ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರ ಮಧ್ಯರಾತ್ರಿ ಸಿಡಿ ಬಿಡುಗಡೆ ಮಾಡುವ ಬೆದರಿಕೆವೊಡ್ಡಿ ಹೆದರಿಸಲು ನೋಡಿದ. ಆದರೆ, ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಅದ್ಯಾವ ಸಿಡಿ ಬಿಡುತ್ತಿ ಬಿಡು ಮಗನೆ ಎಂದಿದ್ದೇನೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಗೋಕಾಕ ಮೇ.10 : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳವಾರ ಮಧ್ಯರಾತ್ರಿ ಸಿಡಿ ಬಿಡುಗಡೆ ಮಾಡುವ ಬೆದರಿಕೆವೊಡ್ಡಿ ಹೆದರಿಸಲು ನೋಡಿದ. ಆದರೆ, ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಅದ್ಯಾವ ಸಿಡಿ ಬಿಡುತ್ತಿ ಬಿಡು ಮಗನೆ ಎಂದಿದ್ದೇನೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬುಧವಾರ ನಗರದಲ್ಲಿ ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ರಾತ್ರಿ 12.30ಕ್ಕೆ ಡಿ.ಕೆ.ಶಿವಕುಮಾರ್(DK Shivakumar) ಬ್ಲಾಕ್‌ಮೇಲ್ ಮಾಡಿದ್ದಾರೆ. ಗ್ರಾಮೀಣ ಕ್ಷೇತ್ರದಿಂದ (ಬೆಳಗಾವಿ) ಹಿಂದೆ ಸರಿಯದಿದ್ರೆ ನಿನ್ನ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು, ಚುನಾವಣೆಯ ಕೊನೇ ಗಳಿಗೆಯಲ್ಲಿ ಡಿಕೆಶಿ ಹೀಗೆ ಸಿಡಿ ಬಿಡ್ತೇನೆ ಎಂದಿರುವುದು ಅಚ್ಚರಿ ಮೂಡಿಸಿದೆ. ಯಾವ ಸಿಡಿ? ಎಂಬುದನ್ನು ಹೇಳಲಿಲ್ಲ ಎಂದು ಜಾರಕಿಹೊಳಿ ತಿಳಿಸಿದರು.
ಡಿಕೆಶಿ ಬೆದರಿಕೆಗೆ ಬಗ್ಗದೆ ನಾನೂ ಸವಾಲು ಹಾಕಿದ್ದೇನೆ. ಅದ್ಯಾವ ಸಿಡಿ, ಎಷ್ಟುಸಿಡಿ ಇವೆ ಬಿಡುಗಡೆ ಮಾಡು. ನಾನೂ ಒಂದು ಕೈ ನೋಡೇ ಬಿಡುವೆ ಮಗನೆ. ನಾನಿನ್ನೂ ಗಟ್ಟಿಯಾಗಿದ್ದೇನೆ ಎಂದೇ ತಿರುಗೇಟು ನೀಡಿದ್ದೇನೆ. ಡಿಕೆ ಶಿವಕುಮಾರ್ ದೊಡ್ಡ ಮಟ್ಟದ ರಾಜಕಾರಣಿ, ಮುಖ್ಯಮಂತ್ರಿ ಆಕಾಂಕ್ಷಿ. ಆದರೆ ಹೀಗೇಕೆ ಸಿಡಿ ಬೆದರಿಕೆವೊಡ್ಡುತ್ತಿದ್ದಾನೋ ಗೊತ್ತಿಲ್ಲ ಎಂದು ಏಕವಚನದಲ್ಲೇ ಗುಡುಗಿದರು.
ಕಟ್ ಆ್ಯಂಡ್ ಪೇಸ್ಟ್ ಆಡಿಯೋ:
ಪ್ರಮುಖರಾಗಿರುವ ಯಾರನ್ನೋ ಬೈಯ್ದಿದ್ದು ಕಟ್ ಆ್ಯಂಡ್ ಪೇಸ್ವ್ ಆಡಿಯೋ ಮಾಡಿದ್ದಾನೆ. ಆಡಿಯೋ ಇದೆಯೋ? ಅಥವಾ ಸಿಡಿ(Ramesh jarkiholi cd case) ಇದೆಯೋ? ಗೊತ್ತಿಲ್ಲ. ಮಂತ್ರಿಮಂಡಲ ರಚನೆ ವೇಳೆಯೂ ನನ್ನ ಬ್ಲ್ಯಾಕ್ ಮೇಲ… ಮಾಡುತ್ತಾನೆ. ಡಿಕೆ ಶಿವಕುಮಾರ್ ಏನೇ ಮಾಡಿದ್ರೂ ನಾನು ಹೆದರಲ್ಲ ಎಂದರು.
