ದುರ್ಬಲರಿಗಾಗಿ ಕೆಲಸ ಮಾಡಲು ಬಸವಣ್ಣನವರು ಹೇಳಿದ್ರು, ಬಸವಣ್ಣನವರ ಯೋಚನೆಗಳು, ಆಶಯದಂತೆ ನಾವು ನಡೆಯುತ್ತಿದ್ದೇವೆ. ಬಸವಣ್ಣನವರು ಮಹಿಳೆಯರ ರಕ್ಷಣೆ ಆಗಬೇಕು ಅಂತ ಹೇಳಿದ್ದರು. ಇದಕ್ಕಾಗಿ ನಾವು ಭಾಗ್ಯಲಕ್ಷ್ಮೀ ಯೋಜನೆ ತಂದೆವು. 10 ಕೆ.ಜಿ ಬಡ ಕುಟುಂಬಗಳಿಗೆ ಕೊಟ್ಟಿದ್ದೇವೆ, ಪದವಿಧರರಿಗೆ 3 ಸಾವಿರ ತಿಂಗಳಿಗೆ ಕೊಡಲಿದ್ದೇವೆ. ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1500 ರೂ. ನೀಡಲಿದ್ದೇವೆ: ರಾಹುಲ್ ಗಾಂಧಿ
ವಿಜಯಪುರ(ಏ.23): ವಿಜಯಪುರ ನಗರದಲ್ಲಿ ಇಂದು(ಭಾನುವಾರ) ಶಿವಾಜಿ ಚೌಕ್‌ನಿಂದ ರಾಹುಲ್ ಗಾಂಧಿ ರೋಡ್ ಶೋ ನಡೆಯುತ್ತಿದೆ. ಶಿವಾಜಿ ಚೌಕ್‌ನಿಂದ ಆರಂಭವಾಗಿರುವ ರೋಡ್ ಶೋದ ಮಾರ್ಗದಲ್ಲಿ ರಾಹುಲ್ ಗಾಂಧಿಗೆ ಜನರು ಹೂ ಮಳೆಗೆರೆದು ಸ್ವಾಗತಿಸುತ್ತಿದ್ದಾರೆ. ಜೆಸಿಬಿಯಲ್ಲಿ ಕುಳಿತು ಕಾರ್ಯಕರ್ತರು ಹೂಮಳೆಗೈದಿದ್ದಾರೆ. ರಾಹುಲ್ ಗಾಂಧಿ ಪರ ಜನರು ಘೋಷಣೆಗಳ ಕೂಗುತ್ತಿದ್ದಾರೆ.
ಇದೇ ವೇಳೆ ಮಾತನಾಡಿದ ರಾಹುಲ್ ಗಾಂಧಿ ಅವರು, ದುರ್ಬಲರಿಗಾಗಿ ಕೆಲಸ ಮಾಡಲು ಬಸವಣ್ಣನವರು ಹೇಳಿದ್ರು, ಬಸವಣ್ಣನವರ ಯೋಚನೆಗಳು, ಆಶಯದಂತೆ ನಾವು ನಡೆಯುತ್ತಿದ್ದೇವೆ. ಬಸವಣ್ಣನವರು ಮಹಿಳೆಯರ ರಕ್ಷಣೆ ಆಗಬೇಕು ಅಂತ ಹೇಳಿದ್ದರು. ಇದಕ್ಕಾಗಿ ನಾವು ಭಾಗ್ಯಲಕ್ಷ್ಮೀ ಯೋಜನೆ ತಂದೆವು. 10 ಕೆ.ಜಿ ಬಡ ಕುಟುಂಬಗಳಿಗೆ ಕೊಟ್ಟಿದ್ದೇವೆ, ಪದವಿಧರರಿಗೆ 3 ಸಾವಿರ ತಿಂಗಳಿಗೆ ಕೊಡಲಿದ್ದೇವೆ. ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1500 ರೂ. ನೀಡಲಿದ್ದೇವೆ. ಬಸವಣ್ಣನವರ ಚಿಂತನೆಗಳ ಅಧ್ಯಯನ ಮಾಡಿದ್ದೇನೆ, ಪುಸ್ತಕಗಳನ್ನ ಓದಿದ್ದೇನೆ. ಬಸವಣ್ಣನವರ ಪುಸ್ತಕದಲ್ಲಿ, ಚಿಂತನೆಯಲ್ಲಿ 40% ಕಮಿಷನ್ ವಿಚಾರ ಇದೆಯಾ ಹುಡುಕಾಡಿದೆ ಅದು ಸಿಗಲಿಲ್ಲ. ಬಿಜೆಪಿ ಸರ್ಕಾರ ದೇಶದಲ್ಲಿ ಭ್ರಷ್ಟ ಸರ್ಕಾರವಾಗಿದೆ ಅಂತ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ದುರಾಡಳಿತಕ್ಕೆ ಬೇಸತ್ತ ಜನತೆ: ಎಚ್.ವೈ.ಮೇಟಿ
