ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುತ್ತಲೇ ಕಾಂಗ್ರೆಸ್ ಗೆ ಮತ ಹಾಕಿದ ಜನಾರ್ಧನ ರೆಡ್ಡಿ!

Published : Feb 27, 2024, 01:05 PM ISTUpdated : Feb 27, 2024, 01:34 PM IST
ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುತ್ತಲೇ ಕಾಂಗ್ರೆಸ್ ಗೆ ಮತ ಹಾಕಿದ ಜನಾರ್ಧನ ರೆಡ್ಡಿ!

ಸಾರಾಂಶ

ಕೆಆರ್‌ಪಿಪಿ ಪಕ್ಷದ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ   ಜನಾರ್ದನ ರೆಡ್ಡಿ ಅವರು   ಮತದಾನದ ಬಳಿಕ   ನನ್ನ ಆತ್ಮಸಾಕ್ಷಿಗೆ ಮತ ಚಲಾಯಿಸಿದ್ದೇನೆ ಎಂದಿದ್ದರು ಇದೀಗ ಕಾಂಗ್ರೆಸ್ ಗೆ ಮತ ನೀಡಿರುವುದು ಸ್ಪಷ್ಟವಾಗಿದೆ.

ಬೆಂಗಳೂರು (ಫೆ.27): ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು,  ಕೆಆರ್‌ಪಿಪಿ ಪಕ್ಷದ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ   ಜನಾರ್ದನ ರೆಡ್ಡಿ ಅವರು  ಕಾಂಗ್ರೆಸ್ ಗೆ ಮತ ನೀಡಿರುವುದು ಖಚಿತವಾಗಿದೆ. ಮತದಾನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ರೆಡ್ಡಿ,  ನನ್ನ ಆತ್ಮಸಾಕ್ಷಿಗೆ ಮತ ಚಲಾಯಿಸಿದ್ದೇನೆ. ನಿಮಗೆ ಯಾಕೆ ಹೇಳಬೇಕು..? ಎಂದು ವಿಧಾನಸೌಧದಲ್ಲಿ   ಮಾಧ್ಯಮದವರ ಪ್ರಶ್ನೆಗೆ ಗರಂ ಆದರು. ಪ್ರಧಾನಿ ಮೋದಿ ಬಗ್ಗೆ ನನಗೆ ಅಪಾರ ನಂಬಿಕೆ ಇದೆ ಎಂದಷ್ಟೇ ಹೇಳಿದರು.

ಇದೀಗ ಜನಾರ್ಧನ ರೆಡ್ಡಿ ಯಾರಿಗೆ ಮತ ನೀಡರಬಹುದು ಎಂಬ ಗೊಂದಲಕ್ಕೆ ತೆರೆ ಬಿದ್ದಿದ್ದು ಸಿಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರ ಮನವೊಲಿಸುವ ಪ್ರಯತ್ನ ಯಶಸ್ವಿಯಾಗಿದೆ.  ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎನ್ನುತ್ತಲೇ  ಕಾಂಗ್ರೆಸ್ ಪರ ಮತದಾನ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಗೆ ದೊಡ್ಡ ಸಂಖ್ಯೆಯಲ್ಲಿ ಮತ ಲಭ್ಯವಾಗಿದೆ ಎನ್ನುವುದು ಸದ್ಯದ ಮಾಹಿತಿ.

ರಾಜ್ಯಸಭೆ ಚುನಾವಣೆ: ಅಡ್ಡ ಮತದಾನ ಹಾಕಿ ಬಿಜೆಪಿಗೆ ಶಾಕ್‌ ಕೊಟ್ಟ ಎಸ್‌ ಟಿ ಸೋಮಶೇಖರ್

ರಾಜ್ಯಸಭೆ ಚುನಾವಣೆಯ ಹಿಂದಿನ ದಿನವಾದ ಸೋಮವಾರ   (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ) ಪಕ್ಷದ ಶಾಸಕ ಜನಾರ್ದನರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಜನಾರ್ಧನರೆಡ್ಡಿ ಮತ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗೆ ಹಾಕುವುದು ಖಚಿತವಾಗಿತ್ತು.

ರಾಜ್ಯಸಭೆ ಚುನಾವಣೆ ಬಿಜೆಪಿಗೆ ಮೊದಲ ಗೆಲುವು, ಮೈತ್ರಿ ನಾಯಕರ ಸಂಭ್ರಮ

ಬಿಜೆಪಿ ಸೇರ್ಪಡೆಯಾಗಲು ನಡೆಸಿದ ಯತ್ನ ಮತ್ತು ಮೈತ್ರಿ ಮಾಡಿಕೊಳ್ಳಲು ಮಾಡಿದ ಕಸರತ್ತಿಗೆ ಬಿಜೆಪಿ ಹೈಕಮಾಂಡ್ ಸೊಪ್ಪು ಹಾಕದೇ ಇರುವುದರಿಂದ ಮುನಿಸಿಕೊಂಡಿರುವ ರೆಡ್ಡಿ ಸಹಜವಾಗಿಯೇ ಕಾಂಗ್ರೆಸ್ ಪಾಳೆಯದತ್ತ ಒಲವು ತೋರಿದ್ದಾರೆ.  ಈ ಹಿಂದೆ ಶಾಸಕ ಜನಾರ್ದನ ರೆಡ್ಡಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ವಿಧಾನಸೌಧ ಅಧಿವೇಶನದಲ್ಲಿಯೇ ಮಾತುಕತೆ ಯಾಡಿದ್ದು ಭಾರಿ ಸದ್ದು ಮಾಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ
ಜ.8, 9ರವರೆಗೆ ಕಾಯಿರಿ : ಡಿಕೆ ಬಣದ ‘ತಿರುಗೇಟು’!