ಮಿಠಾಯಿ ಅಂಗಡಿಗೆ ಹಠಾತ್ ಭೇಟಿ; ಜಾಮೂನು ತಿಂದು ಸ್ಟಾಲಿನ್‌ಗೆ ಮೈಸೂರು ಪಾಕ್ ತಿನ್ನಿಸಿದ ರಾಹುಲ್ ಗಾಂಧಿ!

By Kannadaprabha News  |  First Published Apr 14, 2024, 6:43 AM IST

ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕೊಯಮತ್ತೂರಿಗೆ ತೆರಳಿದ್ದ ವೇಳೆ ಅಚಾನಕ್ಕಾಗಿ ಅಲ್ಲಿನ ಸ್ವೀಟ್‌ ಅಂಗಡಿಯೊಂದಕ್ಕೆ ಭೇಟಿ ಕೊಟ್ಟು ತಮಗಿಷ್ಟವಾದ ಸಿಹಿತಿನಿಸುಗಳನ್ನು ಖರೀದಿಸಿ ಗಮನಸೆಳೆದರು.


ಕೊಯಮತ್ತೂರು (ಏ.14): ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕೊಯಮತ್ತೂರಿಗೆ ತೆರಳಿದ್ದ ವೇಳೆ ಅಚಾನಕ್ಕಾಗಿ ಅಲ್ಲಿನ ಸ್ವೀಟ್‌ ಅಂಗಡಿಯೊಂದಕ್ಕೆ ಭೇಟಿ ಕೊಟ್ಟು ತಮಗಿಷ್ಟವಾದ ಸಿಹಿತಿನಿಸುಗಳನ್ನು ಖರೀದಿಸಿ ಗಮನಸೆಳೆದರು.

ರಸ್ತೆಯಲ್ಲಿ ಅಂಗಡಿ ನೋಡುತ್ತಿದ್ದಂತೆಯೇ, ಆ ಅಂಗಡಿಗೆ ತೆರಳಲು ರಾಹುಲ್‌(Rahul gandhi) ರಸ್ತೆಯ ಡಿವೈಡರ್‌ ನೆಗೆದಿದ್ದು ಎಲ್ಲರ ಗಮನ ಸೆಳೆದಿದೆ. ಬಳಿಕ ರಾಹುಲ್‌ ತಮಗೆ ಇಷ್ಟವಾದ ಗುಲಾಬ್‌ ಜಾಮೂನ್‌ ಖರೀದಿಸಿ, ತಮ್ಮ ಜೊತೆಗೆ ಬಂದಿದ್ದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ಗೆ ಮೈಸೂರು ಪಾಕ್‌ ಕೊಡಿಸಿದರು. ಅಲ್ಲದೆ ಅಂಗಡಿಯಲ್ಲಿ 20-30 ನಿಮಿಷಗಳ ಕಾಲ ಇದ್ದು, ಎಲ್ಲ ಸಿಹಿತಿನಿಸುಗಳನ್ನು ರುಚಿ ಮಾಡಿ ಸಿಬ್ಬಂದಿಯೊಂದಿಗೆ ಚಿತ್ರ ತೆಗೆಸಿಕೊಂಡರು.

Tap to resize

Latest Videos

ಬಳಿಕ ತಾವು ಖರೀದಿಸಿದ ಸಿಹಿತಿನಿಸುಗಳ ಹಣವನ್ನು ಅಂಗಡಿಯವನಿಗೆ ನೀಡಿ ಹಿಂದಿರುಗಿದರು.

ಮೇರಠ್: ರಸ್ತೆ ಮಧ್ಯೆ ನಮಾಜ್ ಮಾಡಿ ಕಿರಿಕಿರಿ; 200ಕ್ಕೂ ಅಧಿಕ ಮಂದಿ ವಿರುದ್ಧ ಕೇಸ್

click me!