ವಯನಾಡು ಬದಲು ಅಮೇಥಿಯಿಂದ ರಾಹುಲ್ ಸ್ಪರ್ಧೆ, ಗೆಲುವು ಪಕ್ಕಾ ಎಂದ ಕಾಂಗ್ರೆಸ್ ನಾಯಕ!

By Suvarna NewsFirst Published Dec 14, 2022, 6:40 PM IST
Highlights

ರಾಜ್ಯದಲ್ಲಿ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ಇನ್ನೂ ಗೊಂದಲದಲ್ಲಿದೆ. ಅತ್ತ ಕೇಂದ್ರದಲ್ಲಿ ರಾಹುಲ್ ಗಾಂಧಿ ಕ್ಷೇತ್ರ ಯಾವುದು ಅನ್ನೋ ಚರ್ಚೆಯೂ ನಡೆಯುತ್ತಿದೆ. ಇದರ ನಡುವೆ ಗಾಂಧಿ ಕುಟುಂಬದ ಹಲವರಿಗೆ ಪುನರ್ಜನ್ಮ ನೀಡಿದ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.

ನವದೆಹಲಿ(ಡಿ.14): ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಗೆಲುವು ಹೊಸ ಹುರುಪು ನೀಡಿದೆ. ಇಧರ ಬೆನ್ನಲ್ಲೇ ಮುಂಬರವು ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹೊಸ ರಣತಂತ್ರ ರೂಪಿಸಿ ಮುನ್ನುಗ್ಗಲು ಸಜ್ಜಾಗಿದೆ. ಇತ್ತ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಲೋಕಸಭಾ ಚುನಾವಣಾ ತಯಾರಿಯಲ್ಲಿದ್ದಾರೆ. ಇದರ ನಡುವೆ ರಾಹುಲ್ ಗಾಂಧಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಚರ್ಚೆಗಳು ಶುರುವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕೇರಳ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿ ವಯಾನಾಡಿಗೆ ಗುಡ್‌ಬೈ ಹೇಳಿ, ಗಾಂಧಿ ಕುಟುಂಬಕ್ಕೆ ರಾಜಕೀಯವಾಗಿ ಶಕ್ತಿ ತುಂಬಿದ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಅಜಯ್ ರೈ ಹೇಳಿದ್ದಾರೆ.

ನೆಹರೂ ಹಾಗೂ ಗಾಂಧಿ ಕುಟುಬಕ್ಕೆ ಅಮೇಥಿ ಕ್ಷೇತ್ರದ ಕುರಿತು ಅವಿನಾಭವ ಸಂಬಂಧವಿದೆ. ಹೀಗಾಗಿ ಈ ಬಾರಿ ರಾಹುಲ್ ಗಾಂಧಿಯನ್ನು ಅಮೇಥಿ ಜನರು ಗೆಲ್ಲಿಸಿ ದೆಹಲಿ ಸಂಸತ್ತಿಗೆ ಕಳುಹಿಸಬೇಕು ಎಂದು ಅಮೇಥಿ ಕ್ಷೇತ್ರದ ಜನರಿಗೆ ಅಜಯ್ ರೈ ಮನವಿ ಮಾಡಿದ್ದಾರೆ. ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಉತ್ತರ ಪ್ರದೇಶದಲ್ಲಿರುವ ಹಲವು ಸ್ಥಾನಗಳು ಕಾಂಗ್ರೆಸ್ ಪಾಲಾಗಲಿದೆ ಎಂದು ಅಜಯ್ ರೈ ಹೇಳಿದ್ದಾರೆ. 

ಭಾರತ್ ಜೋಡೋನಲ್ಲಿ ಕರ್ನಾಟಕ ಮಾಜಿ ಸಚಿವರ ಪತ್ನಿ ಕೈಹಿಡಿದು ನಡೆದ ರಾಹುಲ್‌ ಗಾಂಧಿ

ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ಅಜಯ್ ರೈ ಮಾತು ಭಾರಿ ಸಂಚಲನ ಸೃಷ್ಟಿಸಿದೆ. ಇತ್ತ ಕಾಂಗ್ರೆಸ್ ಪಕ್ಷ ಈ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಕಳೆದ ಬಾರಿ ಕಹಿ ಅನುಭವ ಆಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿ ಹಾಗೂ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಭರ್ಜರಿ ಗೆಲುವು ದಾಖಲಿಸಿದ್ದರು. ಸ್ಮೃತಿ ಇರಾನಿ 468,514 ಮತಗಳಿಂದ ಗೆಲುವು ದಾಖಲಿಸಿದ್ದರು.

