ಬಿಜೆಪಿ‌ಗೆ ಕಾಂಗ್ರೆಸ್ ರಿವರ್ಸ್ ಆಪರೇಷನ್: ಸಿದ್ದರಾಮಯ್ಯ ಮಹತ್ವದ ಸಭೆ..!

By Suvarna NewsFirst Published Nov 7, 2020, 2:58 PM IST
Highlights

ಆರ್.ಆರ್.ನಗರ ಹಾಗೂ ಶಿರಾ ವಿಧಾನಸಭಾ ಉಪಚುನಾವಣೆ ಮುಗಿಯುತ್ತಿದ್ದಂತೆಯೇ  ಮಸ್ಕಿ ಕ್ಷೇತ್ರಗಕ್ಕೂ ಬೈ ಎಲೆಕ್ಷನ್ ಘೋಷಣೆಯಾಗುವ ಸಾಧ್ಯತೆಗಳಿವೆ. ಇದರಿಂದ ಕಾಂಗ್ರೆಸ್,  ಆಪರೇಷನ್‌ಗೆ ಇಳಿದಿದೆ.

ಬೆಂಗಳೂರು, (ನ.07): ಬಿಜೆಪಿ ಆಪರೇಷನ್‌ಗೆ ಕಾಂಗ್ರೆಸ್ ರಿವರ್ಸ್ ಆಪರೇಷನ್‌ಗೆ ಮುಂದಾಗಿದೆ. ಇದಕ್ಕೆ ಪೂರಕವೆಂಬಂತೆ ಇಂದು (ಶನಿವಾರ) ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ.

ಹೌದು...ಇಷ್ಟರಲ್ಲಿಯೇ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗುವ ಸಾಧ್ಯತೆಗಳಿವೆ. ಕಂಗ್ರೆಸ್ ತೊರೆದಿರುವ ಪ್ರತಾಪಗೌಡ ಪಾಟೀಲರಿಗೆ ಬಿಜೆಪಿ ಟಿಕೆಟ್‌ ಫಿಕ್ಸ್ ಆಗಿದೆ.  

ಇದು ಖಚಿತವಾಗುತ್ತಿದ್ದಂತೆಯೇ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 213 ಮತಗಳಿಂದ ಪರಾಭವಗೊಂಡಿದ್ದ ಬಸನಗೌಡ ತುರ್ವಿಹಾಳ್ ಕಾಂಗ್ರೆಸ್‌ ಸೇರ್ಪಡೆಗೆ ಮುಂದಾಗಿದ್ದಾರೆ.

ಬಿಜೆಪಿಗೆ ಬಿಗ್‌ ಶಾಕ್‌: ಆಪರೇಷನ್‌ ಹಸ್ತಕ್ಕೆ ಡಿ.ಕೆ. ಶಿವಕುಮಾರ್‌ ಸಿದ್ಧತೆ..!

ಈಗಾಗಲೇ ಸ್ಥಳೀಯ ನಾಯಕರ ಮಾತುಕತೆಗಳು ಮುಂಗಿದಿದ್ದು, ಇದೀಗ ರಾಜ್ಯ ಮಟ್ಟದ ನಾಯಕರ ಜೊತೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಚರ್ಚಿಸಲು ರಾಯಚೂರು ಜಿಲ್ಲಾ ಕಾಂಗ್ರೆಸ್ ನಿಯೋಗವು ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿತು.

ಬಸನಗೌಡ ಅವರನ್ನ ರಾಯಚೂರಲ್ಲೇ ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ  ಅಥವಾ ಬೆಂಗಳೂರಿನಲ್ಲಿ ಸೇರಬೇಕಾ ಎನ್ನುವ ಬಗ್ಗೆ ನಿಯೋಗ ಸಿದ್ದರಾಮಯ್ಯನವರ ಜತೆ ಚರ್ಚೆ ಮಾಡಿದೆ.

ಇತ್ತ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಸನೌಡ ಅವರ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಅವರಿಗೆ ಕಾಡಾ ಅಧ್ಯಕ್ಷ ಸ್ಥಾನವನ್ನೂ ಸಹ ನೀಡಲಾಗಿದೆ. ಆದ್ರೆ, ತುರ್ವಿಹಾಳ್ ಅದ್ಯಾವುದನ್ನು ಲೆಕ್ಕಿಸಿದೇ ಅವರಿಂದ ದೂರ-ದೂರ ಹೋಗುತ್ತಿದ್ದಾರೆ.

ಒಟ್ಟಿನಲ್ಲಿ  ಬಸನೌಡ ತುರ್ವಿಹಾಳ್ ಬಿಜೆಪಿ ತೊರೆಯುವುದು ಖಚಿತವಾಗಿದ್ದು,  ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ಮಾತ್ರ ಬಾಕಿ ಇದೆ.

click me!