ಸಿಎಂ ಅಭ್ಯರ್ಥಿ ಬಗ್ಗೆ ಮಾತನಾಡದಂತೆ ರಾಹುಲ್‌ ಗಾಂಧಿ ಸೂಚನೆ: ಎಂ.ಬಿ.ಪಾಟೀಲ್‌

By Govindaraj S  |  First Published Aug 9, 2022, 4:30 AM IST

ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವಿಚಾರಕ್ಕೆ ಸಂಬಂಧಿಸಿ ಯಾರೂ ಮಾತನಾಡದಂತೆ ಹೈಕಮಾಂಡ್‌ ನಾಯಕ ರಾಹುಲ್‌ ಗಾಂಧಿ ಸೂಚನೆ ನೀಡಿರುವುದಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ. 


ವಿಜಯಪುರ (ಆ.09): ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವಿಚಾರಕ್ಕೆ ಸಂಬಂಧಿಸಿ ಯಾರೂ ಮಾತನಾಡದಂತೆ ಹೈಕಮಾಂಡ್‌ ನಾಯಕ ರಾಹುಲ್‌ ಗಾಂಧಿ ಸೂಚನೆ ನೀಡಿರುವುದಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಪಡೆಯಬೇಕು. 

ಹೆಚ್ಚಿನ ಸ್ಥಾನಗಳು ಬಂದರೆ ಶಾಸಕಾಂಗ ಸಭೆಯಲ್ಲಿ ಶಾಸಕರ ಅಭಿಪ್ರಾಯ, ಕಾಂಗ್ರೆಸ್‌ ಹೈಕಮಾಂಡ್‌ ಯಾರನ್ನು ಸಿಎಂ ಮಾಡಬೇಕು ಎಂಬುವುದನ್ನು ನಿರ್ಧರಿಸುತ್ತದೆ ಎಂದರು. ಇನ್ನು ಸಿದ್ದರಾಮೋತ್ಸವ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಲಿಂಗನ ಮಾಡಿದ ವಿಚಾರವಾಗಿ ಸಚಿವ ಮುನಿರತ್ನ ಆರೋಪ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಪಾಟೀಲ ಅವರು, ಯಾರು ಅಕ್ರಮ ಚಟುವಟಿಕೆ ಮಾಡುತ್ತಾರೋ ಅಂಥವರಿಗೆ ಅಕ್ರಮವೇ ಕಾಣುತ್ತದೆ ಎಂದು ತಿರುಗೇಟು ನೀಡಿದರು.

Tap to resize

Latest Videos

ಮಾಜಿ ಸಚಿವ MB Patil ಮನೆಯಲ್ಲಿ ವಾಚ್‌, ವಿದೇಶಿ ಕರೆನ್ಸಿ ಕದ್ದ ಕೆಲಸಗಾರ!

ತಾಕತ್ತಿದ್ದರೆ ಬಿಜೆಪಿ ಸಿದ್ದರಾಮೋತ್ಸವ ಮಾದರಿಯ ಸಮಾವೇಶ ಮಾಡಲಿ: ತಾಕತ್ತಿದ್ದರೆ ಬಿಜೆಪಿಯವರು ಸಿದ್ದರಾಮೋತ್ಸವ ಮಾದರಿಯ ಸಮಾವೇಶ ಮಾಡಿ ಅಷ್ಟುಸಂಖ್ಯೆಯ ಜನರನ್ನು ಸೇರಿಸಲಿ ನೋಡೋಣ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಸವಾಲು ಹಾಕಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಜನಸಾಗರ ಸೇರಿದ್ದ ರೀತಿಯಲ್ಲಿಯೇ ಪರ್ಯಾಯ ಸಮಾವೇಶ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಬಿಜೆಪಿಯವರು ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು.

ಸಿದ್ದರಾಮಯ್ಯನವರ 75ನೇ ಜನ್ಮದಿನವಿತ್ತು. ಹಾಗಾಗಿ ನಾವು ಆಚರಣೆ ಮಾಡಿದ್ದೇವೆ. ಅವರು ಏನಂತ ಮಾಡುತ್ತಾರೆ. ಅದ್ಯಾವ ಪರ್ಯಾಯ ಸಮಾವೇಶ ಮಾಡುತ್ತಾರೆ ಎಂದು ಮರುಪ್ರಶ್ನಿಸಿದರು. ರಾಜ್ಯದ ಇತಿಹಾಸದಲ್ಲಿ ಇಷ್ಟುಜನರು ಯಾವ ಸಮಾವೇಶದಲ್ಲೂ ಸೇರಿರಲಿಲ್ಲ. ಮುಂದೆಯೂ ಸೇರುವುದಿಲ್ಲ. ಬೇಕಾದರೆ ಸಮಾವೇಶ ಮಾಡಿ ತೋರಿಸಲಿ. ಸಿದ್ದರಾಮೋತ್ಸವದಲ್ಲಿ ಸೇರಿದ್ದ ಅರ್ಧದಷ್ಟುಜನರನ್ನು ಸೇರಿಸಿ ತೋರಿಸಲಿ. ಅದು ಅವರಿಂದ ಸಾಧ್ಯವಿಲ್ಲದ ಮಾತು, ಅವರು ಇದರಿಂದ ನಗೆಪಾಟಿಲಿಗೆ ಈಡಾಗುತ್ತಾರೆ ಎಂದು ತಿಳಿಸಿದರು.

