ಬಿಜೆಪಿ ಆರ್‌ಎಸ್‌ಎಸ್‌ಗೆ ಧನ್ಯವಾದ, ಇವರೇ ನನ್ನ ಗುರು ಎಂದ ರಾಹುಲ್ ಗಾಂಧಿ!

By Suvarna NewsFirst Published Dec 31, 2022, 3:57 PM IST
Highlights

ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಸದಾ ವಾಗ್ದಾಳಿ ನಡೆಸುವ ರಾಹುಲ್ ಗಾಂಧಿ ಇದೀಗ ಧನ್ಯವಾದ ಹೇಳಿದ್ದಾರೆ. ಇಷ್ಟೇ ಅಲ್ಲ ಬಿಜೆಪಿ ಹಾಗೂ ಆರ್‌ಎಸ್ಎಸ್ ನನ್ನ ಗುರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

ನವದೆಹಲಿ(ಡಿ.31): ಭಾರತ್ ಜೋಡೋ ಯಾತ್ರೆ ಇದೀಗ ಅಂತಿಮ ಘಟ್ಟ ತಲುಪುತ್ತಿದೆ. ಕನ್ಯಾಕುಮಾರಿಯಿಂದ ಆರಂಭಗೊಂಡ ಯಾತ್ರೆ ಸದ್ಯ ದೆಹಲಿಯಲ್ಲಿ ಸದ್ದು ಮಾಡುತ್ತಿದೆ. ಇದರ ನಡುವೆ ರಾಹುಲ್ ಗಾಂಧಿ ಸುದ್ದಿಗೋಷ್ಟಿ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಭಾರತ್ ಜೋಡೋ ಯಾತ್ರೆಯ ಯಶಸ್ವಿಗೆ ಕಾರಣರಾದ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಧನ್ಯವಾದ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇಷ್ಟೇ ಅಲ್ಲ ಇವರೇ ನನ್ನ ಗುರುಗಳು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಈ ಮಾತನ್ನು ವ್ಯಂಗ್ಯವಾಗಿ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆ ಈ ಮಟ್ಟಕ್ಕೆ ಯಶಸ್ಸುಗಳಿಸಲು ಬಿಜೆಪಿ ಹಾಗೂ ಆರ್‌ಎಸ್ಎಸ್ ಕಾರಣವಾಗಿದೆ. ಭಾರತ್ ಜೋಡೋ ಯಾತ್ರೆಗೆ ವಿರುದ್ಧ ಟೀಕೆ, ಟಿಪ್ಪಣಿ, ವಿರೋಧ ವ್ಯಕ್ತಪಡಿಸಿದ ಕಾರಣ ನಮ್ಮ ಯಾತ್ರೆ ಮತ್ತಷ್ಟು ಶಕ್ತಿಯುತವಾಗಿ ಮುಂದುವರಿದಿದೆ. ಬಿಜೆಪಿ ಹಾಗೂ ಆರ್‌ಎಸ್ಎಸ್ ಎಷ್ಟು ವಿರೋಧ ಮಾಡುತ್ತೆ, ಅಷ್ಟೇ ಜೋಶ್‌ನೊಂದಿಗೆ ನಮ್ಮ ಯಾತ್ರೆ ಸಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕನ್ಯಾಕುಮಾರಿಯಿಂದ ಆರಂಭಗೊಂಡ ಈ ಯಾತ್ರೆ ಒಂದು ಸಾಮಾನ್ಯ ಯಾತ್ರೆಯಾಗಿ ನಾನು ಭಾವಿಸಿದ್ದೆ. ಆದರೆ ಯಾತ್ರೆ ಒಂದೊಂದು ಜಿಲ್ಲೆ, ಒಂದೊಂದು ರಾಜ್ಯ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಜನಗಳ ಭಾವನೆ ಅರ್ಥವಾಗತೊಡಗಿತು. ನಮ್ಮ ಯಾತ್ರೆಯ ಧ್ವನಿ ಹೆಚ್ಚಾಯಿತು. ಈ ಯಾತ್ರೆ ಜನರ ಯಾತ್ರೆಯಾಗಿದೆ. ಜನರ ಭಾವನೆಯಾಗಿದೆ. ಸರ್ಕಾರದ ವಿರುದ್ಧ ಆಕ್ರೋಶವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿ ಬಹಳ ಕಡೆ ಓಡಾಡಬೇಕು; ಅವರು ಓಡಾಡಿದಷ್ಟು ಬಿಜೆಪಿಗೆ ಲಾಭ: ಪ್ರಲ್ಹಾದ್ ಜೋಶಿ

ಭಾರತ್ ಜೋಡೋ ಯಾತ್ರೆ ಯಶಸ್ಸಿಗೆ ಬಿಜೆಪಿ ಆರ್‌ಎಸ್‌ಎಸ್‌ಗೆ ಧನ್ಯವಾದ ಹೇಳಿದ ರಾಹುಲ್ ಗಾಂಧಿ, ಮತ್ತೊಂದು ಹೇಳಿಕೆಯನ್ನು ನೀಡಿದ್ದಾರೆ. ಇವರೆಡು ನನ್ನ ಗುರುಗಳು ಎಂದಿದ್ದಾರೆ. ಬಿಜೆಪಿ ನನಗೆ ಏನು ತಪ್ಪು ಮಾಡಬಾರದು ಅನ್ನೋದನ್ನು ಹೇಳಿಕೊಟ್ಟಿದೆ. ಬಿಜಿಪಿ ತಪ್ಪಿನ ಹಾದಿಯಲ್ಲೇ ನಡೆಯುತ್ತಿದೆ. ಇದರಿಂದ ಈ ದಾರಿ ಬಿಟ್ಟು ಸರಿಯಾದ ದಾರಿಯಲ್ಲಿ ಸಾಗಲು ನನಗೆ ಸಹಕಾರಿಯಾಗಿದೆ. ಈ ಕಾರಣಕ್ಕೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಗುರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