ಅಮೇಥಿಯಲ್ಲಿ ಗೆಲುವಿನ ಅವಕಾಶ ಕಡಿಮೆ ಇನ್ನೋ ಕಾಂಗ್ರೆಸ್ ಆಂತರಿಕೆ ಸಮೀಕ್ಷಾ ವರದಿ ಆಧರಿಸಿ, ರಾಹುಲ್ ಗಾಂಧಿ ಸುಲಭ ಗೆಲುವಿನ ಕ್ಷೇತ್ರವಾಗಿರುವ ವಯನಾಡಿನಿಂದ ಸ್ಪರ್ಧಿಸಿದ್ದರು. ಮುಸ್ಲಿಮ್ ಮತ ಸಂಖ್ಯೆ ಹೆಚ್ಚಿರುವ ವಯನಾಡು ಕ್ಷೇತ್ರದಲ್ಲಿ ರಾಹುಲ್ ಗಾಂಧಿ 7,06,367 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಿಲಿಸಿದ್ದರು.

2014ರಲ್ಲಿ ರಾಹುಲ್ ಗಾಂಧಿ ವಾರಣಾಸಿಯಿಂದ ಸ್ಪರ್ಧಿಸಿ ಸೋತಿದ್ದರು. 2023ರಲ್ಲಿ ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸುವುದು ಖಚಿತ ಎಂದು ಅಜಯ್ ರೈ ಹೇಳಿದ್ದಾರೆ. ಕಾರಣ ಭಾರತ್ ಜೋಡೋ ಯಾತ್ರೆ ಮೂಲಕ ರಾಹುಲ್ ಗಾಂಧಿಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲ ಸಾಕು. ಇಡೀ ಭಾರತದ ಜನತೆ ರಾಹುಲ್ ಗಾಂಧಿಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಈ ಬಾರಿ ರಾಹುಲ್ ಗಾಂಧಿ ಅಮೆಥಿಯಿಂದ ಸುಲಭ ಗೆಲುವು ಪಡೆಯಲಿದ್ದಾರೆ ಎಂದು ಅಜಯ್ ರೈ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ ಹೊಸ ತಲೆನೋವು, ಕಳ್ಳರಿದ್ದಾರೆ ಎಚ್ಚರಿಕೆ ಎಂದ ಪೊಲೀಸ್!

ಭಾರತ್‌ ಜೋಡೋಗೆ ಶುಕ್ರವಾರ 100 ದಿನ:
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರಂಭಿಸಿರುವ ಭಾರತ್‌ ಜೋಡೋ ಯಾತ್ರೆ ಡಿ.16ಕ್ಕೆ 100 ದಿನ ಪೂರೈಸಲಿದೆ. ಹೀಗಾಗಿ ರಾಜಸ್ಥಾನದ ಜೈಪುರದಲ್ಲಿ ಗಾಯಕಿ ಸುನಿಧಿ ಚೌಹಾಣ್‌ ಅವರಿಂದ ವಿಶೇಷ ಸಂಗೀತಗೋಷ್ಠಿ ಆಯೋಜಿಸಲಾಗಿದೆ. ಈ ಮೂಲಕ 100 ದಿನಗಳ ಯಶಸ್ವಿ ಯಾತ್ರೆಯನ್ನು ಸಂಭ್ರಮಿಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಹೇಳಿದ್ದಾರೆ. ಸೆ.7ರಂದು ಕನ್ಯಾಕುಮಾರಿಯಿಂದ ಭಾರತ್‌ ಜೋಡೋ ಪ್ರಾರಂಭವಾಗಿದ್ದು 2023ರ ಫೆಬ್ರವರಿ ಪ್ರಾರಂಭದಲ್ಲಿ ಜಮ್ಮು, ಕಾಶ್ಮೀರ ತಲುಪಲಿದೆ.
 

click me!