ಬಿಜೆಪಿ ಸರ್ಕಾರದಿಂದ ಜನರ ಜೀವನದ ಜೊತೆ ಚೆಲ್ಲಾಟ: ಆರ್‌.ಧ್ರುವನಾರಾಯಣ್‌

By Govindaraj SFirst Published Aug 29, 2022, 10:58 PM IST
Highlights

ಬಿಜೆಪಿ ಸರ್ಕಾರ ದೇಶದ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಹಿಂದೆ ಸಂಕಷ್ಟದಿಂದ ಮುಕ್ತಿ ಹೊಂದಿದ ಜನತೆ ಕಷ್ಟದಲ್ಲಿರುವಾಗ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ತಿಳಿಸಿದರು.

ಸರಗೂರು (ಆ.29): ಬಿಜೆಪಿ ಸರ್ಕಾರ ದೇಶದ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಹಿಂದೆ ಸಂಕಷ್ಟದಿಂದ ಮುಕ್ತಿ ಹೊಂದಿದ ಜನತೆ ಕಷ್ಟದಲ್ಲಿರುವಾಗ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ತಿಳಿಸಿದರು. ತಾಲೂಕಿನ ಕಾಂಗ್ರೆಸ್‌ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸಂತೆಮಾಳದ ಸಂತೆ ಮಾಸ್ತಮ್ಮ ದೇವಸ್ಥಾನದ ಹತ್ತಿರ ಗುರುವಾರ ಆಯೋಜಿಸಿದ್ದ ಸ್ವಾತಂತ್ರ್ಯನಡಿಗೆ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾಲೂಕಿಗೆ ಹೆಚ್ಚಿನ ಅನುದಾನ ನೀಡಿದೆ. 

ಹಾಗೂ ಸರಗೂರನ್ನು ತಾಲೂಕಾಗಿ ಮಾಡಿದ್ದರು ಇವರ ಸರ್ಕಾರದಲ್ಲಿ ತಾರತಮ್ಯ ಅಂದರೆ ಕಾಂಗ್ರೆಸ್‌ ಶಾಸಕ ಇರುವುದರಿಂದ ಬಿಜೆಪಿಯವರು ಹೆಚ್ಚಿನ ಅನುದಾನ ನೀಡುತ್ತಿಲ್ಲ ಎಂದರು. ಅದೇ ಇವರ ಪಕ್ಷದ ಶಾಸಕರಾದರೆ ಹೆಚ್ಚಿನ ಅನುದಾನ ನೀಡುತ್ತಾರೆ. ಬಿಜೆಪಿ ಸರ್ಕಾರ ಬಂದಿದ್ದು ಮೂರು ಕಚೇರಿ ಬಿಟ್ಟರೆ ಇನ್ಯಾವುದೇ ಇಲಾಖಾ ಕಚೇರಿಗಳು ಬಂದಿಲ್ಲ. ಸರಗೂರು ಪಟ್ಟಣದಲ್ಲಿ ಬಿಜೆಪಿ ಸರ್ಕಾರದವರದೇ ಆಡಳಿತ ಇರುವಾಗ ಇವರು ಇನ್ನು ಏಕೆ ಮಾಡಿಲ್ಲ. ಇದು ತಾರತಮ್ಯವಲ್ಲ? ಹಿಂದೆ ನಮ್ಮ ಮುಖ್ಯಮಂತ್ರಿಗಳು ಎಲ್ಲಾ ಭಾಗ್ಯವನ್ನು ಮಾಡಿದ್ದಾರೆ. ಇವರು ಏನು ಮಾಡಿದ್ದಾರೆ ಹಾಗೂ ಬಿಜೆಪಿ ಸರ್ಕಾರ ಜೆಡಿಎಸ್‌ಗೆ ಸಾಥ್‌ ನೀಡುತ್ತಿದೆ ಎಂದು ಅವರು ಹೇಳಿದರು. 