When I started this,I just took it as an ordinary yatra from Kanyakumari to Kashmir. Slowly we understood that this yatra has a voice & feelings. I want to thank people from BJP & RSS, because the more they target us, it helps us in some way or the other: Congress MP Rahul Gandhi pic.twitter.com/zxbOjtPPn4

— ANI (@ANI)

ಬಿಜೆಪಿ ಹಾಗೂ ಆರ್‌ಎಸ್‌ಎಸ್ ನೋಡಿ ನಾವು ಯಾವ ತಪ್ಪು ಮಾಡಬಾರದು ಅನ್ನೋದು ತಿಳಿಯಲಿದೆ. ತಪ್ಪಿನಲ್ಲೇ ದಿನ ದೂಡುವ ಬಿಜೆಪಿ ಹಾಗೂ ಆರ್‌ಎಸ್ಎಸ್ ಗುರುವಾಗಿ ನಮ್ಮನ್ನು ಎಚ್ಚರಿಸಿದೆ ಎಂದಿದ್ದಾರೆ. ವಿಪಕ್ಷಗಳು ಒಗ್ಗಟ್ಟಾಗಿ ನಿಂತರೆ ಬಿಜೆಪಿ ಒಂದು ಚುನಾವಣೆ ಗೆಲ್ಲುವುದು ಕಷ್ಟವಾಗಲಿದೆ ಎಂದಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ರಾಹುಲ್ ಗಾಂಧಿ ಎಲ್ಲರಿಗೂ ಮುಕ್ತ ಆಹ್ವಾನ ನೀಡಿದ್ದರೆ. ಅಖಿಲೇಶ್ ಯಾದವ್ ಹಾಗೂ ಮಾಯಾವತಿ ಬಹಿರಂಗವಾಗಿ ಭಾರತ್ ಜೋಡೋ ಯಾತ್ರೆ ವಿರುದ್ಧ ಹೇಳಿಕೆ ನೀಡಿದ್ದರು. ಆದರೆ ರಾಹುಲ್ ಗಾಂಧಿ ಇವರಿಬ್ಬರನ್ನು ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆ.

ಕೇಂದ್ರದ ಕೊರೋನಾ ಎಲ್ಲಿ? ಹುಡುಕಿದರೂ ಕಾಣಿಸುತ್ತಿಲ್ಲ, ಸಚಿವರ ಪತ್ರಕ್ಕೆ ಕಾಂಗ್ರೆಸ್ ನಾಯಕನ ವ್ಯಂಗ್ಯ! 

ಭಾರತ್ ಜೋಡೋ ಯಾತ್ರೆ ಇದೀಗ ಅಂತಿಮ ಘಟ್ಟ ತಲುಪುತ್ತಿದೆ. ಕನ್ಯಾಕುಮಾರಿಯಿಂದ ಆರಂಭಗೊಂಡ ಯಾತ್ರೆ ಸದ್ಯ ದೆಹಲಿಯಲ್ಲಿ ಸದ್ದು ಮಾಡುತ್ತಿದೆ. ಇದರ ನಡುವೆ ರಾಹುಲ್ ಗಾಂಧಿ ಸುದ್ದಿಗೋಷ್ಟಿ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಭಾರತ್ ಜೋಡೋ ಯಾತ್ರೆಯ ಯಶಸ್ವಿಗೆ ಕಾರಣರಾದ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಧನ್ಯವಾದ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇಷ್ಟೇ ಅಲ್ಲ ಇವರೇ ನನ್ನ ಗುರುಗಳು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಈ ಮಾತನ್ನು ವ್ಯಂಗ್ಯವಾಗಿ ಹೇಳಿದ್ದಾರೆ. ಭಾರತ್ ಜೋಡೋ ಯಾತ್ರೆ ಈ ಮಟ್ಟಕ್ಕೆ ಯಶಸ್ಸುಗಳಿಸಲು ಬಿಜೆಪಿ ಹಾಗೂ ಆರ್‌ಎಸ್ಎಸ್ ಕಾರಣವಾಗಿದೆ. ಭಾರತ್ ಜೋಡೋ ಯಾತ್ರೆಗೆ ವಿರುದ್ಧ ಟೀಕೆ, ಟಿಪ್ಪಣಿ, ವಿರೋಧ ವ್ಯಕ್ತಪಡಿಸಿದ ಕಾರಣ ನಮ್ಮ ಯಾತ್ರೆ ಮತ್ತಷ್ಟು ಶಕ್ತಿಯುತವಾಗಿ ಮುಂದುವರಿದಿದೆ. ಬಿಜೆಪಿ ಹಾಗೂ ಆರ್‌ಎಸ್ಎಸ್ ಎಷ್ಟು ವಿರೋಧ ಮಾಡುತ್ತೆ, ಅಷ್ಟೇ ಜೋಶ್‌ನೊಂದಿಗೆ ನಮ್ಮ ಯಾತ್ರೆ ಸಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

click me!