ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್: ಗೃಹ ಸಚಿವ ಪರಮೇಶ್ವರ್ ಹೇಳಿದಿಷ್ಟು..

Published : Aug 11, 2025, 10:47 AM IST
Dr G Parameshwar

ಸಾರಾಂಶ

ಅದೆಲ್ಲಾ ಎಐಸಿಸಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಯವರು ನೋಡಿಕೊಳ್ಳುತ್ತಾರೆ. ನಮ್ಮ ಅಧ್ಯಕ್ಷರು ಏನು ಕ್ಲಾರಿಫಿಕೇಶನ್ ಕೇಳಿದ್ದಾರೋ ಅದು ಕೊಡ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಬೆಂಗಳೂರು (ಆ.11): ಪಿಸಿಸಿ ಅಧ್ಯಕ್ಷರು ಅವರು ಹೋಗಿ ಮುಖ್ಯ ಚುನಾವಣಾ ಅಧಿಕಾರಿಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಅವರು ಕೆಪಿಸಿಸಿ ಅಧ್ಯಕ್ಷರಿಗೂ ಕೂಡ ಕ್ಲಾರಿಫಿಕೇಶನ್ ಕೇಳಿದ್ದಾರೆ ಎಂದು ಚುನಾವಣಾ ಆಯೋಗ‌ ರಾಹುಲ್ ಗಾಂಧಿಗೆ ನೋಟಿಸ್ ನೀಡಿದ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಅದೆಲ್ಲಾ ಎಐಸಿಸಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಯವರು ನೋಡಿಕೊಳ್ಳುತ್ತಾರೆ. ನಮ್ಮ ಅಧ್ಯಕ್ಷರು ಏನು ಕ್ಲಾರಿಫಿಕೇಶನ್ ಕೇಳಿದ್ದಾರೋ ಅದು ಕೊಡ್ತಾರೆ. ದಾಖಲೆಗಳನ್ನು ಕೊಡಿ ಅಂತ ಎಲೆಕ್ಷನ್ ಕಮಿಷನರ್ ಕೇಳಿದ್ದಾರೆ. ನಮ್ಮ ಅಧ್ಯಕ್ಷರು ಅದೆಲ್ಲವನ್ನು ಕೊಡುತ್ತಾರೆ. ಮಾಹಿತಿ ಅಧಿಕಾರ ಇರುವುದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಿಗೆ, ರಾಹುಲ್ ಗಾಂಧಿ ಅವರು ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಎಲೆಕ್ಷನ್ ಕಮಿಷನ್‌ಗೆ ಏನೆಲ್ಲಾ ಮಾಹಿತಿ ಕೊಡಬೇಕು. ಬೇರೆ ಬೇರೆ ಯಾರಾದರೂ ಪ್ರಶ್ನೆಗಳು ಎತ್ತಿದರೆ ಅದಕ್ಕೆ ಉತ್ತರ ಕೊಡಬೇಕು. ಅದೆಲ್ಲವನ್ನು ಅಧ್ಯಕ್ಷರು ಮಾಡುತ್ತಾರೆ ಎಂದರು.

ಸಿದ್ದರಾಮಯ್ಯ ಮತ ಖರೀದಿ ಮಾಡೇ ಗೆದ್ದಿದ್ದು ಎಂಬ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರವಾಗಿ ಅದರ ಬಗ್ಗೆ ನಾನು ಏನು ಹೇಳೋಕೆ ಆಗಲ್ಲ. ಆಗ ಅವರು ನಮ್ಮ ಪಕ್ಷದಲ್ಲೇ ಇದ್ದರು. ಏನು ಬೇಕಾದರೂ ಹೇಳುತ್ತಾರೆ. ಅವರಿಗೆ ಯಾವ ರೀತಿ ಹೇಳಿದ್ರೆ ಜನಾಕರ್ಷಣೆ ಆಗುತ್ತೆ ಅನ್ನೋದು ಗೊತ್ತಿದೆ, ಹಾಗಾಗಿ ಹೇಳ್ತಾರೆ ಎಂದರು. ಎಸ್ಐಟಿಗೆ ಪೊಲೀಸ್ ಸ್ಟೇಷನ್ ಪವರ್ ಒದಗಿಸಿದ ವಿಚಾರವಾಗಿ ಪದೇ ಪದೇ ಪೊಲೀಸ್ ಸ್ಟೇಷನ್ ಗೆ ಹೋಗಿ ರಿಜಿಸ್ಟರ್ ಮಾಡಿ ಅಂತ ಹೇಳುವ ಬದಲು, ಎಸ್ಐಟಿಗೆ ಪೊಲೀಸ್ ಸ್ಟೇಷನ್ ಅಧಿಕಾರ ಕೊಟ್ಟಿದ್ದೇವೆ. ಯಾರಾದರೂ ದೂರು ಇದ್ದರೆ ಕೊಡಬಹುದು ಕೇಸ್ ರಿಜಿಸ್ಟರ್ ಮಾಡ್ತಾರೆ.