ಯಾವ ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ… ಮಾಡುತ್ತಿರುವುದು ಗೊತ್ತಿಲ್ಲ. ನನ್ನ ಜತೆಗೆ ಇದ್ದಾಗ ಡಿಕೆಶಿ ಬಹಳ ಒಳ್ಳೆಯವನಿದ್ದ. ಗೆಳೆತನಕ್ಕೆ ಒಳ್ಳೇ ಮನುಷ್ಯ ಕೂಡ. ಈಗ ಹೀಗೇಕೆ ಆಡುತ್ತಿದ್ದಾನೆ ಎಂಬುದೇ ಪ್ರಶ್ನಾರ್ಥಕವಾಗಿದೆ. ಆದರೆ, ಒಂದಂತೂ ಸ್ಪಷ್ಟ, ಡಿಕೆಶಿ ವಿಷಕನ್ಯೆಯಿಂದ ಹೊರ ಬರುವುದು ಬಹಳ ಒಳ್ಳೆಯದು. ಇಲ್ಲಾಂದ್ರೇ ಅಂತ್ಯವಾಗ್ತಾನೆ ಎಂದು ಹೇಳಿದರು......
ಸಿಡಿ ಕೇಸ್ ಸಿಬಿಐ ತನಿಖೆಗೆ ಪಟ್ಟು
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಟ್ಟಹಾಕಲು ಮತ್ತು ಶಾಂತಿ ನೆಲೆಸಬೇಕಾದರೆ ಸಿಡಿ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಗೋಕಾಕ್ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ರಮೇಶ ಜಾರಕಿಹೊಳಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಿಡಿ ಪ್ರಕರಣಗಳ್ನು ಸಿಬಿಐಗೆ ಕೊಟ್ಟರೆ ನೂರಾರು ಜನ ಶಾಂತ ರೀತಿ ಜೀವನ ಮಾಡುತ್ತಾರೆ. ನಾನೇನೋ ಗಟ್ಟಿಯಾಗಿದ್ದೇನೆ, ನನ್ನ ಜತೆಗೆ ನನ್ನ ಕುಟುಂಬವಿದೆ. ಹಾಗಾಗಿ ಹೆದರುವುದಿಲ್ಲ. ಆದರೆ, ನನ್ನಂತೆ ಕೆಲವರು ಸಿಡಿ ಷಡ್ಯಂತ್ರಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಹಾಗಾಗಿ ತಕ್ಷಣವೇ ಸಿಡಿ ಕೇಸ್ ಸಿಬಿಐಗೆ ಕೊಡಬೇಕು. ಮುಂಬರುವ ಮುಖ್ಯಮಂತ್ರಿ ಈ ನಿಟ್ಟಿನಲ್ಲಿ ಮೊದಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಿಡಿ ಪ್ರಕರಣ ಸಿಬಿಐಗೆ ವಹಿಸಿದರಷ್ಟೇ ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯ. ಇದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇನೆ. ಒಂದು ತಿಂಗಳಲ್ಲೇ ಸಿಡಿ ಕೇಸ್ ಸಿಬಿಐಗೆ ಕೊಡಿಸುತ್ತೇನೆ. ಸಿಡಿಯಲ್ಲಿ ಸಿಕ್ಕ ನೂರಾರು ಜನರನ್ನ ಹೊರ ತರುತ್ತೇನೆ ಎಂದು ಹೇಳಿದರು.
Karnataka Election 2023: ಸಿಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಲಖನ್ ಜಾರಕಿಹೊಳಿ
ರಾಜ್ಯದಲ್ಲಿ 130 ಸ್ಥಾನ ಗೆಲ್ಲುತ್ತೇವೆ: ರಮೇಶ
ರಾಜ್ಯ ವಿಧಾನಸಭೆ ಚುನಾವಣೆ(Karnataka assembly electiion 2023)ಯಲ್ಲಿ ಈ ಬಾರಿ ಬಿಜೆಪಿ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟಾ್ರಧ್ಯಕ್ಷ ಜೆ.ಪಿ.ನಡ್ಡಾ ಅವರ ಭರವಸೆಯಂತೆ ಬಿಜೆಪಿ ಮತ್ತೆ ಅಧಿಕಾರ ಸ್ಥಾಪಿಸಲಿದೆ ಎಂದು ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಗೋಕಾಕ್ ಕ್ಷೇತ್ರದಲ್ಲಿ ಸತತ ಆರು ಬಾರಿ ಚುನಾವಣೆ ಎದುರಿಸಿದ್ದು, ಇದೀಗ ಏಳನೇ ಬಾರಿ ಸ್ಪರ್ಧೆ ಮಾಡಿದ್ದೇನೆ. ನನ್ನ ಕ್ಷೇತ್ರವೂ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ 13 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಇಂದು ಮಾತನಾಡುವುದಿಲ್ಲ. ಫಲಿತಾಂಶದ ನಂತರವೇ ಮಾತಾಡುತ್ತೇನೆ ಎಂದು ಹೇಳಿದರು.