ಮುರುಘಾ ಶರಣರ ವಿರುದ್ಧದ ಷಡ್ಯಂತ್ರ ತನಿಖೆಯಾಗಲಿ: ಪುಟ್ಟಸಿದ್ದಶೆಟ್ಟಿ

ಇಂದಿರಾಗಾಂಧಿ ಅವರು ಉಳುವವನಿಗೆ ಭೂಮಿಯನ್ನು ಮಾಡಿಕೊಟ್ಟವರು. ಕಾಂಗ್ರೆಸ್‌ ಪಕ್ಷ ಕಳೆದ 54 ವರ್ಷ ಸುಭದ್ರ ಸರ್ಕಾರ ನೀಡಿದೆ, ಬಿಜೆಪಿ ಕೊಟ್ಟಆಶ್ವಾಸನೆ ನೀಡಿದ ಯಾವುದೇ ಕಾರ್ಯಕ್ರಮಗಳನ್ನು ಒಂದು ಮಾಡಿಲ್ಲ, ವಿದೇಶದಲ್ಲಿ ಇರುವ ಕಪ್ಪು ಹಣವನ್ನು ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ತರುತ್ತೇನೆ. ರೈತರು ಬೆಳೆದ ಬೆಳೆಗೆ ದುಪ್ಪಟ್ಟು ಹಣ ನೀಡುತ್ತೇವೆ ಎಂದಿದ್ದರೂ ಈ ತನಕ ಯಾವುದೇ ಆಶ್ವಾಸನೆ ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದರು. 30 ವರ್ಷಗಳ ಹೋರಾಟದ ಫಲವಾಗಿ ಇಂದು ಸರಗೂರು ತಾಲೂಕು ಕೇಂದ್ರ ಆಗಲು ಸಿದ್ದರಾಮಯ್ಯ ಕಾರಣ. 

ಈಗ ಇರುವ ಬಿಜೆಪಿ ಸರ್ಕಾರ ಈ ತಾಲೂಕಿಗೆ ಯಾವುದೇ ಅನುದಾನ ನೀಡದೆ ಮಲತಾಯಿ ಧೋರಣೆ ಮಾಡುತ್ತಿದೆ. ಈ ಸರ್ಕಾರದ ವೈಪಲ್ಯವನ್ನು ಎತ್ತಿ ಹಿಡಿಯಬೇಕು ಎಂದರು. ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಮಾಜಿ ಸಂಸದರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ನಾರಾಯಣ್‌ ಅವರು ನನ್ನ ತನ್ನ ತಂದೆ ಜೊತೆಗೂಡಿ ಈ ಕ್ಷೇತ್ರಕ್ಕೆ ಹೆಚ್ಚಿನ ಕೆಲಸ ಮಾಡಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟುಅನುದಾನ ಬಳಸಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಅವರನ್ನು ಮತ್ತೆ ಗೆಲ್ಲಿಸುವಂತೆ ಅವರು ಹೇಳಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ಸರಗೂರು, ಕೋಟೆ ಬ್ಲಾಕ್‌ ಅಧ್ಯಕ್ಷರಾದ ಮನುಗನಹಳ್ಳಿ ಮಾದಪ್ಪ, ಕೋಟೆ ಏಜಾಜ್‌ ಪಾಷ, ಕ್ಷೇತ್ರದ ಉಸ್ತುವಾರಿ ಕಾವೇರಪ್ಪ, ಕಾಂಗ್ರೆಸ್‌ ಯೂತ್‌ ಅಧ್ಯಕ್ಷ ಶಿವರಾಜ, ವಾಲ್ಮೀಕಿ ಸಹಕಾರ ಸಂಘದ ಅಧ್ಯಕ್ಷ ಕೆ. ಚಿಕ್ಕವೀರನಾಯಕ, ಎಸ್‌.ಎಸ್‌. ಪ್ರಭುಸ್ವಾಮಿ, ಮುಖಂಡ ಪಿ. ರವಿ, ಬಿಸಿ ಬಸಪ್ಪ, ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಮಂಜುನಾಥ್‌, ಸರಗೂರು ಪಪಂ ಸದಸ್ಯರಾದ ಶ್ರೀನಿವಾಸ್‌, ಚೆಲುವಕೃಷ್ಣ, ಎಚ್‌.ಸಿ. ನರಸಿಂಹಮೂರ್ತಿ, ಸತೀಶ್‌ಗೌಡ, ರಂಗನಾಥ್‌, ಮಹೇಶ, ಶೇಷ, ಸೂಹೆಲ್, ಶುಬಾನ್‌, ಚಾಮರಾಜ್, ಭಾಗ್ಯ ಲಿಂಗರಾಜ್, ಮಾಜಿ ಸದಸ್ಯರಮೇಶ್‌ ಮೊದಲಾದವರು ಇದ್ದರು. ಶಾಸಕ ಡಾ. ಯತೀಂದ್ರ, ವಿಧಾನ ಪರಿಷತ್‌ ಸದಸ್ಯ ಡಿ. ತಿಮ್ಮಯ್ಯ ಮಾತನಾಡಿದರು.

