
ಮೈಸೂರು (ಜು.28): ನಾನು ಈ ಜನ್ಮದಲ್ಲಿ ಸಿಎಂ ಆಗೊಲ್ಲ ಎಂದು ಡಿಕೆ ಶಿವಕುಮಾರ ಹೇಳಿದ್ದಾರೆ. ಅವರ ಹೇಳಿಕೆಯಿಂದಲೇ ದೇವರು ಆದಷ್ಟು ಬೇಗ ಆಶೀರ್ವಾದ ಮಾಡುತ್ತೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ಇಂದು ನಂಜುಂಡೇಶ್ವರ ದೇವಾಲಯಕ್ಕೆ ತೆರಳಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಅವರು ಆ ಪದ ಬಳಕೆ ಮಾಡಿದ್ದಾರೆಂದರೆ ಸಂಶಯ ಇಟ್ಟುಕೊಳ್ಳಬೇಡಿ ಖಂಡಿತ ದೇವರು ಅಶೀರ್ವಾದ ಮಾಡುತ್ತೆ. ಈ ಹಿಂದೆ ಅವರಪ್ಪನಾಣೆಗೂ ಕುಮಾರಸ್ವಾಮಿ ಗೆಲ್ಲೊಲ್ಲ ಅಂದಿರಲಿಲ್ಲವಾ? ಈಗ ಗೆದ್ದು ಕೇಂದ್ರ ಸಚಿವ ಅಗಿಲ್ವ? ಮುಂದೆನೂ ಅದೇ ರೀತಿ ಆಗುತ್ತೆ ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ರಾಮನಗರ ಮರುನಾಮಕರಣ ಮಾಡೇ ಮಾಡ್ತಿವಿ. ಭೂಮಿ ಇರೋವರೆಗೆ ರಾಮನಗರ ಹೆಸರು ಬದಲಿಸಲಾಗಲ್ಲ ಎಂದು ತಿರುಗೇಟು ನೀಡಿದರು.
ರಾಮನಗರ ಇನ್ಮುಂದೆ 'ಬೆಂಗಳೂರು ದಕ್ಷಿಣ; 17 ವರ್ಷಗಳಲ್ಲೇ ಹೆಸರು ಬದಲು!
ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡುವ ಸರ್ಕಾರದ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದ ಕುಮಾರಸ್ವಾಮಿ. ರಾಮನಗರ ಬದಲಾವಣೆ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ. 2028ಕ್ಕೆ ನಾವು ಅಧಿಕಾರಕ್ಕೆ ಬರುತ್ತೇವೆ. ರಾಮನಗರ ಮರುನಾಮಕರಣ ಮಾಡುತ್ತೇವೆ ಎಂದಿದ್ದ ಕುಮಾರಸ್ವಾಮಿ ಅದಕ್ಕೆ ತಿರುಗೇಟು ನೀಡಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು, ಬೆಂಗಳೂರು ದಕ್ಷಿಣ ಹೆಸರು ಬದಲಿಸುವುದು ಕುಮಾರಸ್ವಾಮಿ ಹಣೆಯಲ್ಲೇ ಬರೆದಿಲ್ಲ ಎಂದಿದ್ದರು. ಇದೀಗ ಡಿಕೆ ಶಿವಕುಮಾರ ಹೇಳಿಕೆ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತೆ ತಿರುಗೇಟು ನೀಡಿದ್ದಾರೆ. ಈ ಹಿಂದೆ ಮಂಡ್ಯ ಲೋಕಸಭಾ ಚುನಾವಣೇಲಿ 'ಅವರಪ್ಪನಾಣೆಗೂ ಕುಮಾರಸ್ವಾಮಿ ಗೆಲ್ಲೊಲ್ಲ' ಎಂದಿದ್ದ ಡಿಕೆ ಶಿವಕುಮಾರ ಆದರೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆಯುವ ಮೂಲಕ ತಿರುಗೇಟು ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.