ಸಾಲ ತೀರಿಸೋಕೆ ರಮೇಶ ಬಿಜೆಪಿಗೆ: ಸತೀಶ್‌ ಆರೋಪ

By Web Desk  |  First Published Oct 18, 2019, 7:54 AM IST

ರಮೇಶ ಜಾರಕಿಹೊಳಿ ಪಕ್ಷ ಬೆಳೆಸಲು ಬಿಜೆಪಿಗೆ ಹೋಗಿಲ್ಲ| ಸಾಲ ತೀರಿಸೋಕೆ ರಮೇಶ ಬಿಜೆಪಿಗೆ: ಸತೀಶ್‌ ಆರೋಪ| 


ಗೋಕಾಕ[ಅ.18]: ರಮೇಶ ಜಾರಕಿಹೊಳಿ ಪಕ್ಷ ಬೆಳೆಸಲು ಬಿಜೆಪಿಗೆ ಹೋಗಿಲ್ಲ. ಬದಲಾಗಿ ಸಿಕ್ಕಾಪಟ್ಟೆಸಾಲ ಮಾಡಿಕೊಂಡಿದ್ದು ಅದನ್ನು ತೀರಿಸಲು ಹೋಗಿದ್ದಾನೆ ಎಂದು ಮಾಜಿ ಸಚಿವ, ಸತೀಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.

‘ರಮೇಶ ಗೋಕಾಕ್‌ ಜನರ ಸಮಸ್ಯೆ ಕೇಳೋದು ಬಿಟ್ಟು ಅಮೆರಿಕ ಟೂರ್ ಮಾಡ್ತಿದ್ದಾರೆ’

Tap to resize

Latest Videos

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರದಲ್ಲಿ ಬುಧವಾರ ರಾತ್ರಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಅವನು ಕಾಂಗ್ರೆಸ್‌ ಬಿಟ್ಟು ಹೋಗಿದ್ದು ಒಳ್ಳೆಯದೇ ಆಯಿತು. ಅವನು ಹೇಳಿಕೊಂಡಂತೆ ನಂದು ಸಾಲ ಆಗಿದೆ ಎಂದು ಹೇಳಿದ್ದಾನೆ. ಇಷ್ಟು ತಗೋತೀನಿ ಸಾಲ ತೀರಿಸುತ್ತೇನೆ. ಮತ್ತೆ ಕಾಂಗ್ರೆಸ್‌ಗೆ ಬರುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಇಂತಹ ವಿಚಾರವು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿಗೆ ಇದು ಗೊತ್ತಾಗಬೇಕು. ಇವನನ್ನು ಅವರು (ಬಿಜೆಪಿ) ನಂಬಿರಬಹುದು. ಇವನು ಸ್ವಂತ ಲಾಭಕ್ಕಾಗಿ ಹೋಗಿದ್ದಾನೆಯೇ ಹೊರತು, ಯಡಿಯೂರಪ್ಪಗೋಸ್ಕರ ಹೋಗಿಲ್ಲ ಎಂದು ಹೇಳಿದರು.

ಸಹೋದರನ ಈ ಆರೋಪಕ್ಕೆ ರಮೇಶ್ ಜಾರಕಿಹೊಳಿ ಹೇಗೆ ಪ್ರತಿಕ್ರಿಯಿಸುತ್ತಾರೆ? ಕಾಲವೇ ಉತ್ತರಿಸಬೇಕಿದೆ.

click me!