ನನ್ನ ಮಗಳು ಎದೆಗೆ ಚೂರಿ ಹಾಕಿದ್ದಾಳೆ: ಅಪ್ಪ ಕಾಂಗ್ರೆಸ್‌- ಮಗಳು ಬಿಜೆಪಿ

By Sathish Kumar KH  |  First Published Apr 12, 2023, 3:52 PM IST

ಮಗಳು ರಾಜನಂದಿನಿ ಬಿಜೆಪಿ ಸೇರ್ಪಡೆಯಿಂದ ಎದೆಗೆ ಚೂರಿ ಹಾಕಿದಂತಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಳಲು ತೋಡಿಕೊಂಡಿದ್ದಾರೆ. 


ಶಿವಮೊಗ್ಗ (ಏ.12):  ನನ್ನ ಮಗಳು ಬಿಜೆಪಿ ಸೇರುತ್ತಾಳೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ಬಿಟ್ಟು ನಾನು ಹೋಗಲ್ಲ, ನಾನು ಕಾಂಗ್ರೆಸ್ ಪರವಾಗಿಯೇ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ, ಮಗಳು ರಾಜನಂದಿನಿ ಬಿಜೆಪಿ ಸೇರ್ಪಡೆಯಿಂದ ಎದೆಗೆ ಚೂರಿ ಹಾಕಿದಂತಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಳಲು ತೋಡಿಕೊಂಡಿದ್ದಾರೆ. 

ಈ ಕುರಿತು ಶಿವಮಿಗ್ಗ ಜಿಲ್ಲೆಯ ಸಾಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ನನಗೆ ಸುದ್ದಿ ಸಿಕ್ಕಿದೆ. ಅವಳು ರೀತಿ ಮಾಡ್ತಾಳೆ ಎಂದು ಕನಸು, ಮನಸ್ಸಿನಲ್ಲೂ ಅಲೋಚನೆ ಮಾಡಿದವನು ಅಲ್ಲ. ರಾಜಕಾರಣದಲ್ಲಿ ಒಂದು ಸ್ಥಿರತೆ, ಬದ್ದತೆ ಇಟ್ಟುಕೊಂಡು ಬಂದಂತವನು ನಾನು. ಆದ್ದರಿಂದ ನಮ್ಮ ಬದ್ದತೆಗೆ ತಕ್ಕಂತೆ ನಡೆದುಕೊಂಡಿದ್ದೇವೆ. ಅ ಸಂತೋಷ ನನಗೆ ಇದೆ. ಇಂತಹ ಸನ್ನಿವೇಶದಲ್ಲಿ ನನ್ನ ಮಗಳು ರಾಜನಂದಿನಿ ಬಿಜೆಪಿ ಸೆರೋಕೆ ಹೋಗಿದ್ದಾಳೆ ಎಂದರೆ ಇಂದು ನನಗೆ ಎದೆಗೆ ಚೂರಿ ಹಾಕಿದ ಹಾಗೆ ಅಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. 

Latest Videos

undefined

ಕಾಂಗ್ರೆಸ್ ಶಾಕ್ ನೀಡಿದ ಕಾಗೋಡು ತಿಮ್ಮಪ್ಪ ಪುತ್ರಿ, ಬಿಜೆಪಿ ಸೇರಲು ಬಿಎಸ್‌ವೈ ಭೇಟಿಯಾದ ರಾಜನಂದಿನಿ!

