬಾಡಿ ಎನ್ನುವುದು ರಾಜ್ಯಕ್ಕೆ ಗೊತ್ತಿದೆ. ಅದರ ಬಗ್ಗೆ ಏನೂ ಹೇಳುವ ಅವಶ್ಯಕತೆ ಇಲ್ಲ ಹಾಗೂ ಇಂತಹವರಿಗೆ ಉತ್ತರ ಕೊಡೋಕೂ ಹೋಗಬಾರದು. ಸಿದ್ದರಾಮಯ್ಯ ಏನು ಅನ್ನೋದು ಇಡಿ ರಾಜ್ಯಕ್ಕೆ ಗೊತ್ತಿದೆ. ಯಾರೋ ಒಬ್ಬರು ಪದೇ ಪದೇ ಈ ರೀತಿ ಮಾತನಾಡ್ತಾರೆ ಅಂದರೆ ಅದಕ್ಕೆ ಉತ್ತರ ಕೊಡುವುದಕ್ಕೆ ಆಗುತ್ತದೆಯೇ?’ ಎಂದು ಪ್ರಶ್ನಿಸಿದರು.
Siddaramaiah Vs Somanna: 'ಕಾಂಗ್ರೆಸ್ ಮಾಡಿದ ಪಾಪದ ಕೊಳೆಯನ್ನು ತೊಳೆಯುತ್ತಿದ್ದೇವೆ'
‘40 ಪರ್ಸೆಂಟೇಜ್ ವಿಚಾರವಾಗಿ ಸದನದಲ್ಲಿ ದಾಖಲೆ ಬಿಡುಗಡೆ ಮಾಡಲಿಲ್ಲವಲ್ಲ’ ಎಂಬ ಪ್ರಶ್ನೆಗೆ ‘ಅಸೆಂಬ್ಲಿಯಲ್ಲಿ ನೋಡಿ’ ಎಂದು ಹೇಳುವ ಮುಖಾಂತರ ಸಿದ್ದರಾಮಯ್ಯ ದಾಖಲೆ ಬಿಡುಗಡೆಯ ಸುಳಿವುಕೊಟ್ಟರು.