ಬೆಳಗಾವಿ ಉಪಕದನ: ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಘೋಷಿಸಿದ ಎಐಸಿಸಿ

By Suvarna News  |  First Published Mar 26, 2021, 1:10 PM IST

ಸುರೇಶ್‌ ಅಂಗಡಿ ಅಕಾಲಿಕ ಮರಣದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರ| ಬಿಜೆಪಿ- ಕಾಂಗ್ರೆಸ್‌ನಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ| ಟೆಂಟಲ್‌ ರನ್‌ ಆರಂಭಿಸಿದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ| ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ಸತೀಶ್‌ ಜಾರಕಿಹೊಳಿ ಹೆಸರು ಫೈನಲ್‌| 


ಬೆಳಗಾವಿ(ಮಾ.26): ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಯಮಕನಮರಡಿ ಕ್ಷೇತ್ರದ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರನ್ನು ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಬಿಜೆಪಿ- ಕಾಂಗ್ರೆಸ್‌ನಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಇರಲಿದೆ. ಬಿಜೆಪಿಯಿಂದ ದಿ. ಸುರೇಶ್‌ ಅಂಗಡಿದ ಪತ್ನಿ ಮಂಗಳಾ ಅಂಗಡಿ ಅವರು ಸ್ಪರ್ಧಿಸಲಿದ್ದಾರೆ. 

ಸುರೇಶ್‌ ಅಂಗಡಿ ಅಕಾಲಿಕ ಮರಣದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ತೆರವಾಗಿತ್ತು. ಹೀಗಾಗಿ ಸತೀಶ್‌ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕರಾಗಿದ್ದಾರೆ. ಆದ್ರೆ, ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮಂಗಳಾ ಅಂಗಡಿ ಅವರ ಮೇಲೆ ಅನುಕಂಪದ ಅಲೆ ಹೆಚ್ಚಾಗಿದೆ. 

Tap to resize

Latest Videos

ಬೆಳಗಾವಿ ಬೈಎಲೆಕ್ಷನ್‌: ಟೆಂಪಲ್ ರನ್ ಆರಂಭಿಸಿದ ಮಂಗಳಾ ಅಂಗಡಿ

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಬೆಳಗಾವಿ ಉಪವಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ಸತೀಶ್‌ ಜಾರಕಿಹೊಳಿ ಹೆಸರು ಫೈನಲ್‌ ಅಗಿತ್ತು. ಆದರೆ, ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ. 

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರು ಈಗಾಗಲೇ ಟೆಂಟಲ್‌ ರನ್‌ ಆರಂಭಿಸಿದ್ದಾರೆ. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌- ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಈಗಲೇ ಚುನಾವಣಾ ಕಾವು ಏರತೊಡಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಏ. 17 ರಂದು ಚುನಾವಣೆ ನಡೆಯಲಿದೆ. ಮೇ. 5 ರಂದು ಫಲಿತಾಂಶ ಹೊರಬೀಳಲಿದೆ.
 

click me!