ಧರ್ಮಸ್ಥಳದ ಹೆಸರು ಹಾಳು ಮಾಡಲು ಷಡ್ಯಂತ್ರ ಎಂಬ ರಾಜಕೀಯ ನಾಯಕರ ಹೇಳಿಕೆ ವಿಚಾರವಾಗಿ ಬಹಳಷ್ಟು ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ಎಸ್‌ಐ‌ಟಿ ತನಿಖೆ ಮುಗಿಯುವವರೆಗೂ ನಾವ್ಯಾರು ಕೂಡ ಅದರ ಬಗ್ಗೆ ಮಾತನಾಡೋದು ಸಮಂಜಸ ಅಲ್ಲ. ವಾಸ್ತವಂಶ ಏನು ಅಂತ ಗೊತ್ತಾಗಬೇಕು. 13 ಸ್ಥಳಗಳನ್ನು ತೋರಿಸಿದರು ಈಗ 16, 19 ಆಗಿದೆ. ಹೀಗೆಲ್ಲಾ ಆಗ್ತಾ ಇದೆ ಅಂತಿಮವಾಗಿ ಎಸ್‌ಐಟಿ ಏನು ತೀರ್ಮಾನ ಮಾಡುತ್ತಾರೆ ಆನಂತರ ಮಾತಾಡೋಣ ಎಂದು ಪರಮೇಶ್ವರ್ ತಿಳಿಸಿದರು. ಮಧ್ಯಂತರ ವರದಿ ಆಗ್ರಹಿಸಿದ ವಿಚಾರವಾಗಿ ಈ ವಿಚಾರ ಸದನದಲ್ಲೂ ಪ್ರಸ್ತಾಪ ಆಗಬಹುದು ಸದನದಲ್ಲಿ ಮಾತನಾಡುತ್ತೇನೆ ಎಂದರು.

ಒಳ ಮೀಸಲಾತಿಯ ಅವೈಜ್ಞಾನಿಕ ಎಂದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿಕೆ ವಿಚಾರವಾಗಿ ವೈಯಕ್ತಿಕವಾಗಿ ಅವರಿಗೆ ಸಮಾಧಾನ ಇದೆಯಾ ಇಲ್ವಾ ಅದೆಲ್ಲ ಪ್ರಶ್ನೆ ಅಲ್ಲ. ವರದಿ ಬಂದಿದೆ ಸರ್ಕಾರ 16 ತಾರೀಕು ವಿಶೇಷ ಕ್ಯಾಬಿನೆಟ್ ಕರೆದಿದೆ. 30 ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಒಂದು ಅಂತಿಮ ಹಂತಕ್ಕೆ ತಲುಪಿದೆ ಅಂತ ಅನ್ಸುತ್ತೆ. ಇದು ಸರ್ಕಾರದ ತೀರ್ಮಾನ ಆಗಬೇಕು. ವೈಯಕ್ತಿಕವಾಗಿ ಒಬ್ಬೊಬ್ಬರು ಒಂದೊಂದು ಹೇಳಿಕೆಯನ್ನು ಕೊಡುತ್ತಾರೆ. ಸರ್ಕಾರ ತೀರ್ಮಾನ ಏನು ಅಂತ ಆಗಬೇಕಲ್ಲ. 16ನೇ ತಾರೀಕು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ಅಂತಿಮವಾಗಿ ನಿರ್ಣಯ ಮಾಡುತ್ತೇವೆ. ಅಲ್ಲಿಯವರೆಗೂ ನಾವು ಸಮಾಧಾನದಿಂದ ಇರಬೇಕು ಎಂದು ಪರಮೇಶ್ವರ್ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚುನಾವಣೆ ಯಾವಾಗ ನಡೆದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ: ಬಿ.ವೈ.ವಿಜಯೇಂದ್ರ ವಿಶ್ವಾಸ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’