ಏನೇ ಕೆಲಸ ಮಾಡಿದ್ರು 40% ಕಮಿಷನ್ ಪಡೆಯುತ್ತಾರೆ. ಪಿಎಸ್ಐ ಸ್ಕ್ಯಾಮ್‌ನಲ್ಲೂ ಲೂಟಿ ಮಾಡಿದ್ರು, ಇಂಜಿನಿಯರ್ ಗಳಿಂದ ಲೂಟಿ ಮಾಡಿದ್ದಾರೆ. ಕಾಂಟ್ರಾಕ್ಟರ್ ಗಳು ಪ್ರಧಾನಿಗೆ ಪತ್ರ ಬರೆದರು, 40% ಕಮಿಷನ್ ಬಗ್ಗೆ ಬರೆದರು, ಆದ್ರೆ ಪ್ರಧಾನಿ ಉತ್ತರಿಸಿಲ್ಲ. ಉತ್ತರಿಸೋದು ಕೂಡ ಇಲ್ಲ. ಆದರೆ ಪ್ರಧಾನಿ ನಾನು ಭ್ರಷ್ಟಾಚಾರದ ವಿರುದ್ಧ ಅಂತಾ ಹೇಳ್ತಾರೆ. ನೀವು ಬಿಜೆಪಿಯನ್ನ ಅಧಿಕಾರಕ್ಕೆ ತಂದಿಲ್ಲ, ಕಳ್ಳತನದ ಸರ್ಕಾರ ಅಂತ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಎಂಎಲ್‌ಎ ಗಳನ್ನ ಕಳ್ಳತನ ಮಾಡಿ ಸರ್ಕಾರ ಮಾಡಿದ್ದಾರೆ. ಎಂಎಲ್‌ಎ ಖರೀದಿಗೆ ಹಣ ಎಲ್ಲಿಂದ ಬಂತು. ಶಾಸಕರ ಖರೀದಿಗೆ ಹಣ ಎಲ್ಲಿಂದ ಬಂತು ಅಂತಾ ಪ್ರಧಾನಿ ಹೇಳಬೇಕು. ಭ್ರಷ್ಟಾಚಾರದ ಹಣದಲ್ಲಿ ಶಾಸಕರ ಖರೀದಿ ನಡೆದಿದೆ. ಈ ಸಾರಿ ಕಾಂಗ್ರೆಸ್‌ಗೆ 150 ಸೀಟ್ ಬರಲಿವೆ. ಬಿಜೆಪಿಗೆ 40 ಸೀಟ್ ಬರುತ್ವೆ, 40% ಕಮಿಷನ್ ತಿಂದವರಿಗೆ 40 ಸೀಟ್ ಬರುತ್ತಚೆ ಅಂತ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಸುಳ್ಳೇ ಕಾಂಗ್ರೆಸ್‌ನ ಬಂಡವಾಳ: ಶ್ರೀಕಾಂತ ಕುಲಕರ್ಣಿ
ನನ್ನ ಮೇಲೆ ಬಿಜೆಪಿ ಕೇಸ್‌ಗಳನ್ನ ಹಾಕಿದೆ, ಮನೆ ಕಿತ್ತುಕೊಂಡಿದೆ. ನಾನು ಓಬಿಸಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇನೆ ಎಂದಿದ್ದಾರೆ. ನಾನು ಎಲ್ಲರ ಬಗ್ಗೆಯೂ ಗೌರವಿಸುವೆ, ದ್ವೇಷದ ಊರಲ್ಲಿ ಪ್ರೀತಿಯ ಸಾಮ್ರಾಜ್ಯ ಕಟ್ಟುವೆ. ಯುಪಿಎ ಸರ್ಕಾರದ ವೇಳೆ ನಾವು ಜಾತಿ ಸಮೀಕ್ಷೆ ಮಾಡಿದ್ದೇವೆ. ಈ ಸಮೀಕ್ಷೆ ಬಹಿರಂಗ ಪಡಿಸಿ ಅಂತ ಪ್ರಧಾನಿ ಮೋದಿfಎ ರಾಹುಲ್ ಗಾಂಧಿ ಸವಾಲ್ ಹಾಕಿದ್ದಾರೆ.
ಓಬಿಸಿ, ದಲಿತರು, ಹಿಂದೂಳಿದವರು ಎಷ್ಟು ಎನ್ನುವ ಸಮೀಕ್ಷೆ ಡೆಟಾ ಬಿಡುಗಡೆ ಮಾಡಿ. ಇದು ಮೊದಲು ಕೆಲಸ ಮಾಡಿ. ಮಾಡದೆ ಇದ್ರೆ ನಾವೇ ಇದನ್ನೇ ಮಾಡಿ ತೋರಿಸ್ತೇವೆ. 50% ಮೀಸಲಾತಿ ತೆಗೆದು ಹಾಕಿ, ಬೇರೆಯರದ್ದು ಕಸಿದುಕೊಂಡು ಕೊಡಬೇಡಿ. ಜನಸಂಖ್ಯೆ ಆಧಾರದ ಮೇಲೆ ಸಿಗಬೇಕು. ಮೋದಿ ಓಬಿಸಿ, ಹಿಂದುಳಿದವರ ಬಗ್ಗೆ ಮಾತನಾಡುವಾಗ ಇದನ್ನ ಮಾಡಿ ತೋರಿಸಿ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆ ಮಾಡಿದ್ದು, ದೇಶವನ್ನ ಒಗ್ಗೂಡಿಸಲು. ಆಜಾನ್ ಧ್ವನಿ ಕೇಳಿ, ಅಜಾನ್ ಆಗ್ತಿದೆಯಾ ಅಂತ ರಾಹುಲ್ ಗಾಂಧಿ ಕೇಳಿದ್ದಾರೆ.