ಯಾರದ್ದೋ ಕುತಂತ್ರಕ್ಕೆ ಮಗಳು ಬಲಿ: ನನ್ನ ಮಗಳು ಇಂತಹ ಕೆಲಸವನ್ನು ಮಾಡಬಾರದಿತ್ತು. ಮಗಳಾಗಿ ಇವಳು ಈ ರೀತಿಯಾಗಿ ನಡೆದುಕೊಳ್ಳುತ್ತಾಳೆ ಎಂದು ಕನಸಲ್ಲೂ ಕೂಡ ಕಂಡವನಲ್ಲ. ಇದು ನನ್ನ ದೌರ್ಭಾಗ್ಯವಾಗಿದೆ. ಇದು ಆಗಬಾರದಿತ್ತು. ರಾಜಕಾರಣದಲ್ಲಿ ಏನೇ ಆದರೂ ಕಾಂಗ್ರೆಸ್ ಅನ್ನು ಬಿಟ್ಟು ಹೊಗೊಲ್ಲ, ಕಾಂಗ್ರೆಸ್ ಪರವೇ ನಿಂತುಕೊಳ್ಳುವೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪರವೇ ಪ್ರಚಾರ ಕಾರ್ಯಗಳನ್ನು ಮಾಡುತ್ತೇನೆ ಎಂದು ನನಗೆ ಭರವಸೆ ನೀಡಿದ್ದಳು. ಆದರೆ, ಯಾರದ್ದೋ ಕುತಂತ್ರಕ್ಕೆ ಬಲಿಯಾಗಿ ಬಿಜೆಪಿ ಸೇರಲು ಹೊರಟಿದ್ದಾಳೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಲಪ್ಪನ ಕುತಂತ್ರದಿಂದ ಬಿಜೆಪಿ ಸೇರ್ಪಡೆ: ಇನ್ನು ನನ್ನ ಮಗಳು ಕಾಂಗ್ರೆಸ್‌ ಬಿಟ್ಟು ಹೋಗಲು ಯಾರದ್ದೋ ತಂತ್ರ ಇದೆ. ಇದನ್ನ ಮಾಡಿರಬೇಕಾದರೆ ಹಾಲಪ್ಪ ಅವರದ್ದೆ ತಂತ್ರ ಇರಬೇಕು ಎಂದೆನಿಸುತ್ತದೆ. ಮಗಳು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುತ್ತಾಳೆ ಎಂಬುದು ನನಗೆ ಗೊತ್ತಾಗಿದ್ದೆ ಈಗ. ನಾನು ಕೂಡ ಮನ ಒಲಿಸುವ ಪ್ರಯತ್ನ ಮಾಡುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.

ಅಪ್ಪ ಕಾಂಗ್ರೆಸ್‌- ಮಗಳು ಬಿಜೆಪಿ: ಒಟ್ಟಿನಲ್ಲಿ ಅಪ್ಪ ಕಾಂಗ್ರೆಸ್ ಪಕ್ಷದಲ್ಲಿ ಅಪ್ಪ ಇಡೀ ಜೀವಮಾನ ಅಧಿಕಾರ ಅನುಭವಿಸಿ, ಚುನಾವಣಾ ರಾಜಕೀಯದಿಂದ ದೂರ ಸರಿದಿದ್ದಾರೆ. ಆದರೂ ಕಾಂಗ್ರೆಸ್‌ನಿಂದಲೇ ಅವರು ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಮಗಳೇ ಅಪ್ಪನಿಗೆ ಜೀವನ ಕಟ್ಟಿಕೊಳ್ಳಲು ನೆರವಾದ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರಿರುವುದು ವಿಪರ್ಯಾಸವೆ ಸರಿ.

ರಾಜಕಾರಣದಲ್ಲಿ ನಾಲಿಗೆ ಹರಿಬಿಟ್ಟ ನಟಿ ಶೃತಿ ವಿರುದ್ಧ ಕೇಸ್‌ ದಾಖಲು

ಕಾಂಗ್ರೆಸ್‌ ಸದಸ್ಯತ್ವಕ್ಕೆ ರಾಜಿನಾಮೆ: ಇನ್ನು ಕಾಗೋಡು ತಿಮ್ಮಪ್ಪ ಅವರ ಪುತ್ರಿ ರಾಜನಂದಿನಿ ಅವರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಈ ಪತ್ರದಲ್ಲಿ ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ನನಗೆ ಅಥವಾ ನನ್ನ ತಂದೆಯವರಿಗೆ ಟಿಕೆಟ್‌ ನೀಡಿರುವುದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷದ ಏಳಿಗೆಗಾಗಿ ಶ್ರಮಿಸಿದ ನನ್ನ ತಂದೆಗೆ ಸಾರ್ವಜನಿಕವಾಗಿ ನಿಂದಿಸಿ ಅವರಿಗೆ ಅಗೌರವ ತೋರಲಾಗಿದೆ. ಆದ್ದರಿಂದ ಮನನೊಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಉಲ್ಲೇಖ ಮಾಡಿದ್ದಾರೆ. 

click me!