Rakesh Tikait : ಮತ್ತೊಬ್ಬ ಕಿಮ್ ಜಾಂಗ್ ಉನ್ ಜನರಿಗೆ ಬೇಕಾ?

Suvarna News   | Asianet News
Published : Feb 15, 2022, 04:11 PM IST
Rakesh Tikait : ಮತ್ತೊಬ್ಬ ಕಿಮ್ ಜಾಂಗ್ ಉನ್ ಜನರಿಗೆ ಬೇಕಾ?

ಸಾರಾಂಶ

ರೈತ ನಾಯಕ ರಾಕೇಶ್ ಟಿಕೈತ್ ಟೀಕೆ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ 2ನೇ ಕಿಮ್ ಜಾಗ್ ಉನ್ ಬೇಕೇ? ಎನ್ನುವುದನ್ನು ಜನರೇ ನಿರ್ಧರಿಸಬೇಕು

ಲಖೀಂಪುರ (ಫೆ.15): ಉತ್ತರ ಪ್ರದೇಶದ ಚುನಾವಣೆಯ (Uttar Pradesh Election) ಮಧ್ಯದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರೈತ ನಾಯಕ ರಾಕೇಶ್ ಟಿಕೈತ್ ( Farmer leader Rakesh Tikait) ಅವರು, ಉತ್ತರಪ್ರದೇಶದಲ್ಲಿ ಬಿಜೆಪಿ (BJP) ಅಧಿಕಾರವನ್ನು ಉತ್ತರ ಕೊರಿಯಾ (North Korea) ಮಾದರಿಯ ಅಧಿಕಾರಕ್ಕೆ ಹೋಲಿಕೆ ಮಾಡಿದ್ದಾರೆ. ಚುನಾವಣೆಯ ವೇಳೆ ನಮಗೆ 2ನೇ ಕಿಮ್ ಜಾಂಗ್ ಉನ್ ಬೇಕೇ ಎನ್ನುವುದನ್ನು ಇಲ್ಲಿನ ಮತದಾರರೇ ನಿರ್ಧರಿಸಬೇಕು ಎಂದು ಹೇಳಿದ್ದಾರೆ.


"ಜನಸಾಮಾನ್ಯರನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಮತ್ತು ಪ್ರಧಾನಿ ಬೇಕೇ ಅಥವಾ ಅವರಿಗೆ ಉತ್ತರ ಕೊರಿಯಾದಲ್ಲಿ ಇರುವಂಥ ಎರಡನೇ ಕಿಮ್ ಜಾಂಗ್‌ನಂತಹ ನಾಯಕ ಬೇಕೇ ಎನ್ನುವುದನ್ನು ಜನರು ನಿರ್ಧರಿಸಬೇಕು. ನಮಗೆ ಯಾವುದೇ ರಾಜ್ಯದಲ್ಲಿ ಸರ್ವಾಧಿಕಾರಿ ಸರ್ಕಾರ ಬೇಡ. ಇಲ್ಲಿನ ಜನರು ತಮ್ಮ ಮತಗಳನ್ನು ಅತ್ಯಂತ ಬುದ್ದಿವಂತಿಕೆಯಿಂದ ಹಾಕಬೇಕು ಎಂದು ಟಿಕೈತ್ ಮನವಿ ಮಾಡಿದ್ದಾರೆ. ರೈತ ನಾಯಕ ರಾಕೇಶ್ ಟಿಕೈತ್ ಚುನಾವಣಾ ಸಮಯದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh Chief Minister Yogi Adityanath) ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು (Prime Minister Narendra Modi) ಗುರಿಯಾಗಿಸಿಕೊಂಡು ಪ್ರತಿ ಬಾರಿಯೂ ಟೀಕೆ ಮಾಡಿದ್ದಾರೆ.

