ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಶ್ರೀರಾಮುಲುಗೆ ಕಾಂಗ್ರೆಸ್ ಮೇಲೆ ಅನುಮಾನವಂತೆ/ ಬಳ್ಳಾರಿಯಲ್ಲಿ ಸಿಡಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಚಿವ ಶ್ರೀರಾಮುಲು/ ಕಾಂಗ್ರೆಸ್ ಬಿಟ್ಟು ಬಂದು ನಮ್ಮ ಸರ್ಕಾರ ರಚನೆಗೆ ಕಾರಣರಾದ ಎಲ್ಲ ಶಾಸಕರನ್ನ ಟಾರ್ಗೆಟ್ ಮಾಡಲಾಗುತ್ತಿದೆ/ ಇದೊಂದು ಪೋಲಿಟಿಕಲ್ ಷಡ್ಯಂತ್ರ
ಬಳ್ಳಾರಿ (ಮಾ. 11) ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಶ್ರೀರಾಮುಲುಗೆ ಕಾಂಗ್ರೆಸ್ ಮೇಲೆ ಅನುಮಾನ ಬಂದಿದೆ. ಬಳ್ಳಾರಿಯಲ್ಲಿ ಸಿಡಿ ಬಗ್ಗೆ ಸಚಿವ ಶ್ರೀರಾಮುಲು ಮಾತನಾಡಿದ್ದಾರೆ.
ಕಾಂಗ್ರೆಸ್ ಬಿಟ್ಟು ಬಂದು ನಮ್ಮ ಸರ್ಕಾರ ರಚನೆಗೆ ಕಾರಣರಾದ ಎಲ್ಲ ಶಾಸಕರನ್ನ ಟಾರ್ಗೆಟ್ ಮಾಡಲಾಗ್ತಿದೆ. ಇದೊಂದು ಪೋಲಿಟಿಕಲ್ ಷಡ್ಯಂತ್ರ ಎನ್ನುವ ಸಂಧರ್ಭ ಇದಾಗಿದೆ. ಹೀಗಾಗಿ ನನಗೆ ಅನುಮಾನ. ಸರ್ಕಾರ ಎಸ್ ಐ ಟಿ ರಚನೆ ಮಾಡಿದೆ. ಶಿಘ್ರದಲ್ಲೇ ಎಸ್ ಐ ಟಿ ವರದಿ ಕೊಡಲಿದೆ ಎಂದರು.
ಸಿಡಿ ವಿಚಾರದಲ್ಲಿ ಎಲ್ಲರಿಗೂ ನೋವಾಗಿದೆ. ಹೀಗಾಗಿ ಎಸ್.ಟಿ. ಸೋಮಶೇಖರ ಕೂಡ ಕಾಂಗ್ರೆಸ್ ಬಗ್ಗೆ ಹೇಳಿದ್ದಾರೆ. ಅನುಮಾನ ವ್ಯಕ್ತಪಡಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆ ಕಾರಣಕ್ಕೆ ನಾನು ಅನುಮಾನ ವ್ಯಕ್ತಪಡಿಸಿದ್ದೇನೆ ಎಂದಿದ್ದಾರೆ.
ಸಚಿವರಾಗಿದ್ದ ರಮೇಶ್ ಜಾರಿಹೊಳಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಸಾಮಾಜಿಕ ಹೋರಾಟಗಾರ ಸೆಕ್ಸ್ ಸಿಡಿಯೊಂದನ್ನು ಬಿಡುಗಡೆ ಮಾಡಿದ್ದರು. ಇದಾದ ಮೇಲೆ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಬದಲಾದ ಸನ್ನಿವೇಶದಲ್ಲಿ ದಿನೇಶ್ ದೂರು ಹಿಂದಕ್ಕೆ ಪಡೆದುಕೊಂಡರು. ಇನ್ನೊಂದು ಕಡೆ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದು ಇದು ನಕಲಿ ಸಿಡಿ ಎಂದಿರುವ ರಮೇಶ್ ತನಿಖೆಗಾಗಿ ಗೃಹ ಸಚಿವರಿಗೆ ಮನವಿ ಮಾಡಿಕೊಂಡ ನಂತರ ಸರ್ಕಾರ ವಿಶೇಷ ತನಿಖಾ ದಳಕ್ಕೆ ಪ್ರಕರಣ ನೀಡಿದೆ.