ಪಾದಯಾತ್ರೆ: ಕಾಂಗ್ರೆಸ್‌ನ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ಕೆಪಿಸಿಸಿ ಕಾರ್ಯಧ್ಯಕ್ಷ ಆರ್‌. ಧ್ರುವನಾರಾಯಣ್‌ ನೇತೃತ್ವದಲ್ಲಿ ನಡೆಯಿತು. ಕೋಟೆಯಿಂದ ಹೊರಟು ಸರಗೂರಿಗೆ ಸಂಜೆ 5.30ಕ್ಕೆ ತಲುಪಿತು. ಪಾದಯಾತ್ರೆಯು ಬಸ್‌ ನಿಲ್ದಾಣದ ಬಳಿ ಆಗಮಿಸಿದಾಗ ಸರಗೂರು ಕಾಂಗ್ರೆಸ್‌ ಕಾರ್ಯಕರ್ತರು ಮಾಜಿ ಸಂಸದ ಆರ್‌. ಧ್ರುವನಾರಾಯಣ, ಶಾಸಕ ಅನಿಲ್‌ ಚಿಕ್ಕಮಾದು, ಯತೀಂದ್ರ, ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌ ಅವರನ್ನು ಬಾರಿ ಗಾತ್ರದ ಹೂಮಾಲೆಯನ್ನು ಕ್ರೇನ್‌ ಮೂಲಕ ಹಾಕಿಸಿ ಗೌರವಿಸಿದರು. 

ಮನಸ್ತಾಪ ಏಕಾಯ್ತು ಎಂಬ ಬಗ್ಗೆ ದೇವೇಗೌಡರೊಂದಿಗೆ ಚರ್ಚೆ: ಜಿಟಿಡಿ

ಈ ಸಂದರ್ಭದಲ್ಲಿ ಯೂತ್‌ ಅಧ್ಯಕ್ಷ ಶಿವರಾಜು, ಪಪಂ ಸದಸ್ಯ ಶ್ರೀನಿವಾಸ್‌ ಮೊದಲಾದವರು ಇದ್ದರು. ಡೋಲು ತಮಟೆ ನಗಾರಿ ವಾದ್ಯದ ಮೂಲಕ ಸ್ವಾತಂತ್ರ್ಯದ ಬಗ್ಗೆ ಚಿತ್ರಗಳ ಮಾಹಿತಿಗಳನೊತ್ತ ವಾಹನವು ಮಹಾವೀರ ವೃತ್ತ, ಚಿಕ್ಕದೇವಮ್ಮ ವೃತ್ತ, ಬಸವೇಶ್ವರ ವೃತ್ತದ ಮೂಲಕ ಮೊದಲನೇ ಮುಖ್ಯ ರಸ್ತೆ ಮಾರ್ಗವಾಗಿ ಸಂತೆ ಮಾಳದ ಮಾಸ್ತಮ್ಮನವರ ದೇವಸ್ಥಾನ ತಲುಪಿತು.

click me!