ಜಾರಕಿಹೊಳಿ CD ಕೇಸ್​: ಮೊದಲ ದಿನವೇ ಮೂವರು ಬಲೆಗೆ, ಸ್ಫೋಟಕ ಮಾಹಿತಿ ಲಭ್ಯ

By Suvarna NewsFirst Published Mar 12, 2021, 5:47 PM IST
Highlights

ಪ್ರಭಾವಿ ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ. ಈ ತಂಡ ಮೊದಲ ದಿನವೇ ಮೂವರನ್ನ ವಶಕ್ಕೆ ಪಡೆದಿದೆ.

ಬೆಂಗಳೂರು, (ಮಾ.12): ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಚುರುಕುಗೊಳಿಸಿದ್ದು, ಮೊದಲ ದಿನವೇ ಮೂವರು ವಶಕ್ಕೆ ಪಡೆದಿದೆ.

ಹೌದು...ಇಬ್ಬರು ಯುವಕರು ಹಾಗೂ ಓರ್ವ ಯುವತಿಯನ್ನು ವಶಕ್ಕೆ ಪಡೆದಿದ್ದು,ಸಿಐಡಿ ಕಚೇರಿಯಲ್ಲಿ ಒಬ್ಬನ ವಿಚಾರಣೆ ನಡೆಯುತ್ತಿದೆ. 

ಕಬ್ಬನ್ ಪಾರ್ಕ್ ಪೊಲೀಸರ ತನಿಖೆಯಲ್ಲಿ ಕೆಲ ಮಾಹಿತಿ ಸಿಕ್ಕಿತ್ತು.ಇದನ್ನಾಧರಿಸಿ ಎಸ್​ಐಟಿ ತಂಡ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದೆ. ಈ ಪೈಕಿ ಓರ್ವ ಸಂತ್ರಸ್ತ ಯುವತಿಯ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ರಾಸಲೀಲೆ ಕೇಸ್ : ಸಾಹುಕಾರನ ಖೆಡ್ಡಾಕ್ಕೆ ಕೆಡವಿದ ಆ ಸಂಚುಕೋರರು ಯಾರು..? ಆ ಎರಡು ಹೆಸರು!

ಬೆಂಗ್ಳೂರಲ್ಲೇ ವಿಡಿಯೋ ಅಪ್ಲೋಡ್
ಯೆಸ್....ಈ ಮೊದಲ ಈ ರಾಸಲೀಲೆ ಸಿ.ಡಿ. ರಷ್ಯಾ ನೆಟ್‌ವರ್ಕ್‌ನಿಂದ ಅಪ್ಲೋಡ್ ಆಗಿತ್ತು. ಆದ್ರೆ, ಇದೀಗ ಸಿಕ್ಕ ಮಾಹಿತಿ ಪ್ರಕಾರ ಈ ವಿಡಿಯೋವನ್ನು ಬೆಂಗಳೂರಿನಲ್ಲಿಯೇ ಕುಳಿತು ರಷ್ಯಾ ನೆಟ್‌ವರ್ಕ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಯಾವ್ ಸರ್ವರ್ ಕೂಡ ಪರ್ಚೇಸ್ ಮಾಡಿಲ್ಲ. ಎಥಿಕಲ್ ಹ್ಯಾಕರ್ ನಿಂದ ವೀಡಿಯೊ ಅಪ್ಲೋಡ್ ಮಾಡಲಾಗಿದ್ದು, ಆ ಹ್ಯಾಕರ್ ಕೂಡ ಖಾಸಗಿ ಚಾನೆಲ್ ನಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. 

ಮತ್ತಷ್ಟು ಜನರ ಹುಡುಕಾಡದಲ್ಲಿ ಎಸ್‌ಐಟಿ
ಸಿಡಿ ಕೇಸ್ ಲ್ಲಿ 6ಕ್ಕೂ ಹೆಚ್ಚು  ಜನರಿಗಾಗಿ ಹುಡುಕಾಟ ಎಸ್‌ಐಟಿ ತಂಡ ತೀವ್ರ ಶೋಧ ನಡೆಸುತ್ತಿದೆ ಎಂದು ಮಾಹಿತಿ ಲಭ್ಯವಾಗಿದ್ದು, ಸಂತ್ರಸ್ತ ಯುವತಿ, ಯುವತಿಯ ಸ್ನೇಹಿತರು ಹಾಗೂ ಕಿಂಗ್ ಪಿನ್‌ ಗಳಾದ ಹ್ಯಾಕರ್ ಮತ್ತು ಆತನ ಸ್ನೇಹಿತರನ್ನ ಪತ್ತೆಗೆ ಬಲೆ ಬೀಸಲಾಗಿದೆ.

ಸಿಡಿ ಬಿಡುಗಡೆಯ ಹಿಂದಿರುವ ಆ ಇಬ್ಬರು ಮಹಾನ್ ನಾಯಕರು. ಜೊತೆಗೆ ವಿಡಿಯೋ ಎಡಿಟ್ ಮಾಡಿದ ಸ್ಥಳದ ಮೇಲೆಯೂ ದಾಳಿಗೆ ಸಿದ್ದತೆ ನಡೆಸಿದೆ. 

"

click me!