ಕಳೆದ ವಾರ, ಅವರು ತಮ್ಮ ತವರೂರು ಮುಜಾಫರ್‌ನಗರದಲ್ಲಿ ಬಿಜೆಪಿ ಧ್ರುವೀಕರಣ ಪ್ರಚಾರವನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದ ಟಿಕೈತ್, ಹಿಂದೂ-ಮುಸ್ಲಿಂ ಮೆರವಣಿಗೆ ನಡೆಸುವ ಕ್ರೀಡಾಂಗಣ ಇದಲ್ಲ ಎಂದು ಟೀಕೆ ಮಾಡಿದ್ದಾರೆ. "ಪಶ್ಚಿಮ ಉತ್ತರ ಪ್ರದೇಶವು ಅಭಿವೃದ್ಧಿಯ ಬಗ್ಗೆ ಮಾತನಾಡಲು ಬಯಸುತ್ತದೆ. ಹಿಂದೂ, ಮುಸ್ಲಿಂ, ಜಿನ್ನಾ, ಧರ್ಮದ ಬಗ್ಗೆ ಮಾತನಾಡುವವರು ಮತಗಳನ್ನು ಕಳೆದುಕೊಳ್ಳುತ್ತಾರೆ. ಮುಜಫರ್‌ನಗರ ಹಿಂದೂ-ಮುಸ್ಲಿಂ ಆಟಕ್ಕೆ ಕ್ರೀಡಾಂಗಣವಲ್ಲ" ಎಂದು ಟಿಕೈತ್ ಟ್ವೀಟ್ ಮಾಡಿದ್ದರು. ಇಲ್ಲಿನ ರೈತರು, ಅಭಿವೃದ್ಧಿ ಮತ್ತು ವಿದ್ಯುತ್ ಮತ್ತು ನೀರಿನಂತಹ ಮೂಲಭೂತ ಸೌಕರ್ಯಗಳಂತಹ ವಿಷಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂದು ಅವರು ಹೇಳಿದ್ದಾರೆ.  "ರೈತ್ ವಿರೋಧಿ ಅಲ್ಲದವರಿಗೆ ಇಲ್ಲಿನ ಮತದಾರರು ಮತ ಚಲಾಯಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಹಿಂದೂ ಮತ್ತು ಮುಸ್ಲಿಂ ಮತದಾರರನ್ನು ಧ್ರುವೀಕರಿಸದವರಿಗೆ ಬೆಂಬಲ ನೀಡುತ್ತಾರೆ. ಪಾಕಿಸ್ತಾನ ಹಾಗೂ ಜಿನ್ನಾ ಬಗ್ಗೆ ಮಾತ್ರವಲ್ಲ, ತಮ್ಮ ಸಮಸ್ಯೆಗಳನ್ನು ಆಲಿಸುವವರಿಗೆ ಬೆಂಬಲ ನೀಡುತ್ತಾರೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಯೂಟ್ಯೂಬ್‌ನಲ್ಲಿ Sansad TV ಚಾನೆಲ್ ಹ್ಯಾಕ್, 'ಎಥೆರಿಯಮ್' ಎಂದು ಮರುನಾಮಕರಣ
ದೆಹಲಿಯ ಹೊರವಲಯದ ಹೆದ್ದಾರಿಗಳಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ 11 ತಿಂಗಳ ರೈತರ ಪ್ರತಿಭಟನೆಯಲ್ಲಿ ಟಿಕೈತ್ ಮುಂಚೂಣಿ ನಾಯಕರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್‌ನಲ್ಲಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಯುಪಿ ಮತ್ತು ಪಂಜಾಬ್‌ನಂತಹ ಚುನಾವಣಾ ರಾಜ್ಯಗಳಲ್ಲಿ ರೈತರ ಕೋಪದ ಕಾರಣದಿಂದಾಗಿಯೇ ಕೇಂದ್ರವು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರದ ಪ್ರಮುಖ ಅಂಶವಾಗಿತ್ತು.

ಭಾರತವನ್ನು ಘಜ್ವ ಇ ಹಿಂದ್ ಮಾಡಲು ಬಿಡುವುದಿಲ್ಲ: ಘರ್ಜಿಸಿದ ಯೋಗಿ ಆದಿತ್ಯನಾಥ್!
ಲಖಿಂಪುರ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಿದೆ ಎಂದು ರೈತ ಮುಖಂಡ ರಾಕೇಶ್ ಟಿಕೈತ್ ಮಂಗಳವಾರ ಹೇಳಿದ್ದಾರೆ. ಕೇಂದ್ರ ಸಚಿವ ಅಜಯ್ ಮಿಶ್ರಾ ‘ತೇನಿ’ ಅವರ ಪುತ್ರ ಆಶಿಶ್ ಮಿಶ್ರಾ ಅವರು ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಅಲಹಾಬಾದ್ ಹೈಕೋರ್ಟ್ ಫೆಬ್ರವರಿ 10 ರಂದು ಅವರಿಗೆ ಜಾಮೀನು ನೀಡಿತು. ಆಶಿಶ್ ಮಂಗಳವಾರ ಜೈಲಿನಿಂದ ಹೊರಬರುವ ನಿರೀಕ್ಷೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