ಸಿದ್ದರಾಮೋತ್ಸವ ಸಮಾರಂಭದಲ್ಲಿ ಸೇರಿದ್ದ ಜನಸ್ತೋಮ ಕಾಂಗ್ರೆಸ್‌ಗೆ ಹೊಸ ಹುಮ್ಮಸ್ಸು ನೀಡಿದೆ. ಸಿದ್ದರಾಮಯ್ಯ ಬೆಂಬಲಿಗರು, ಕಾಂಗ್ರೆಸ್‌ ಕಾರ್ಯಕರ್ತರಿಂದ ಕಾಂಗ್ರೆಸ್‌ನ ಆತ್ಮ ಸ್ಥೈರ್ಯ ಹೆಚ್ಚಿದೆ. ಬಿಜೆಪಿ ಬಗ್ಗೆ ಜನರು ಜುಗುಪ್ಸೆ ಹೊಂದಿರುವುದನ್ನು ಇದು ತೋರಿಸುತ್ತದೆ ಎಂದು ಹೇಳಿದರು. ಕಾಂಗ್ರೆಸ್ಸಿನಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ವಿಚಾರ ಪ್ರತಿಕ್ರಿಯಿಸಿದ ಅವರು, ಈ ಕುರಿತು ಯಾರೂ ಮಾತನಾಡದಂತೆ ರಾಹುಲ್‌ ಗಾಂಧಿ ಸೂಚನೆ ನೀಡಿದ್ದಾರೆ. ಚುನಾವಣೆಯಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಪಡೆಯಬೇಕು. ಹೆಚ್ಚಿನ ಸ್ಥಾನಗಳು ಬಂದರೆ ಶಾಸಕಾಂಗ ಸಭೆಯಲ್ಲಿ ಶಾಸಕರ ಅಭಿಪ್ರಾಯ, ಕಾಂಗ್ರೆಸ್‌ ಹೈಕಮಾಂಡ್‌ ಯಾರನ್ನು ಸಿಎಂ ಮಾಡಬೇಕು ಎಂಬುವುದನ್ನು ನಿರ್ಧರಿಸುತ್ತದೆ ಎಂದರು.

ಇನ್ನೂ ಒಂದೂವರೆ ವರ್ಷ ಬಿಎಸ್‌ವೈ ಮುಂದುವರಿಸಬಹುದಿತ್ತು: ಎಂ.ಬಿ.ಪಾಟೀಲ್‌

ಅನೈತಿಕ ಆಲಿಂಗನ ವಿಚಾರ: ಸಿದ್ದರಾಮೋತ್ಸವ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಲಿಂಗನ ಮಾಡಿದ ವಿಚಾರವಾಗಿ ಸಚಿವ ಮುನಿರತ್ನ ಆರೋಪ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಪಾಟೀಲ ಅವರು, ಯಾರು ಅಕ್ರಮ ಚಟುವಟಿಕೆ ಮಾಡುತ್ತಾರೋ ಅಂಥವರಿಗೆ ಅಕ್ರಮವೇ ಕಾಣುತ್ತದೆ. ಜನ್ಮದಿನದಂದು ಯಾರಿಗಾದರೂ ಸ್ವಾಭಾವಿಕವಾಗಿ ಕಡುವೈರಿಗಳು ಕೂಡ ಶುಭಾಶಯ ಕೋರುವುದು ಸ್ವಾಭಾವಿಕ. ಸಿದ್ದರಾಮಯ್ಯ ಅವರಿಗೆ ಈಶ್ವರಪ್ಪ ಅವರು ವಿಶ್‌ ಮಾಡಿದ್ದಾರೆ. ಡಿ.ಕೆ.ಶಿವಕುಮಾರ ಅವರೇನು ಸಿದ್ದರಾಮಯ್ಯನವರ ವೈರಿಯಲ್ಲ. ಕಾಂಗ್ರೆಸ್‌ ಪಕ್ಷದವರೇ. ಮೇಲಾಗಿ ಕಾಂಗ್ರೆಸ್‌ ಪಕ್ಷದ ರಾಜ್ಯ ಘಟಕದ ಆಧ್ಯಕ್ಷರಾಗಿದ್ದಾರೆ. ಹೀಗಾಗಿ, ಆಲಿಂಗನ ಮಾಡಿಕೊಂಡು ಜನರಿಗೆ ಒಗ್ಗಟ್ಟಿನ ಸಂದೇಶ ಸಾರಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದರು.

click me!