ಸಿ.ಡಿ.ಕೇಸ್: ಯುವತಿ ಕಂಪ್ಲೆಂಟ್ ಕೊಟ್ಟ ಬೆನ್ನಲ್ಲೇ ಗುಡುಗಿದ ರಮೇಶ್ ಜಾರಕಿಹೊಳಿ

By Suvarna News  |  First Published Mar 26, 2021, 3:46 PM IST

ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿ ದೂರು ನೀಡಿದ್ದು, ಇತ್ತ ರಮೇಶ್ ಜಾರಕಿಹೊಳಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.


ಬೆಂಗಳೂರು, (ಮಾ.26): ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಲಿಖಿತ ದೂರು ನೀಡಿದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಾಳೆಯಿಂದ ನಮ್ಮ ಆಟ ಶುರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಪರವಾಗಿ ವಕೀಲ ಜಗದೀಶ್​ ಕೆ.ಎನ್. ನೇತೃತ್ವದ ತಂಡ ಪೊಲೀಸ್​​ ಕಮಿಷನರ್ ಕಚೇರಿಗೆ ಇಂದು (ಶುಕ್ರವಾರ) ಮಧ್ಯಾಹ್ನ ದೂರು ನೀಡಿದೆ.

Tap to resize

Latest Videos

ಈ ಬಗ್ಗೆ ಬೆಂಗಳೂರಲ್ಲಿ ಇಂದು (ಶುಕ್ರವಾರ)  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅವರಿಗೆ ಕೊನೆ ಅಸ್ತ್ರ ಇತ್ತು. ನಾಳೆ ನಮ್ಮ ಆಟ ಶುರು ಆಗಲಿದೆ. ಇಂತ 10 ದೂರು ಬಂದ್ರು ನಾನು ಎದುರಿಸುತ್ತೇನೆ. ಅಂದಿನ ಜೆಡಿಎಸ್ ಕಾಂಗ್ರೆಸ್​ ಸರ್ಕಾರವನ್ನೇ ತೆಗೆದಿದ್ದೇನೆ. ನನಗೆ ಇದ್ಯಾವ ಲೆಕ್ಕ ಎಂದು ಗುಡುಗಿದರು.

ಸಿ.ಡಿ.ಕೇಸ್‌ಗೆ ಸ್ಫೋಟಕ ಟ್ವಿಸ್ಟ್: ರಮೇಶ್ ಜಾರಕಿಹೊಳಿಗೆ ಬಿಗ್ ಶಾಕ್!

ನಾನು ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ನಾನು ತಪ್ಪಿದ್ರೆ ಜೈಲಿಗೆ ಹೋಗುತ್ತೇನೆ. ಪೊಲೀಸ್ ಆಯುಕ್ತರಿಗೆ ಮನವಿ ಮಾಡ್ತೀನಿ. ತಪ್ಪಿದ್ರೆ ಪೊಲೀಸ್ ಸ್ಟೇಷನ್ ಬರ್ತೀನಿ. ನನ್ನ ತಪ್ಪಿದ್ರೆ ನಾನೇ ನೇಣು ಹಾಕಿಕೊಳ್ತೀನಿ. ನಾನು ಸಿಎಂಗೆ, ಗೃಹಸಚಿವರಿಗೆ ಇದರ ಹಿಂದೆ ಯಾರಿದ್ದಾರೆ ಹೇಳಿದ್ದೀನಿ. ಅವರ ಕೊನೆಯ ಅಸ್ತ್ರ ಮುಗಿದಿದೆ. ನನ್ನ ಆಟ ಈಗ ಶುರುವಾಗಿದೆ. ಇದೆಲ್ಲ ಷಡ್ಯಂತ್ರ. ಈ ರೀತಿ ಬರಲಿದೆ ಅನ್ನೋದು ನನಗೆ ಮೊದಲೇ ಗೊತ್ತಿತ್ತು ಎಂದು ಹೇಳಿದರು.

ಮೈ ತೋರಿಸಿಕೊಂಡವಳು ಅವಳು. ಅದು ಬಿಟ್ಟು ನನ್ನ ವಿರುದ್ಧ ಟಿವಿ ಚಾನೆಲ್​​ಗಳಲ್ಲಿ ಆಂಕರ್​​ಗಳು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

click me!